Daily Horoscope
✕

ಸ್ಲಮ್ ಸುಂದರಿ ಪಿಂಟೋ ಮದುವೆ ವೃತ್ತಾಂತ..!

Webdunia
ಬುಧವಾರ, 28 ಜನವರಿ 2009 (20:11 IST)
ಇದೇನಪ್ಪಾ ಈ ಸ್ಲಮ್ ಸುಂದರಿಗೆ ಇಷ್ಟು ಬೇಗ ಮದುವೆನಾ ಎಂದು ಅಭಿಮಾನಿಗಳು ಮ‌ೂಗು ಮುರಿಯುತ್ತಾರೆ ಎಂಬುದನ್ನು ಮೈಲು ದೂರಗಳಿಂದಲೇ ಅಂದಾಜು ಮಾಡಿಕೊಂಡಿರುವ ಫ್ರೀದಾ ಪಿಂಟೋ ನಿಶ್ಚಿತಾರ್ಥ ರದ್ದು ಮಾಡಿದ್ದಾಳಂತೆ ! ಹಾಗಾಗಿ ಆಕೆಯ ಇನ್ನಷ್ಟು ಚಿತ್ರಗಳನ್ನು ನೋಡುವ ಭಾಗ್ಯ ಅಭಿಮಾನಿಗಳಿಗಿದೆ.

ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಭಾರತದ 'ಘನತೆ'ಯನ್ನು ಜಾಗತಿಕ ಮಟ್ಟದಲ್ಲಿ ಸಾರುವ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದಲ್ಲಿ ನಾಯಕಿಯಾಗಿರುವ 24ರ ಫ್ರೀದಾ ಪಿಂಟೋ ಮ‌ೂಲತಃ ಮಂಗಳೂರಿನವಳು. ಈಕೆಯ ತಂದೆ ಫ್ರೀದಾರಿಕ್ ಪಿಂಟೋ ನೀರುಡೆಯವರು ಬರೋಡಾ ಬ್ಯಾಂಕ್‌ನಲ್ಲಿ ಹಿರಿಯ ವ್ಯವಸ್ಥಾಪಕ ಹಾಗೂ ತಾಯಿ ಸಿಸ್ವಿಯಾ ಪಿಂಟೋ ದೇರೇಬೈಲ್‌ರವರು ಗೋರೆಗಾಂವ್ ಸೈಂಟ್ ಜಾನ್ ಹೈಸ್ಕೂಲ್‌ನಲ್ಲಿ ಫ್ರಿನ್ಸಿಪಾಲ್.

ಇಂತಿಪ್ಪ ತೌಳವ ಸುಂದರಿಗೆ ಇತ್ತೀಚೆಗೆ ಬೆಂಗಳೂರಿನ ಉದ್ಯಮಿಯೊಬ್ಬನ ಜತೆ ಎಂಗೇಜ್‌ಮೆಂಟ್ ಫಿಕ್ಸ್ ಆಗಿತ್ತಂತೆ. ಆದರೆ 'ಸ್ಲಮ್‌ಡಾಗ್ ಮಿಲಿಯನೇರ್' ಜಾಗತಿಕವಾಗಿ ಸುದ್ದಿ ಮಾಡುತ್ತಿದ್ದಂತೆ ಈಕೆ ಕೂಡ ಮಿಲಿಯನೇರ್ ಆಗಲು ಹೊರಟಂತೆ ಮದುವೆ ರದ್ದು ಮಾಡಿದ್ದಾಳೆ ಎನ್ನುವುದು ತೀರಾ ಕುಹಕವಲ್ಲ ಬಿಡಿ. ನಿಜ ಸಂಗತಿ ಬಗ್ಗೆ ಆಕೆ ಬಾಯಿ ಬಿಡದ ಕಾರಣ ಹೀಗೆಲ್ಲಾ ಯೋಚಿಸುವುದು ಸಹಜ ತಾನೇ..!

ಆಕೆಯಲ್ಲಿ ಹೌದೇ ಎಂದು ಪ್ರಶ್ನಿಸಿದಾಗ, "ನೀವು ಸ್ಲಮ್‌ಡಾಗ್ ಬಗ್ಗೆ ನನ್ನ ಸಂದರ್ಶನ ಮಾಡುತ್ತಿದ್ದೀರಾ ಅಥವಾ ಖಾಸಗಿ ವಿಚಾರಗಳ ಬಗ್ಗೆ ಕೇಳುತ್ತಿದ್ದೀರಾ? ನಾನು ನನ್ನ ವೈಯಕ್ತಿಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಿದ್ಧಳಿಲ್ಲ. ಅಷ್ಟಕ್ಕೂ ನಿಶ್ಚಿತಾರ್ಥ ನಡೆದಿರುವುದಕ್ಕೆ ನಿಮ್ಮಲ್ಲಿ ಏನು ಸಾಕ್ಷ್ಯಗಳಿವೆ?" ಎಂದು ಸಿಡಿಮಿಡಿಗೊಳ್ಳುತ್ತಾಳೆ ಕೃಷ್ಣ ಸುಂದರಿ.
IFM

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

BBK13: ಜಗಳ ನೋಡಿ ಸಾಕಾಯ್ತು, ತಾಂಡವ್ ರಾಮ್ ಗೆ ಇನ್ನಷ್ಟು ಹಾಡಲು ಹೇಳಿ.. ವೀಕ್ಷಕರ ಬೇಡಿಕೆ

BBK13: ಗಾನವಿ ರಿಲೇಷನ್ ಶಿಪ್ ಬಗ್ಗೆ ಬಾಯ್ಬಿಟ್ಟ ಸೌಂದರ್ಯ: ಪರ್ಸನಲ್ ವಿಷ್ಯಕ್ಕೆ ಬಂದ್ರೆ ಸಾಯಿಸಿಬಿಡ್ತೀನಿ ಎಂದ ಗಾನವಿ Video

ಚಾನೆಲ್ ನವರೇ ಹೇಳಿದ್ದಕ್ಕೆ ಅಂಥಾ ಬಟ್ಟೆ ಹಾಕಿದ್ದೆ: ಬಿಗ್ ಬಾಸ್ ನಿಂದ ಹೊರ ಬಂದ ಕುಮಾರಿ ಹೇಳಿಕೆ ಈಗ ವೈರಲ್ Video

BBK13: ಕಿಚ್ಚ ಸುದೀಪ್ ಹೇಳಿದ್ದು ನಿಜವಾಯ್ತು ಈ ವಾರ ಸ್ನೇಹಿತರ ನಡುವೆಯೇ ಧಗ ಧಗ

ದರ್ಶನ್ ಬೆನ್ನುನೋವು ಮತ್ತೆ ತೀವ್ರ: ಪರಪ್ಪನ ಅಗ್ರಹಾರ ಜೈಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಆರಂಭ

Show comments