Webdunia - Bharat's app for daily news and videos

Install App

'ಪರಮಾತ್ಮ' ಆಯ್ತು, ಇನ್ನೇನಿದ್ರೂ 'ಅಣ್ಣಾ ಬಾಂಡ್'

Webdunia
PR
ಯೋಗರಾಜ್ ಭಟ್ ನಿರ್ದೇಶನದ 'ಪರಮಾತ್ಮ'ನಿಗೆ ಮುಕ್ತಿ ಕರುಣಿಸಿದ ನಂತರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇನ್ನೊಂದು ಸ್ಟೈಲಿಷ್ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇಬ್ಬಿಬ್ಬರು ಭಲೆ ಭಲೆ ನಾಯಕಿಯರೊಂದಿಗೆ ಮಿಂಚಲಿರುವ ಈ ಚಿತ್ರ ಯಾವುದೆಂದು ನಿಮಗೆ ಗೊತ್ತೇ ಇದೆ. ಅದೇ ಅಣ್ಣಾ ಬಾಂಡ್.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಣ್ಣಾ ಬಾಂಡ್ -- ದುನಿಯಾ ಸೂರಿ ನಿರ್ದೇಶನದ ಐದನೇ ಚಿತ್ರ. 'ಜಾಕಿ'ಯಂತಹ ಸೂಪರ್ ಡ್ಯೂಪರ್ ಹಿಟ್ ಚಿತ್ರ ನಿರ್ಮಿಸಿದ್ದ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಪಕಿ. ಇದರ ಮುಹೂರ್ತ ಶುಕ್ರವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭ ಹಾರೈಸಿದರು.

ಇದು ವರನಟ ಡಾ. ರಾಜ್‌ಕುಮಾರ್ ಕುಟುಂಬ ನಿರ್ಮಿಸುತ್ತಿರುವ 80ನೇ ಸಿನಿಮಾ ಅನ್ನೋದು ವಿಶೇಷ. ಪ್ರತಿಶತ ಆಕ್ಷನ್ ಚಿತ್ರವಾಗಿರುವ 'ಅಣ್ಣಾ ಬಾಂಡ್' ಆಂಗ್ಲ ಭಾಷೆಯ ಬಾಂಡ್ ಚಿತ್ರಗಳಂತೆ ಸೂಪರ್ ಸ್ಟೈಲಿಷ್ ಆಗಿರಲಿದೆ. ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನೂ ನಡೆಸಿರುವ ಸೂರಿಗೆ ಗೆಳೆಯ ಯೋಗರಾಜ್ ಭಟ್ ಕೂಡ ಸಹಕಾರ ನೀಡಿದ್ದಾರಂತೆ. ಕೆಲವು ಹಾಡುಗಳಿಗೆ ಸಾಹಿತ್ಯ ಬರೆದಿರುವ ಭಟ್ಟರು, ಚಿತ್ರಕಥೆಯಲ್ಲೂ ಕೈಯಾಡಿಸಿದ್ದಾರೆ.

ಶುಕ್ರವಾರ ನಡೆದ ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಾಯಕ ಪುನೀತ್, ನಾಯಕಿಯರಾದ ನಿಧಿ ಸುಬ್ಬಯ್ಯ ಮತ್ತು ಪ್ರಿಯಾಮಣಿ ಪಾಲ್ಗೊಂಡಿದ್ದರು. ಉಳಿದಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್, ಶ್ರೀನಗರ ಕಿಟ್ಟಿ, ಸಂತೋಷ್ ರೈ ಪಾತಾಜೆ, ಅವಿನಾಶ್, ಮಾಳವಿಕಾ, ಹರ್ಷಿಕಾ ಪೂಣಚ್ಚ, ಇಮ್ರಾನ್ ಸರ್ದಾರಿಯಾ, ನಾಗಶೇಖರ್, ಗುರುಕಿರಣ್ ಸೇರಿದಂತೆ ಹಲವರು ಚಿತ್ರಯಾತ್ರೆಗೆ ಶುಭ ಹಾರೈಸಿದರು.

ಸೂರಿ ನಿರ್ದೇಶನದಲ್ಲಿ ಪುನೀತ್ ಎರಡನೇ ಚಿತ್ರ. ಮೊದಲ ಚಿತ್ರವೇ ಬಾಕ್ಸಾಫೀಸನ್ನು ಚಿಂದಿ ಉಡಾಯಿಸಿದ್ದರಿಂದ ಜಾಕಿ ಟೀಮ್ ಬದಲಾವಣೆಯಿಲ್ಲ. ಅದೇ ಹರಿಕೃಷ್ಣ ಮತ್ತು ಸತ್ಯ ಹೆಗಡೆ ಇಲ್ಲೂ ಇದ್ದಾರೆ. ರಂಗಾಯಣ ರಘು, ಲೋಕನಾಥ್ ಮತ್ತು ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮುಹೂರ್ತ ಮುಗಿಸಿರುವ ಅಣ್ಣಾ ಬಾಂಡ್ ಶೀಘ್ರದಲ್ಲೇ ಚಿತ್ರೀಕರಣಕ್ಕೆ ತೆರಳಲಿದ್ದಾನೆ. ಈ ನಡುವೆ ಅಣ್ಣಾ ಬಾಂಡ್ ವೀಡಿಯೋ ಟ್ರೇಲರುಗಳನ್ನು ರಾಘವೇಂದ್ರ ರಾಜ್‌ಕುಮಾರ್ ಬಿಡುಗಡೆ ಮಾಡಿ, ಅಭಿಮಾನಿಗಳಲ್ಲಿ ಪುಳಕ ಹುಟ್ಟಿಸಿದ್ದಾರೆ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹೀರಾತು ಕೂಡ ವಿಭಿನ್ನವಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments