ಜಾಗತಿಕವಾಗಿ ಯಶಸ್ವಿಯಾಗಿರುವ ಈ ಸಿನಿಮಾ ಸುಮಾರು 700ಮಿಲಿಯನ್ ಡಾಲರ್‌ನಷ್ಟು ಹಣ ಬಾಚಿಕೊಂಡಿದೆ. ಇದೀಗ ಐದನೇ ಸರಣಿಯ ರೆಸಿಡೆಂಟ್ ಈವಿಲ್ ತ್ರಿ ಡಿ ಅವತರಣಿಕೆಯಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
ದ ಅಂಬ್ರೆಲ್ಲಾ ಕಾರ್ಪೋರೇಷನ್ ಭಯಾನಕವಾದ ಸಿನಿಮಾವನ್ನು ನಿರ್ಮಾಣ ಮಾಡುವಲ್ಲಿ ಹೆಸರುವಾಸಿಯಾಗಿದೆ. ಮನುಷ್ಯ ಜನಾಂಗ ಕೊನೆಗೊಳ್ಳುವ ಮತ್ತು ಆ ಬಗ್ಗೆ ಭರವಸೆ ಮೂಡಿಸುವ ಕಥೆಯನ್ನು ಹೊಂದಿದೆ. ರೆಸಿಡೆಂಟ್ ಈವಿಲ್ ಸಿನಿಮಾದಲ್ಲಿ ಭೂತದ ರಹಸ್ಯ ಕಥಾನಕ ಮತ್ತು ಅದು ಸೇಡು ತೀರಿಸಿಕೊಳ್ಳುವ ಬಗೆಯನ್ನು ರೋಮಾಂಚನಕಾರಿಯಾಗಿ ಮೂಡಿಬಂದಿರುವುದಾಗಿ ಸಂಸ್ಥೆ ಹೇಳಿದೆ.