Webdunia - Bharat's app for daily news and videos

Install App

ಕುಮಾರಸ್ವಾಮಿ ಪಾರ್ಟಿ ತೆಕ್ಕೆಗೆ ಪೂಜಾ ಗಾಂಧಿ!

Webdunia
WD


ರಾಜಕಾರಣಿಗಳು ಮತ್ತು ಸಿನಿ ತಾರೆಗಳ ಸಂಬಂಧ ಯಾವತ್ತೂ ರಂಗು ರಂಗು. ಗಾಸಿಪ್ಪಿನ ಪುಟಗಳಲ್ಲಿ ಅವರ ಸುದ್ದಿಗಳಿಗೆ ಮೊದಲ ಆದ್ಯತೆ. ಸ್ವತಃ ಪೂಜಾ ಗಾಂಧಿಯೇ ಇದಕ್ಕೆಲ್ಲ ಆಹಾರವಾದವರು. ಆದರೆ ಈಗ ಸುದ್ದಿಯಾಗಿರುವುದು ಆ ಕಾರಣಗಳಿಗಲ್ಲ, ಮೊನ್ನೆಯಷ್ಟೇ ಬೆತ್ತಲೆ ಬೆನ್ನಿನ ದರ್ಶನ ಮಾಡಿಸಿದ್ದ ಮಳೆ ಹುಡುಗಿಯೀಗ ಜಾತ್ಯತೀತ ಜನತಾದಳ ಸೇರುತ್ತಿದ್ದಾರಂತೆ!

WD


ಹೌದು, ಗುರುವಾರ ಅವರು ಇದ್ದಕ್ಕಿದ್ದಂತೆ ಕುಮಾರಣ್ಣನ ಕಚೇರಿಯಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಹುಟ್ಟಿಸಿದರು. ಅವರ ಜತೆಗಿದ್ದವರು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರೆಡ್ಡಿ. ತಾನು ಬಂದಿರುವುದೇತಕ್ಕೆ ಅನ್ನೋದನ್ನು ಪೂಜಾ ಗಾಂಧಿ ಹೇಳಿಲ್ಲವಾದರೂ, ರಾಜಕೀಯ ಪಕ್ಷದ ಕಚೇರಿಯೊಂದಕ್ಕೆ ಬರಲು ಬೇರೇನಿದೆ ಕಾರಣ ಅಂತ ಯಾರಾದರೂ ಪ್ರಶ್ನಿಸಬಹುದು.

ಇದಕ್ಕೆ ಉತ್ತರವೆಂಬಂತೆ ಜ್ಯೋತಿ ರೆಡ್ಡಿ ಅರೆಬರೆ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ, ಪೂಜಾ ಜೆಡಿಎಸ್ ಸೇರುವುದು ಖಚಿತ. ಯಾವಾಗ ಅನ್ನೋದು ಮಾತ್ರ ಈಗ ಉಳಿದಿರುವ ಪ್ರಶ್ನೆ.

PR


ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ನಾಯಕತ್ವ ಮತ್ತು ಪಕ್ಷದ ನಿಲುವುಗಳನ್ನು ಮೆಚ್ಚಿ ಅವರು ಜೆಡಿಎಸ್‌ನತ್ತ ಒಲವು ತೋರಿಸಿದ್ದಾರೆ. ಸಂಕ್ರಾಂತಿ ಆಸುಪಾಸಿನಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರು ಇನ್ನೊಬ್ಬ ಸ್ಟಾರ್ ಪ್ರಚಾರಕಿ ಅಂತ ಪಕ್ಷದ ಮೂಲಗಳು ಹೇಳಿಕೊಂಡಿವೆ.

ಶಾಸಕ ಜಮೀರ್ ಅಹಮ್ಮದ್ ಸೇರಿದಂತೆ ಹಲವರ ನಿಕಟವರ್ತಿಯಾಗಿರುವ ಪೂಜಾ ಗಾಂಧಿ ತಾನು ಜೆಡಿಎಸ್ ಸೇರ್ಪಡೆಯಾಗುವ ದಿನವನ್ನು ಶೀಘ್ರದಲ್ಲೇ ಘೋಷಣೆ ಮಾಡಲಿದ್ದಾರಂತೆ.

PR


ಅತ್ತ ರಮ್ಯಾ ಕಾಂಗ್ರೆಸ್ ಸೇರಿ ತನ್ನ ವಾರ್ಡಿನಲ್ಲಿ ಏನೇನೋ ಮಾಡುತ್ತಿದ್ದಾರೆ. ವೆಬ್‌ಸೈಟ್ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬಹುದು ಅಂತ ತೋರಿಸಿ ಕೊಡುತ್ತಿದ್ದಾರೆ. ಇನ್ನು ಜೆಡಿಎಸ್ ಸೇರ್ಪಡೆಯಾಗಿ ತೆನೆ ಹೊತ್ತ ಮಹಿಳೆಯಾಗಲಿರುವ ಪೂಜಾ ಗಾಂಧಿ ಏನು ಮಾಡಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments