Select Your Language

Notifications

webdunia
webdunia
webdunia
webdunia

ಕನ್ನಡದಂತೆ ಮಲಯಾಳಿ ಕೂಡ ಕಲೀತೇನೆ: ಸಂಜನಾ

ಕನ್ನಡದಂತೆ ಮಲಯಾಳಿ ಕೂಡ ಕಲೀತೇನೆ: ಸಂಜನಾ
PR
ನಿನ್ನೆಯಷ್ಟೇ (ಅಕ್ಟೋಬರ್ 10) ಹುಟ್ಟುಹಬ್ಬ ಆಚರಿಸಿಕೊಂಡಿರುವ ಸಂಜನಾ ಜಾಲಿ ಮೂಡಿನಲ್ಲಿದ್ದಾರೆ. ಅತಿರಥ ಮಹಾರಥರ ಜತೆ ನಟಿಸುವ ಅವಕಾಶ ಸಿಕ್ಕಿರುವುದೇ ಇದಕ್ಕಿರುವ ಕಾರಣ. ಅದರಲ್ಲೂ ಮೋಹನ್‌ಲಾಲ್ ಮತ್ತು ಮಮ್ಮೂಟ್ಟಿ ಅಂದರೆ ಕೇಳಬೇಕೇ?

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಂತಹ ಸಂಜನಾ ಪ್ರಸಕ್ತ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿನ ಬ್ಯುಸಿ ನಟಿ. ಆದರೂ ಹುಟ್ಟುಹಬ್ಬದ ದಿನ ಮನೆಯಲ್ಲೇ ಕಾಲ ಕಳೆಯುವ ಅವಕಾಶ ಸಿಕ್ಕಿದ್ದು ಮಾತ್ರ ಅನಿರೀಕ್ಷಿತ ಕಾರಣದಿಂದ. ಈ ಸಂದರ್ಭದಲ್ಲಿ ತನ್ನ ಸಂತಸವನ್ನು ಸಂಜನಾ ಹಂಚಿಕೊಂಡಿದ್ದಾರೆ.

ಮೋಹನ್‌ಲಾಲ್ ನಾಯಕರಾಗಿರುವ 'ಕ್ಯಾಸನೋವಾ', ಮಮ್ಮೂಟ್ಟಿ ಮತ್ತು ಸುರೇಶ್ ಗೋಪಿ ನಾಯಕರಾಗಿರುವ 'ಕಿಂಗ್ ಎಂಡ್ ಕಮೀಷನರ್' ಚಿತ್ರಗಳಲ್ಲಿ ಸಂಜನಾ ನಾಯಕಿ. ಎರಡೂ ಬಿಗ್ ಬಜೆಟ್ ಚಿತ್ರಗಳು. ಇನ್ನು ಕೆಲವು ದಿನಗಳ ಚಿತ್ರೀಕರಣ ಮುಗಿಸಿದರೆ, ಸಂಜನಾ ಹ್ಯಾಪಿ.

ಈ ನಡುವೆ ಮಲಯಾಳಂ ಭಾಷೆ ಕಲಿಯುವುದು ಸಂಜನಾಗೆ ಕೊಂಚ ಕಷ್ಟವೆನಿಸುತ್ತಿದೆ. ಆದರೂ ಕನ್ನಡ, ತೆಲುಗು, ತಮಿಳು ಭಾಷೆಗಳನ್ನು ಕಲಿತಂತೆ ಅದನ್ನೂ ಕಲಿಯುತ್ತೇನೆ ಅನ್ನೋ ಭರವಸೆಯಿದೆ. ಮಲಯಾಳಕ್ಕೆ ನಾನಿಬ್ಬಳೂ ಹೊಸಬಳು. ಹಾಗಾಗಿ ಕೆಲವೇ ಸಮಯದಲ್ಲಿ ಅದಕ್ಕೆ ಹೊಂದಿಕೊಳ್ಳುತ್ತೇನೆ ಎಂದಿದ್ದಾರೆ.

ತಿಲಕ್ ನಾಯಕರಾಗಿರುವ ಗಂಡ-ಹೆಂಡತಿಯ ಮೂಲಕ ಕುಖ್ಯಾತಿ ಗಳಿಸಿದ ಸಂಜನಾ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಮೈಲಾರಿ'ಯಲ್ಲಿ ಜನಪ್ರಿಯರಾಗಿದ್ದರು. ಈಗ ಅವರಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಎರಡೆರಡು ಚಿತ್ರಗಳಿವೆ. ಒಂದು ರವಿಚಂದ್ರನ್ ಜತೆಗಿನ ನರಸಿಂಹ, ಇನ್ನೊಂದು ತರುಣ್ ಚಂದ್ರ ನಾಯಕರಾಗಿರುವ ಒಂದು ಕ್ಷಣದಲ್ಲಿ. ಪ್ರಜ್ವಲ್ ಜತೆಗಿನ ಸಾಗರ್, ಇನ್ನೊಂದು ತಾರೆ ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ.

ಅತ್ತ ತೆಲುಗಿನಲ್ಲೂ ಅವಕಾಶಗಳು ಬೆನ್ನತ್ತುತ್ತಿವೆ. ನಾಲ್ಕೈದು ಚಿತ್ರಗಳಲ್ಲಿ ಈಗಾಗಲೇ ಸಂಜನಾ ನಟಿಸಿದ್ದಾರೆ.

ಇದು ಸಹಜವಾಗಿಯೇ ಸಂಜನಾರಲ್ಲಿ ಖುಷಿ ತಂದಿದೆ. "ನಾನೀಗ ಮೂರು ಚಿತ್ರರಂಗಗಳಲ್ಲಿ ಬ್ಯುಸಿ. ಈ ವರ್ಷಾಂತ್ಯದೊಳಗೆ ಒಟ್ಟು ನನ್ನ ಎಂಟು ಚಿತ್ರಗಳು ಬಿಡುಗಡೆಯಾಗಲಿವೆ. ಬಹುತೇಕ ಚಿತ್ರಗಳಲ್ಲಿ ದೊಡ್ಡ ಸ್ಟಾರುಗಳಿಗೆ ಜೋಡಿಯಾಗಿದ್ದೇನೆ. ಹಾಗಾಗಿ ನನ್ನ ಚಿತ್ರಜೀವನದಲ್ಲಿ 2011 ಮರೆಯಲಾಗದ ವರ್ಷ. ಇನ್ನಷ್ಟು ಮುಂದಕ್ಕೆ ಹೋಗಬೇಕು, ಮುನ್ನುಗ್ಗಬೇಕು, ನಟಿಯಾಗಿ ಪ್ರಬುದ್ಧೆಯಾಗಬೇಕು ಅನ್ನೋದು ಕನಸು" ಅಂತ ಹೇಳಿಕೊಂಡಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada