Select Your Language

Notifications

webdunia
webdunia
webdunia
webdunia

ನಿನ್ನಿಂದ ಏನೂ ಕಿತ್ತುಕ್ಕೊಳ್ಳಕ್ಕಾಗಲ್ಲ ಅಂದ್ರೆ ಏನು ಅರ್ಥ ಗೊತ್ತೇನು?

ನಿನ್ನಿಂದ ಏನೂ ಕಿತ್ತುಕ್ಕೊಳ್ಳಕ್ಕಾಗಲ್ಲ ಅಂದ್ರೆ ಏನು ಅರ್ಥ ಗೊತ್ತೇನು?
SUJENDRA
ಹೋಗಲೇ ನಿನ್ನಿಂದ ಏನೂ ಕಿತ್ತುಕೊಳ್ಳಕ್ಕಾಗಲ್ಲ ಎಂದು ಆವೇಶದಿಂದ ಹೇಳುವುದನ್ನು ಸಾಮಾನ್ಯವಾಗಿ ಸಣ್ಣ ಪುಟ್ಟ ಗಲಾಟೆಗಳಲ್ಲಿ ಕೇಳಿರುತ್ತೀರಿ. ಆದರೆ ಅದರ ನಿಜ ಅರ್ಥ ಹೆಚ್ಚಾಗಿ ಅಶ್ಲೀಲ ಪದವನ್ನು ಸೂಚಿಸುತ್ತಿರುತ್ತದೆ. ಹೇಳಲೂ ಅಸಹ್ಯ ಅನಿಸುತ್ತಿರುತ್ತದೆ. ಆದರೆ ಇದೇ ಮಾತನ್ನು ನಟಿ ರಿಷಿಕಾ ಸಿಂಗ್ ಇತ್ತೀಚೆಗೆ ಹೇಳಿದರ ಅರ್ಥ ಮಾತ್ರ ಬೇರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಂಕ್ಷಿಪ್ತ ವಿವ
ನಟಿ ರಿಷಿಕಾ ಸಿಂಗ್ ಅವರ 'ಯಾರಾದ್ರೆ ನನಗೇನು' ಎಂಬ ಪೋಸ್ಟರ್ ಈ ಸಣ್ಣ ವಿವಾದದ ಕೇಂದ್ರ ಬಿಂದು. ಇದರಲ್ಲಿ ನಟಿ ರಿಷಿಕಾ ಸಿಂಗ್ ಬಿಗಿಯಾದ ಉಡುಗೆ ತೊಟ್ಟಿರುವಂತಿದೆ. ಜತೆಗೆ ಬಿರುಕು ಬಿಟ್ಟ ಬರಡು ಭೂಮಿಯಂತೆ ದೇಹವನ್ನು ಅಲಂಕರಿಸಿದಂತಿದೆ. ಒಟ್ಟಾರೆ ಈ ಚಿತ್ರಕ್ಕೆ ಮತ್ತಷ್ಟು ಮಾದಕತೆ ತುಂಬಲು ಗ್ರಾಫಿಕ್ಸ್ ಕೈಚಲಕ ಮಾಡಿರುವಂತಿದೆ.

ಒಮ್ಮೆಲೆ ನೋಡಿದರೆ ನಗ್ನ ದೇಹಕ್ಕೆ ಹಸಿ ಮಣ್ಣನ್ನು ಮೆತ್ತಿಕೊಂಡು ಸ್ವಲ್ಪ ಸಮಯ ಬಿಸಿಲಲ್ಲಿ ಹಾಯಾಗಿ ಓಣಗಿ ಬಂದಂತೆ ಗೋಚರಿಸುತ್ತದೆ. ಮೈ ಬಿಸಿ ಮತ್ತು ಸೂರ್ಯನ ಶಾಖದಿಂದ ಹಸಿ ಮಣ್ಣು ಒಣಗಿ ಬಿರುಕು ಬಿಟ್ಟಿರುವಂತೆ ಕಾಣಿಸುವುದು ಥಟ್ಟನೆ ನೋಡಿದರೆ ಮಾದಕವಾಗಿ ಕಾಣುವುದರಲ್ಲಿ ಎರಡು ಮಾತಿಲ್ಲ. ಹಾಗೂ ಹಾಗೆ ಕಾಣಲೆಂದೇ ಈ ರೀತಿಯ ಅಲಂಕಾರ ಮಾಡಿರುವುದು ಎಂಬುದಂತೂ ಸ್ಪಷ್ಟ.

ಬಣ್ಣ ಮೆತ್ತಿಕೊಂಡ ಯುವತಿಯ ನಗ್ನ ಚಿತ್ರದಂತೆ ಕಾಣುವ ರಿಷಿಕಾ ಸಿಂಗ್ ಅವರ ಈ ಪೋಸ್ಟರ್ ಕೆಳಗೆ 'ಯಾರಾದರೂ ನನಗೇನು' ಎಂದು ಬರೆಯಲಾಗಿದೆ.

ಈ ಪೋಸ್ಟರ್ ಪೋಲಿ ಅರ್ಥವನ್ನು ಸೂಚಿಸುತ್ತದೆ ಎಂಬುದು ಮಹಿಳಾ ಸಂಘದ ಮುಖಂಡರೊಬ್ಬರ ವಾದ. ಒಂದು ಹೆಣ್ಣು ಬೆತ್ತಲಾಗಿ ಕಾಣುವಂತಾ ಪೋಸ್ಟರಿನಲ್ಲಿ 'ಯಾರಾದರೂ ನನಗೇನು' ಎಂದು ಫೋಸು ಕೊಟ್ಟರೆ ಅದರ ನೈಜ ಅರ್ಥವಾದರೂ ಏನು ಎಂಬುದು ವಿರೋಧ ವ್ಯಕ್ತಪಡಿಸುತ್ತಿರುವ ಮಹಿಳಾ ಸಂಘದವರ ಪ್ರಶ್ನೆ.

ವಯಸ್ಸಾದ ಮುದುಕನಾದರೂ ಸರಿ ಅಥವಾ ಯುವಕನಾದರೂ ಸರಿ ಎಂಬ ಅರ್ಥವನ್ನು ಈ ಪೋಸ್ಟರ್ ಸೂಚಿಸುವಂತಿದೆ ಎಂಬುದು ಮಹಿಳಾ ಮುಖಂಡರ ವಾದದ ಸವಿವರ. ಜತೆಗೆ ಬಿರುಕು ಬಿಟ್ಟ ಬರಡು ಭೂಮಿಗೆ ನೀರು ಹಾಕಿದರೆ ಫಸಲು ಪಡೆಯಬಹುದು. ಅದೇ ರೀತಿ ಇಲ್ಲಿ ಬಿರುಕು ಬಿಟ್ಟ ಹೆಣ್ಣಿನ ದೇಹದ ಚಿತ್ರದ ಹಿಂದೆಯೂ ಇದೇ ರೀತಿಯ ಅರ್ಥ ಸೂಚಿಸುವಂತಿದ್ದು, ಕಾಮ ಪ್ರಚೋದನೆಯನ್ನು ಒಳಗೊಂಡಿದೆ.

ಆದ್ದರಿಂದ ಒಂದು ಹೆಣ್ಣು ಸಮಾಜಕ್ಕೆ ಕಾಮಪ್ರಚೋದನೆಯನ್ನು ನೀಡುವಂತಹಾ ಅಶ್ಲೀಲ ಪೋಸ್ಟರುಗಳನ್ನು ಒಂದು ಹೆಣ್ಣಾಗಿ ನೀಡುವುದು ಸರಿನಾ? ಈ ರೀತಿಯ ವೇಷದಲ್ಲಿ ಸಮಾಜಕ್ಕೆ ಅದೇನು ಉತ್ತಮ ಸಂದೇಶ ನೀಡಲು ಹೊರಟಿದ್ದೀರಾ ಎಂಬುದು ಅವರ ನೇರ ಪ್ರಶ್ನೆ?

ಹಾಗೂ ಇದರ ವಿರುದ್ದ ಕಾನೂನು ಮೊರೆ ಹೋಗುವುದಾಗಿ ಕೂಡ ಅವರ ಹೇಳಿಕೆ.

ನಟಿ ರಿಷಿಕಾ ಸಿಂಗ್ ಹೇಳಿರುವಂತೆ ಇದು ಕ್ರಿಯಾಶೀಲತೆಯನ್ನು ಒಳಗೊಂಡ ಪೋಸ್ಟರ್ ಹೊರತು ಅದು ಅಶ್ಲೀಲತೆಯಲ್ಲ. ಚಿತ್ರದ ಸನ್ನಿವೇಷಕ್ಕೆ ತಕ್ಕಂತಾ ಪಾತ್ರಕ್ಕೆ ಇಂತಹಾ ದೃಶ್ಯಗಳ ಅವಶ್ಯಕತೆ ಕಂಡಿತವಾಗಿಯೂ ಇದೆ.

ನೊಂದು ಬೆಂದ ಒಂದು ಹೆಣ್ಣಿನ ಪರಿಸ್ಥಿತಿಯನ್ನು ಈ ಪೋಸ್ಟರ್ ಸೂಚಿಸುತ್ತದೆ. ಹಾಗಾಗಿ ಅಲ್ಲಿ ನೈಜತೆಯನ್ನು ತೋರಿಸಲು ಇಂತಹಾ ಐಡಿಯಾಗಳನ್ನು ಮಾಡಬೇಕಿರುತ್ತದೆ. ನೀವು ಕಾಮಪ್ರಚೋದನೆ ನೀಡುತ್ತದೆ ಎಂದುಕೊಳ್ಳುವುದಾದರೆ ನಿಮ್ಮ ದೃಷಿಕೋನ ಕೀಳುಮಟ್ಟದ್ದಾಗಿದೆ. ನಮಗೆ ಹಾಗೆ ಅನಿಸುವುದಿಲ್ಲ.

ಹಾಗೂ ಯಾರೂ ಹಸಿ ಮಣ್ಣನ್ನು ಬರಿ ಮೈಗೆ ಮೆತ್ತಿಕೊಂಡು ನಗ್ನವಾಗಿ ನಟಿಸಲು ಒಪ್ಪುವುದಿಲ್ಲ. ಹಾಗೂ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ನಗ್ನವಾಗಿರುವಂತೆ ಕಾಣಲು ಯತ್ನಿಸುವ ಪ್ರಯೋಗಗಳು ಚಿತ್ರರಂಗದಲ್ಲಿ ನಡೆಯುತ್ತದೆ ಎಂಬುದು ರಿಷಿಕಾ ಸಿಂಗ್ ಸ್ಪಷ್ಟನೆ.

ಹಾಗಾಗಿ ನೀವು ಕಾನೂನು ಮೊರೆ ಹೋಗುವುದಾದರೆ ಹೋಗಿ, ನಾವೂ ಕಾನೂನು ಮೊರೆ ಹೋಗುತ್ತೇವೆ. ನಿಮ್ಮಿಂದ ಏನೂ ಕಿತ್ತುಕ್ಕೊಳ್ಳಕ್ಕಾಗಲ್ಲ ಎಂಬುದು ರಿಷಿಕಾ ಸಿಂಗ್ ಅವರ ಕಟು ವಾದ.

ಒಮ್ಮೆಲೇ ತಲೆಕೆಡಿಸಿಕೊಂಡ ಮಹಿಳಾ ಸಂಘದ ಮುಖಂಡರು, ಏನಮ್ಮಾ ಸಮಾಜಕ್ಕೆ ಸಂದೇಶ ಸಾರುವ ಒಂದು ಚಿತ್ರನಟಿಯಾಗಿ ಏನೂ ಕಿತ್ತುಕೊಳ್ಳಕ್ಕಾಗಲ್ಲ ಎಂಬ ಕೀಳು ಭಾಷೆಯನ್ನು ಬಳಸುತ್ತಿದ್ದೀಯಾ. ನಮ್ಮ ಹಳೆಯ ಚಿತ್ರರಂಗದ ನಟಿಯರ ನಟನೆ, ವರ್ತನೆ ನೋಡಿದರೆ ಕೈ ಮುಗಿಬೇಕು ಅನಿಸುತ್ತದೆ ಎಂದು ಬಿಟ್ಟರು.

ತಕ್ಷಣ ಪ್ರತಿಕ್ರಿಯಿಸಿದ ರಿಷಿಕಾ ಸಿಂಗ್ ನೀವಂದು ಕೊಂಡಂತೆ ಇಲ್ಲಿ ತಪ್ಪು ಅರ್ಥವಿಲ್ಲ. 'ನಿಮ್ಮಿಂದ ಏನೂ ಕಿತ್ತುಕ್ಕೊಳ್ಳಕ್ಕಾಗಲ್ಲ' ಅಂದರೆ, ಚಲನ ಚಿತ್ರ ಬಿಡುಗಡೆಯಾಗುವುದನ್ನು ನಿಮ್ಮಿಂದ ತಡೆಯಲಾಗುವುದಿಲ್ಲ ಎಂದು ವಿವರಿಸಿದರು.

ಯಾವುದೋ ಪದಕ್ಕೆ ಯಾವುದೋ ಅರ್ಥವಿರಬಹುದು. ಅರ್ಥ ಮಾಡಿಕೊಳ್ಳುವುದೇ ಗೊಂದಲ. ನೀವು ಏನು ಅಂದುಕೊಳ್ಳುತ್ತೀರಾ ಎಂಬುದನ್ನು ವಿಭಿನ್ನ ದೃಷ್ಟಿಕೋನದಿಂದ ಮುಕ್ತವಾಗಿ ಚರ್ಚಿಸಿ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada