Webdunia - Bharat's app for daily news and videos

Install App

ಮೆಹಬೂಬಾ ಹಾಡಿಗೆ ನರ್ತಿಸಿಲ್ಲ:ಬಿಗ್ ಬಿ

Webdunia
ಶುಕ್ರವಾರ, 31 ಆಗಸ್ಟ್ 2007 (16:28 IST)
ಚಮ್ಮಾ ಚಮ್ಮಾ, ಆಯಿಯೆ ಆ ಜಾಯಿಯೆ ಹಾಡುಗಳಿಗೆ ಲಯಬದ್ಧವಾಗಿ ನರ್ತಿಸಿ ಪ್ರೇಕ್ಷಕರಿಗೆ ಹುಚ್ಚೆಬ್ಬಿಸಿದ ಉರ್ಮಿಳಾ ಮಾತೋಂಡ್‌ಕರ್ ಬಾಲಿವುಡ್‌ನ ಬಿಗ್ ಬಿ ಜತೆಯಲ್ಲಿ ನರ್ತಿಸಿದ್ದಾಳೆಯೇ? ಇವೆಲ್ಲಾ ಊಹಾಪೋಹಗಳಿಗೆ "ಆಗ್" ಚಿತ್ರ ಬಿಡುಗಡೆಯಾಗುವ ಕೆಲವು ಗಂಟೆಗಳಿಗೆ ಮುಂಚೆ ಬಿಗ್ ಬಿ ತೆರೆಎಳೆದಿದ್ದಾರೆ.

ಆರ್‌ಜಿವಿಯ "ಆಗ್" ಚಿತ್ರದ ಮೆಹಬೂಬಾ ಹಾಡಿನಲ್ಲಿ ಕೇವಲ ಉರ್ಮಿಳಾದ್ದೇ ಕಾರುಬಾರು ಎಂದು ಬಿಗ್ ಬಿ ಹೇಳಿದ್ದಾರೆ.ರಮೇಶ್ ಸಿಪ್ಪಿಯ ಶೋಲೆ ಚಿತ್ರದಲ್ಲಿ ಗಬ್ಬರ್ ಸಿಂಗ್‌ ತರಹ, ಬಾಬ್ಬನ್ ಪಾತ್ರದಲ್ಲಿ ನಾನು ಡ್ಯಾನ್ಸ್‌ನಿಂದ ದೂರವೇ ಉಳಿದೆ.

ಬಾಬ್ಬನ್, ಡ್ಯಾನ್ಸ್ ದೃಶ್ಯಕ್ಕೆ ಹೆಜ್ಜೆ ಹಾಕದೇ ಪ್ರೇಕ್ಷಕನಾಗಿಯೇ ಉಳಿಯುತ್ತಾನೆ ಎಂದು ಅಮಿತಾಬ್ ಹೇಳಿದರು.ಹಾಗಾದರೆ, ಪುತ್ರ ಅಭಿಷೇಕ್ ಬೆಳ್ಳಿತೆರೆಯ ರೋಚಕ ನೃತ್ಯರಾಣಿ ಉರ್ಮಿಳಾ ಜತೆ ಹೆಜ್ಜೆ ಹಾಕಿದಾಗ ಏನನ್ನಿಸುತ್ತದೆ ಎಂಬ ಪ್ರಶ್ನೆಗೂ ಅಮಿತಾಬ್ ನಿರುತ್ತರ.

ಅಭಿಷೇಕ್ ಕೂಡ ಒಂದೆರಡು ಸಾಲುಗಳನ್ನು ಹಾಡುತ್ತಾನಷ್ಟೇ ಎಂದು ಹೇಳಿದರು. ಮೆಹಬೂಬಾ ಹಾಡು ಉರ್ಮಿಳಾರ ವೈಭವದ ಕ್ಷಣಗಳು ಎಂದು ಸ್ಪಷ್ಟಪಡಿಸಿದರು. ಆದರೆ ಉರ್ಮಿಳಾ ಹೇಳುವ ಮಾತೇ ಬೇರೆ.

ನರ್ತಿಸುವುದು ನನ್ನ ಮನದಾಳದ ಅಪೇಕ್ಷೆ. ಇಬ್ಬರು ಬಚ್ಚನ್‌ಗಳು ನನ್ನ ನೃತ್ಯಕ್ಕೆ ಸಾಥ್ ನೀಡಿದಾಗಲಂತೂ ನನ್ನ ಉತ್ಸಾಹ ಇಮ್ಮಡಿಸುತ್ತದೆ. ನಾನು ಅಮಿತ್‌ಜಿ ಮತ್ತು ಹೆಲೆನ್‌ಜಿಯ ಅಪ್ಪಟ ಅಭಿಮಾನಿ. ಹೀಗಾಗಿ ಮೆಹಬೂಬಾ ನೃತ್ಯಕ್ಕೆ ಡಬಲ್ ಗೌರವ ಸಿಕ್ಕಿದೆ ಎನ್ನುತ್ತಾಳೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟಾಕ್ಸಿಕ್ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು, ಭಾರೀ ನಿರೀಕ್ಷೆಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು: ನಿಜಕ್ಕೂ ಶಾಕಿಂಗ್

ಭಾರೀ ವಿವಾದ ಬೆನ್ನಲ್ಲೇ ರಕ್ಷಾಬಂಧನದ ಜಾಹೀರಾತು ವಾಪಸ್‌ ಪಡೆದ ಜಿವಾ: ನಟಿ ಕೃತಿ ಸನೋನ್‌ಗೆ ಶಾಕ್‌

ಫೋಟೋ ಕೇಳಿದ್ರೆ ಬೈದ್ರೆ… ಭದ್ರತಾ ಸಿಬ್ಬಂದಿ ಜೊತೆ ರಿತೇಶ್ ದೇಶಮುಖ್, ಜೆನಿಲಿಯಾ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ Video

ಯಶ್ ಹೇಳಿದ್ರೂ ಕ್ಯಾರೇ ಇಲ್ಲ: ಟಾಕ್ಸಿಕ್ ಸಿನಿಮಾಗೆ ಅಭಿಮಾನಿಗಳೇ ಹೀಗೆ ಮಾಡಿದರೆ ಹೇಗೆ

Toxic: ಟಾಕ್ಸಿಕ್ ಸಿನಿಮಾ ವೀಕ್ಷಿಸುವ ಮುನ್ನ ತಿಳಿದುಕೊಳ್ಳಲೇಬೇಕಾದ 5 ವಿಚಾರಗಳು

Show comments