ಕರಾವಳಿಯ ಕುವರಿ-ಶಿಲ್ಪಾ ಶೆಟ್ಟಿ

Webdunia
ಗುರುವಾರ, 2 ಆಗಸ್ಟ್ 2007 (17:20 IST)
ಕಳೆದ ಒಂದುವರೆ ದಶಕದಿಂದ ಭಾರತದ ಪಡ್ಡೆ ಹೈದರ ಹೃದಯ ಕದ್ದಿರುವ ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕರ್ನಾಟಕ ರಾಜ್ಯದ ಕರಾವಳಿಯ ಕುವರಿಯೆಂದು ಹೇಳಲು ಹೆಮ್ಮೆ ಎನಿಸುತ್ತದೆ.

ಪ್ರಸಕ್ತ ಸಾಲಿನ ಬಹು ಬೇಡಿಕೆಯ ಮತ್ತು ವಿವಾದಿತ ತಾರೆಯಾಗಿರುವ ಶಿಲ್ಪಾ ಶೆಟ್ಟಿ ಜನಿಸಿದ್ದು ಮಂಗಳೂರು ಸಮೀಪದ ನಿಡ್ಡೊಡಿಯಲ್ಲಿ 1975ರ ಜೂನ್ 8ರಂದು. ಮಂಗಳೂರು ನೆಲದ ಮಣ್ಣಿನ ಪರಿಸರವೇ ಅಂತಹುದು, ದೇಶದ ಎಲ್ಲ ಪ್ರತಿಷ್ಠಿತ ರಂಗಗಳಲ್ಲಿ ಶ್ರೇಷ್ಠ ಪ್ರತಿಭೆಗಳ ಕಾಣಿಕೆ ನೀಡಿರುವ ಈ ನೆಲದಿಂದ ಬಾಲಿವುಡ್‌ನಲ್ಲಿ ಅನೇಕ ತಾರೆಗಳು ಮಿಂಚ ತೊಡಗಿದ್ದಾರೆ.

ದೇಶ ಮತ್ತು ವಿದೇಶದ ಗಮನ ಸೆಳೆದಿರುವ ಮಾಜಿ ವಿಶ್ವಸುಂದರಿ, ಹಾಲಿ ಹಿಂದಿ ಚಿತ್ರ ನಟಿ ಐಶ್ವರ್ಯ್ ಬಚ್ಚನ್, ತಮ್ಮ ಸಾಹಸ ಭರಿತ ಸನ್ನಿವೇಶಗಳ ಮೂಲಕ ಯುವ ಜನತೆಯ ಹೃದಯ ಗೆದ್ದ ಸುನಿಲ್ ಶೆಟ್ಟಿ, ಇದೀಗ ತಾನೆ ಬಾಲಿವುಡ್‌ನಲ್ಲಿ ಕಣ್ಣು ಬಿಡುತ್ತಿರುವ ಶಿಲ್ಪಾಳ ಸಹೋದರಿ ಶೆಮಿತಾ ಶೆಟ್ಟಿ.

ತನ್ನ ಉಜ್ವಲ ಭವಿಷ್ಯವನ್ನು ಬೆಳಗಿಸಿಕೊಳ್ಳುವ ನಿಟ್ಟಿನಲ್ಲಿ ಬಾಲಿವುಡ್‌ನತ್ತ ಮುಖ ಮಾಡಿರುವ ದೀಪಿಕಾ ಪಡುಕೊಣೆಯಂತೆಯೆ 14ವರ್ಷಗಳ ಹಿಂದೆ ಬಾಲಿವುಡ್ ಜಗತ್ತಿಗೆ ಕಾಲಿರಿಸಿದ ಶಿಲ್ಪಾ ಅಂದಿನಿಂದ ಇಂದಿನವರೆಗೆ ಯಶಸ್ಸಿನ ಮೆಟ್ಟಿಲನ್ನು ಏರುತ್ತಲೆ ಇದ್ದಾರೆ.

ಕರಾವಳಿಯ ಕುವರಿ...
ಮಗಳ ಪ್ರತಿಭೆಯನ್ನು ಚಿಕ್ಕಂದಿನಿಂದಲೆ ಗುರುತಿಸಿ ಪ್ರೊತ್ಸಾಹಿಸುತ್ತ ಬಂದವರೆಂದರೆ ತಂದೆ ಸುರೇಂದ್ರ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ.

' ವೆಲ್ ಬಿಗನ್ ಇಸ್ ಹಾಪ್ ಡನ್' ಎನ್ನುವ ಆಂಗ್ಲ ಗಾದೆಯಂತೆಯೆ 1993ರಲ್ಲಿ ಶಾರುಖಾನ್ ಅವರೊಂದಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ 'ಬಾಜಿಗರ್' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿ ಅದ್ಭುತ ಯಶಸ್ಸನ್ನು ಗಳಿಸಿದ ನಂತರ ಶಿಲ್ಪಾ ಶೆಟ್ಟಿ ಮತ್ತೆ ಹಿಂದುರಿಗಿ ನೋಡಿಯೆ ಇಲ್ಲ.

ಮೊದಲ ಚಿತ್ರ 'ಬಾಜಿಗರ್'ನಿಂದ ಯಶಸ್ಸಿನ ಉತ್ತುಂಗಕ್ಕೆರಿದ ಶಿಲ್ಪಾ ಈ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಫಿಲ್ಮಫೆರ್ ಪ್ರಶಸ್ತಿಯನ್ನು ಸಹ ಗಳಿಸಿದ್ದಾರೆ.

ಉತ್ತರ ಮತ್ತು ದಕ್ಷಿಣ ಭಾರತದ ಎಲ್ಲ ಪ್ರಮುಖ ತಾರೆಗಳೊಂದಿಗೆ ಅಭಿನಯಿಸಿರುವ ಶಿಲ್ಪಾ, 'ಮೈ ಕಿಲಾಡಿ ತು ಅನಾಡಿ', 'ದಡಕನ್' 'ಪರ್ದೆಶಿ ಬಾಬು' ಚಿತ್ರಗಳ ಮೂಲಕ ಅಂತರಾಷ್ಟ್ರೀಯ ಗಮನ ಸೆಳೆದಿದ್ದಾರೆ.

ತನ್ನ ಯಶಸ್ಸಿನ ಬೆನ್ನ ಹಿಂದೆಯೆ ವಿವಾದವನ್ನು ಸಹ ಸೃಷ್ಟಿಸಿಕೊಳ್ಳುತ್ತಿರುವುದು ಇತ್ತೀಚೆಗೆ ಶಿಲ್ಪಾಗೆ ನುಂಗಲಾರದ ತುತ್ತಾಗಿದೆ, ಲಂಡನ್ನಿನ ಪ್ರಮುಖ ಚಾನೆಲ್ ಒಂದರ ಜನಪ್ರಿಯ ಕಾರ್ಯಕ್ರಮ 'ಬಿಗ್ ಬ್ರದರ್' ಶೋ ನೀಡಲು ಹೋದಾಗ ಜನಾಂಗೀಯ ನಿಂದನೆಯ ಆರೋಪದ ವಿವಾದದಲ್ಲಿ ಸಿಲುಕಿ ಕೊನೆಗೂ ತನಗಂಟಿದ ಕಳಂಕವನ್ನು ಕಿತ್ತೊಗೆದು 90 ಲಕ್ಷಕ್ಕೂ ಹೆಚ್ಚು ಬಹುಮಾನವನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದ ಬೆನ್ನಲ್ಲೆ, ನವದೆಹಲಿಯ ಕಾರ್ಯಕ್ರಮವೊಂದರಲ್ಲಿ ಖ್ಯಾತ ಹಾಲಿವುಡ್ ನಟ ರಿಚರ್ಡ್ ಗೇರ್ ಜೊತೆ ಬಹಿರಂಗ ವೇದಿಕೆಯ ಮೇಲೆ ದೀರ್ಘ ಚುಂಬನಕ್ಕೆ ಸಹಕರಿಸಿದ ಆರೋಪವನ್ನು ಸಹ ಶಿಲ್ಪಾ ಹೊತ್ತಿದ್ದಾರೆ.

34 ವರ್ಷದ 5 ಅಡಿ 10 ಅಂಗುಲ ಎತ್ತರವಿರುವ ಅಪ್ರತಿಮ ಸುಂದರಿ ಖ್ಯಾತ ಬಾಲಿವುಡ್ ಬೆಡಗಿ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ತನ್ನ ವೃತ್ತಿ ಜೀವನದಲ್ಲಿ ಇನ್ನಷ್ಟು ಉತ್ತುಂಗಕ್ಕೆರಲಿ ಎಂದು ಹಾರೈಸೋಣ.

ಕರಾವಳಿಯ ಕುವರಿ..

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ನಾನು ಸತ್ತಿಲ್ಲ, ಆರೋಗ್ಯವಾಗಿದ್ದೀನಿ: ಅವಿವೇಕಿಗಳ ಕಲಸಕ್ಕೆ ಗರಂ ಆದ ದೊಡ್ಡಣ್ಣ

ಪತಿ ಸುಮಂತ್ ಜೊತೆ ವಿಚ್ಛೇದನ ಸುದ್ದಿಗಳ ಬಗ್ಗೆ ನಟಿ ಶುಭಾ ಪೂಂಜಾ ಪೋಸ್ಟ್

ನನ್ನ ಸಹೋದರ ಎಲ್ಲ ಚಪ್ಪಾಳೆಗಳಿಗೂ ಅರ್ಹರು: ರಾಮ್‌ಚರಣ್ ನಟನೆಗೆ ಅಲ್ಲು ಅರ್ಜು‌ನ್ ಫುಲ್ ಮಾರ್ಕ್ಸ್‌

ಶಿವಂ ಅಸೋಸಿಯೇಟ್ಸ್ ವಂಚನೆ ಕೇಸ್: ಸ್ಯಾಂಡಲ್ ವುಡ್ ಸ್ಟಾರ್ ಗಳಿಗೆ ಈಗ ಸಂಕಷ್ಟ

Video: ಕಾರ್ಯಕ್ರಮದಲ್ಲಿ ಗಾಬರಿಗೊಂಡ ಕಿಚ್ಚ ಸುದೀಪ್ ಬಾಡಿಗಾರ್ಡ್‌, ನಟ ಏನ್ ಮಾಡಿದ್ರು ನೋಡಿ

Show comments