Select Your Language

Notifications

webdunia
webdunia
webdunia
webdunia

ಅತಿಥಿ ಪಾತ್ರದಲ್ಲಾದ್ರೂ ನಟಿಸಬೇಕೆಂಬುದೇ ನನ್ನ ಗುರಿ; ಅನುಷ್ಕಾ (ವೀಡಿಯೊ)

ಅತಿಥಿ ಪಾತ್ರದಲ್ಲಾದ್ರೂ ನಟಿಸಬೇಕೆಂಬುದೇ ನನ್ನ ಗುರಿ; ಅನುಷ್ಕಾ (ವೀಡಿಯೊ)
ಕೃಪೆ: ಅರ್ಪಿತಾ ಚಾವ್ಲಾ 88
ಮುಂದಿನ ವರ್ಷ ಕನಿಷ್ಠ ಪಕ್ಷ ಅತಿಥಿ ಪಾತ್ರದಲ್ಲಾದ್ರೂ ನಟಿಸಬೇಕೆಂಬುದೇ ನನ್ನ ಗುರಿ ಎಂದು ಉಸುರಿದ್ದಾರೆ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ. ಸದ್ಯಕ್ಕೆ ಡೇಟ್ ಸಮಸ್ಯೆ ಇರುವುದರಿಂದ ಎಲ್ಲರ ಚಿತ್ರಗಳನ್ನು ಒಪ್ಪಿಕೊಂಡು ಅಲ್ಲೊಂದು ಕಾಲು, ಇಲ್ಲೊಂದು ಕಾಲು ಇಡುವ ವ್ಯವಹಾರ ನಮ್ಮದಲ್ಲ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಏನಿದ್ದರೂ ಒಂದು ಚಿತ್ರಕ್ಕೆ ಒಪ್ಪಿದ ಮೇಲೆ ಆ ಚಿತ್ರವನ್ನು ಕೊಟ್ಟಮಾತಿನಂತೆ ಪೂರ್ಣಗೊಳಿಸಿದ ನಂತರವೇ ಮುಂದಿನ ನಿರ್ಧಾರ ಎಂಬುದು ಅನುಷ್ಕಾ ಖಡಕ್ ಮಾತು. ಹೆಚ್ಚೆಚ್ಚು ಚಿತ್ರಗಳನ್ನು ತಲೆ ಮೇಲೆ ಎಳೆದುಕೊಂಡು ಆನಂತರ ಯಾರ ಕೈಗೂ ಸಿಗದೆ ನಿರ್ದೇಶಕ, ನಿರ್ಮಾಪಕರಿಗೆ ತಲೆನೋವು ಕೊಡುವ ಜಾಯಮಾನ ಅನುಷ್ಕಾಗಿಲ್ಲವಂತೆ.

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಅನುಷ್ಕಾ ಶೆಟ್ಟಿ ಕನ್ನಡತಿಯಾಗಿ ಕನ್ನಡ ಚಿತ್ರವೊಂದರಲ್ಲೂ ನಟಿಸಿಲ್ಲವಲ್ಲಾ ಎಂದು ಗಾಂಧಿನಗರದ ಕೆಲವರು ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುತ್ತಾ ಇದ್ದಿದ್ದರಿಂದ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ನಟಿಯರು ಅವಕಾಶ ಕೇಳಿ ಬಂದಾಗ ಕಡ್ಡಿ ಮುರಿದಂತೆ ನಿರಾಕರಿಸಿಬಿಡುವುದು. ಆನಂತರ ಅವರು ಪರಭಾಷಾ ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಾಗ ಅವರ ಬಳಿ ಹೋಗಿ ಕಾಲ್‌ಶೀಟ್‌ಗಾಗಿ ಕಾಯುವುದು ಗಾಂಧಿನಗರದ ಹೊಸ ಬೆಳವಣಿಗೆಯೇನಲ್ಲ ಬಿಡಿ.

ಗೆದ್ದ ಕುದುರೆಯ ಹಿಂದೆ ಓಡುವುದಕ್ಕಿಂತ ಬಿದ್ದ ಕುದುರೆಯನ್ನೇ ಎಬ್ಬಿಸಿ ಓಡಿಸುವವನೇ ಛಲಗಾರ ಎನ್ನುತ್ತಿದ್ದಾರೆ ಗಾಂಧಿನಗರದ ಪಂಡಿತರು. ಅದಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ?

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada