ಪದ್ಮಶ್ರೀ ಪಡೆದವರ್ಯಾರೂ ನ್ಯೂಕ್ಲಿಯರ್ ಬಾಂಬ್ ಸೃಷ್ಟಿಸಿಲ್ಲ: ಸೈಫ್!

Webdunia
IFM
ನನಗೆ ಪದ್ಮಶ್ರೀ ದಕ್ಕುವ ಎಲ್ಲ ಅರ್ಹತೆಗಳೂ ಇವೆ. ಹೀಗೆಂದವರು ಸೈಫ್ ಅಲಿ ಖಾನ್. ಈ ಬಾರಿ ಪದ್ಮ ಪ್ರಶಸ್ತಿ ಬಿಡುಗಡೆಯಾದಾಗ ಎಲ್ಲರ ಹುಬ್ಬೇರಿದ್ದು ಒಂದೇ ಕಾರಣಕ್ಕೆ. ಅದು ಸೈಫ್ ಅಲಿ ಖಾನ್ ಎಂಬ ನಟನಿಗೆ ಪದ್ಮಶ್ರೀ ದಕ್ಕಿದ್ದಕ್ಕೆ.

ಹಲವರು ಸೈಫ್ ಆಲಿ ಖಾನ್ ಪದ್ಮಶ್ರೀ ದಕ್ಕುವಂಥ ಮಹಾನ್ ಸಾಧನೆ ಏನು ಮಾಡಿದ್ದಾನಪ್ಪಾ ಎಂದು ಮೂಗು ಮುರಿದರು ಇನ್ನು ಕೆಲವರು, ಸೈಫ್‌ಗೆ ಪದ್ಮಶ್ರೀ ದಕ್ಕಿದ್ದು ಪದ್ಮಶ್ರೀ ಪ್ರಶಸ್ತಿಗೆ ದಕ್ಕಿದ ಅವಮಾನ ಎಂದರು. ಇನ್ನೂ ಹಲವರು ತಮಾಷೆಯಾಗಿ ಸೈಫ್ ಮಾಡಿದ ಸಾಧನೆ ಎಂದರೆ ಕರೀನಾಳ ಝೀರೋ ಫಿಗರ್ ಎಂದು ಕುಹಕವಾಡಿದರು. ಆದರೆ ಇವೆಲ್ಲವಕ್ಕೂ ಸೈಫ್ ತಲೆಕೆಡಿಸಿಕೊಳ್ಳಲಿಲ್ಲ. ತನ್ನ ಮನೆಯಲ್ಲಿ ಎಲ್ಲರೊಂದಿಗೆ ಪದ್ಮಶ್ರೀ ಬಂದ ಸಂತಹ ಹಂಚಿಕೊಳ್ಳಲು ಪಾರ್ಟಿ ಮಾಡೋದರಲ್ಲೇ ಬ್ಯುಸಿಯಾಗಿದ್ದರು.

ಈಗಷ್ಟೆ ಪಾರ್ಟಿ ಗೀರ್ಟಿ ಎಲ್ಲ ಮುಗಿಸಿ ಸೈಫ್ ಬಿಡುವಾಗಿದ್ದಾರೆ. ಹಾಗಾಗಿ ತನ್ನ ಟೀಕಾಕರರ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ನನಗೆ ಪದ್ಮಶ್ರೀ ದಕ್ಕಲು ಎಲ್ಲ ಅರ್ಹತೆಗಳೂ ಇವೆ. ನನ್ನ ಜೊತೆ ಪದ್ಮಶ್ರೀ ಪಡೆದವರೆಲ್ಲ ನ್ಯೂಕ್ಲಿಯರ್ ಬಾಂಬನ್ನೇನೂ ಸೃಷ್ಟಿಸಿಲ್ಲ. ಅವರೂ ನನ್ನಂತೆಯೇ ಒಂದು ಕ್ಷೇತ್ರಗಳಲ್ಲಿ ಸಾಧನೆ ಮೆರೆದವರು ಅಷ್ಟೆ ಎಂದು ಸೈಫ್ ಹೇಳಿದ್ದಾರೆ.

ಆದರೂ, ನನ್ನ ಹಾಗೆಯೇ ಸಾಧನೆ ಮಾಡಿದವರು ಇನ್ನೂ ಅನೇಕರಿದ್ದಾರೆ ಎಂಬುದನ್ನು ನಾನು ಬಲ್ಲೆ. ನನಗೆ ಇನ್ನೂ ಸಣ್ಣ ವಯಸ್ಸು. ನನಗಿಂತ ವಯಸ್ಸಾದವರಲ್ಲೂ ಸಾಧಕರಿದ್ದಾರೆ ಎಂಬ ಕಾರಣಕ್ಕೆ ಹಲವರಿಗೆ ನ್ನ ಪ್ರಶಸ್ತಿಯ ಬಗ್ಗೆ ಬೇಸರ ತರಿಸಿರಬಹುದು. ಆದರೆ ಅವರ ಬೇಸರ ನಾನು ಪ್ರಶಸ್ತಿಗೆ ಅರ್ಹನಲ್ಲ ಎಂಬ ಕಾರಣಕ್ಕಲ್ಲ ಎಂದು ಸೈಫ್ ವಿವರಿಸಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಮರ್ಡರ್ ಕೇಸ್ ಗೆ ಟ್ವಿಸ್ಟ್: ನಟ ದರ್ಶನ್ ಗೆ ಎದುರಾಗಿದೆ ಮತ್ತೊಂದು ಸಂಕಷ್ಟ

ಗೌರಿ ಜತೆ ಮೂರನೇ ಮದುವೆಗೆ ರೆಡಿಯಾದ ಅಮೀರ್ ಖಾನ್‌ಗೆ ಮಕ್ಕಳೇ ಎಲ್ಲವನ್ನೂ ಪ್ಲಾನ್‌ ಮಾಡುತ್ತಿರುವುದಂತೆ

Video ಛತ್ರಿ ಹಿಡಿಯೋದೇನು ಬೇಕಿಲ್ಲ.. ನಟ ಕಾಜಲ್ ಅಗರ್ವಾಲ್ ವರ್ತನೆಗೆ ನೆಟ್ಟಿಗರು ಫಿದಾ

ದರ್ಶನ್ ನೆನೆದು ಇನ್‌ಸ್ಟಾದಲ್ಲಿ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ

ಮಗನಿಗೂ ತನ್ನದೇ ಹಾದಿ ತೋರಿಸಿದ ರಿಷಬ್ ಶೆಟ್ಟಿ: ಮೊದಲ ಬಾರಿಗೆ ಬಣ್ಣ ಹಚ್ಚಿದ ರನ್ವಿತ್ Video

Show comments