Webdunia - Bharat's app for daily news and videos

Install App

ಶಾಹಿದ್ ಬಳಿ ಬೈಕಿಗೆ ಪೆಟ್ರೋಲ್‌ ತುಂಬಲು 50 ರೂ ದುಡ್ಡಿಲಿಲ್ಲವಂತೆ!

Webdunia
IFM
ಕಮೀನೇ ಚಿತ್ರ ಯಶಸ್ಸಾಗಿದ್ದೇ ಆಗಿದ್ದು, ಶಾಹಿದ್ ಕಪೂರ್ ಎಂಬ ಬಾಲಿವುಡ್ ಸುಂದರಾಗನ ಸಂಭಾವನೆ 15 ಕೋಟಿಗೇರಿದೆಯಂತೆ. ಹಾಗಂತ ಸುದ್ದಿಯಿದೆ. ಇತ್ತೀಚೆಗೆ ಖ್ಯಾತ ನಿರ್ಮಾಪಕರೊಬ್ಬರು ತಮ್ಮ ಚಿತ್ರದಲ್ಲಿ ನಟಿಸಲು ಶಾಹಿದ್ ಕಪೂರರ ಬಳಿ ಹೋಗಿದ್ದಾಗ ಆತನ ಸಂಭಾವನೆ ಗಗನಕ್ಕೇರಿದ್ದು ತಿಳಿದು ಬೆಚ್ಚಿ ಬಿದ್ದರಂತೆ.

ಇದು ಹೌದೋ ಎಂದರೆ ಶಾಹಿದ್ ಸರಿಯಾಗಿ ಉತ್ತರಿಸೋದಿಲ್ಲ. ಆದರೆ ಕಮೀನೇ ನಂತರ ಶಾಹಿದ್ ಕಪೂರ್ ಅವರ ಸ್ಟಾರ್ ವ್ಯಾಲ್ಯೂ ಹೆಚ್ಚಾಗಿದ್ದಂತೂ ನಿಜ. ಶಾಹಿದ್ ಕಪೂರ್ ಖಾನ್‌ತ್ರಯರ ನಂತರದ ಭವಿಷ್ಯದ ತಾರೆ, ನಂ.1 ನಟನಾಗಲು ಪೈಪೋಟಿಯಲ್ಲಿರುವ ನಾಯಕ ಎಂದೆಲ್ಲಾ ಬಿಂಬಿತವಾದುದಂತೂ ನಿಜ. ಆದರೆ ಅತ್ತ ಶಾಹಿದ್ ಮಾತ್ರ ಕೆಲವೇ ವರ್ಷಗಳಲ್ಲಿ ತನ್ನ ಬದಲಾದ ಸ್ಟಾರ್ ಬಗ್ಗೆ ಚಿಂತಿಸುತ್ತಿದ್ದಾನಂತೆ.

ಇಂಥ ಶಾಹಿದ್ ಕಪೂರ್ ಇತ್ತೀಚೆಗೆ ಫರ್ಹಾ ಖಾನ್ ನಡೆಸುವ ತೇರೇ ಮೇರೆ ಬೀಚ್ ಮೇ ಟಿವಿ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿದ್ದರು. ಈ ಸಂದರ್ಭ ಶಾಹಿದ್ ತಮ್ಮ ಮನದಾಳದ ಕೆಲವು ಮಾತುಗಳನ್ನು ಬಿಚ್ಚಿದರು. ಅದರ ಆಯ್ದ ಕೆಲವು ತುಣುಕು ಇಲ್ಲಿದೆ.

ಫರ್ಹಾ ಖಾನ್- ಶಾಹಿದ್ ನೀವು ವರ್ಷದಿಂದ ವರ್ಷಕ್ಕೆ ತುಂಬ ಹ್ಯಾಂಡ್‌ಸಮ್ ಆಗುತ್ತಲೇ ಹೊಗುತ್ತಿದ್ದೀರಿ. ಇಂತಹ ನಿಮ್ಮ ಸೌಂದರ್ಯ ಹಿಂದೆ ನಿಮ್ಮ ಯಶಸ್ಸಿನ ಮೆರುಗು ಇನ್ನೂ ನಿಮ್ಮ ಸೌಂದರ್ಯಕ್ಕೆ ತೂಕ ಓದಗಿಸಿದೆಯೋ ಹೇಗೆ?

IFM
ಶಾಹಿದ್ ಕಪೂರ್- ಇಂತಹ ಯಶಸ್ಸು ಪಡೆಯಬೇಕಾದರೆ ಹಿಂದೆ ನಾನು ತುಂಬಾ ಕಷ್ಟಪಟ್ಟಿದ್ದೇನೆ ಬಿಡಿ. ನಾನು ತುಂಬ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಒಂದು ಕಾಲದಲ್ಲಿ ನನ್ನ ಬಳಿ ಬೈಕ್ ಇದ್ದರೂ ಅದಕ್ಕೆ ಪೆಟ್ರೋಲ್ ಹಾಕಲು 50 ರೂಪಾಯಿಗಳಿಗೆ ಗತಿ ಇರಲಿಲ್ಲ. ಇಶ್ಕ್ ವಿಶ್ಕ್ ಚಿತ್ರಕ್ಕಾಗಿ ನನಗೆ ಮೊದಲು ಅವಕಾಶ ಸಿಕ್ಕಾಗ ತುಂಬ ಖುಷಿಗೊಂಡಿದ್ದೆ. ಅದಕ್ಕೆ ನನಗೆ ಸಿಕ್ಕಿದ ಸಂಬಾವನೆ 1 ಲಕ್ಷ ರೂಪಾಯಿಗಳು. ಈ ಚಿತ್ರ ಹಿಟ್ ಆಯಿತು. ಹಿಟ್ ಆದ್ದರಿಂದ ನಂತರದ ಚಿತ್ರದಲ್ಲಿ ನನಗೆ 35 ಲಕ್ಷ ರೂಪಾಯಿಗಳ ಸಂಭಾವನೆ ಸಿಕ್ಕಿತು. ಚಿತ್ರಕ್ಕೆ ಸಹಿ ಮಾಡಿದ್ದಕ್ಕಾಗಿ 5 ಲಕ್ಷ ರೂಪಾಯಿಗಳು ಬೋನಸ್ ಆಗಿ ಸಿಕ್ತು. ನಾನು ಮನೆಗೆ ಓಡಿ ಹೋಗಿ ಅಮ್ಮನಲ್ಲಿ ಐದು ಲಕ್ಷ ರೂಪಾಯಿಗಳ ಚೆಕ್ ತೋರಿಸುತ್ತಾ, ಇನ್ನು ಮೂರೇ ದಿನದಲ್ಲಿ ಸೊನ್ನೆಯಿದ್ದ ನಮ್ಮ ಬ್ಯಾಂಕ್ ಅಕೌಂಟಿನಲ್ಲಿ ಐದು ಲಕ್ಷ ರೂಪಾಯಿಗಳಿರುತ್ತದೆ ಎಂದು ಚೆಕ್ ಎತ್ತಿ ತೋರಿಸಿದ್ದೆ. ಅಷ್ಟು ಸಂತೋಷವಾಗಿತ್ತು ನನಗೆ. ಹೀಗೆ ಇಶ್ಕ್ ವಿಶ್ಕ್ ನಂತರ ನನ್ನ ಜೀವ ಬದಲಾಯಿತು. ಹೊಸ ಲೈಫ್ ಸಿಕ್ಕಿತು.

ನನ್ನ ಸಿನಿಮಾ ಜೀವನದ ಅತ್ಯಂತ ಕೆಟ್ಟ ಗಳಿಗೆ ನಾನು ವಿವಾಹ್ ಚಿತ್ರ ಮಾಡಿದ ನಂತರದ ಆರು ತಿಂಗಳು. ವಿವಾಹ್ ಹಿಟ್ ಆಯಿತು. ಆದರೆ ನಂತರ ಆರು ತಿಂಗಳು ನನ್ನ ಕೈಯಲ್ಲಿ ಒಂದೇ ಒಂದು ಸಿನಿಮಾವೂ ಇರಲಿಲ್ಲ. ಆರು ತಿಂಗಳ ಕಾಲ ಸುಮ್ಮನೆ ಕೆಲಸವಿಲ್ಲದೆ ಮನೆಯಲ್ಲಿ ಕೂತಿದ್ದೆ. ವಿವಾಹ್ ನಂತರ 60 ಸಿನಿಮಾಗಳಿಂದ ಆಹ್ವಾನ ಬಂದರೂ ಒಂದೂ ನನಗೆ ಇಷ್ಟವಾಗಿರಲಿಲ್ಲ.

IFM
ಇಶ್ಕ್ ವಿಶ್ವ್ ನಂತರ ಸಾಲು ಸಾಲು ಚಿತ್ರಗಳು ತೋಪಾದವು. ಹೀಗಾಗಿ ನಾನು ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದೆ. ಆಗ ವಿವಾಹ್ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಎಡೆಬಿಡದ ಚಿತ್ರಗಳ ಸೋಲು ನನ್ನನ್ನು ಎಷ್ಟು ಅಧೀರನನ್ನಾಗಿಸಿತ್ತು ಎಂದರೆ ನನಗೆ ಶೂಟಿಂಗ್‌ನಲ್ಲಿ ಅಭಿನಯಿಸಲು ಧೈರ್ಯವೇ ಇರಲಿಲ್ಲ. ಆಗ ನಿರ್ದಶಕ ಸೂರಜ್ ಭರ್ಜಾತ್ಯ ನನಗೆ ಧೈರ್ಯ ತುಂಬಿದರು. 'ನಿನ್ನನ್ನು ಉತ್ತಮ ಭವಿಷ್ಯದೆಡೆಗೆ ತೆಗೆದುಕೊಂಡು ಹೋಗುವುದು ಕೇವಲ ಒಂದೇ ಒಂದು. ಅದು ಪ್ರತಿಭೆ ಮಾತ್ರ. ಅಂತಹ ಪ್ರತಿಭೆ ನಿನ್ನಲ್ಲಿದೆ. ಮತ್ಯಾಕೆ ಅಧೀರತೆ?' ಎಂದರು. ಅವರ ಈ ಮಾತುಗಳು ನನಲ್ಲಿ ಮತ್ತೆ ಚೈತನ್ಯ ತುಂಬಿದವು. ವಿವಾಹ್ ಹಿಟ್ ಆಯಿತು. ನಂತರ ನಾನು ಯಾವತ್ತೂ ಅಧೀರನಾಗಲಿಲ್ಲ.

ಶಾಹಿದ್ ಜತೆಗೆ ಈ ಕಾರ್ಯಕ್ರಮದಲ್ಲಿ ಜಾನೆ ತೂ ಬೆಡಗಿ ಜೆನಿಲಿಯಾ ಕೂಡಾ ಇದ್ದರು. ಆಗ ಫರ್ಹಾ ಖಾನ್ ಜೋಕೊಂದನ್ನು ಹರಿಬಿಟ್ಟರು.

ಪರ್ಹಾ ಖಾನ್: ಶಾಹಿದ್ ಹಾಗೂ ನೀವು ಇಬ್ಬರೂ ಖ್ಯಾತ ನಟರ ಜತೆಗೆ ಜಾಹಿರಾತುಗಳಲ್ಲಿ ಸಿನಿಮಾಕ್ಕೆ ಬರುವ ಮೊದಲೇ ಕಾಣಿಸಿಕೊಂಡಿರಿ. ನಂತರ ಮ್ಯೂಸಿಕ್ ವಿಡಿಯೋಗಳಲ್ಲಿ, ಒಂದು ಹಿಟ್ ಫಿಲ್ಮ್ ನಂತರ ಹಲವು ಫ್ಲಾಪ್ ಸಿನಿಮಾಗಳನ್ನೂ ನೀಡಿದಿರಿ. ನಂತರ ಈಗ ಮತ್ತೆ ಹಿಟ್ ಮೂಲಕ ಇಬ್ಬರೂ ಶೈನ್ ಆಗುತ್ತಿದ್ದೀರಿ. ನಿಮ್ಮ ಲೈಫ್‌ ಸಾಮಾನ್ಯ ಒಂದೇ ಥರಹ ಇದೆ. ನೀವೇನಾದ್ರೂ ಅಣ್ಣತಂಗಿಯೋ ಹೇಗೆ?

ಜೆನಿಲಿಯಾ: ( ಒಂದೇ ಉಸಿರಿಗೆ) ನೋ ನೋ ನೋ ನೋ. ನಾವಿಬ್ರೂ ಅಣ್ಣತಂಗಿಯಂತೂ ಖಂಡಿತಾ ಅಲ್ಲಾರೀ. (ಮೂವರೂ ಸೇರಿ ಗೊಳ್ಳನೆ ನಗು)

IFM
ಫರ್ಹಾಖಾನ್: ಹಳೇ ನಾಯಕಿ ನಟಿಯರ ಪೈಕಿ ಮಾಧುರಿ ದೀಕ್ಷಿತ್, ಶ್ರೀದೇವಿ, ರೇಖಾ, ಝೀನತ್ ಅಮನ್ ಇವರಲ್ಲಿ ಯಾರ ಜತೆಗೆ ಕೆಲಸ ಮಾಡಲು ಇಷ್ಟಪಡುತ್ತೀರಿ?

ಶಾಹಿದ್ ಕಪೂರ್: ( ಒಂದು ಕ್ಷಣವೂ ವೇಸ್ಟ್ ಮಾಡದೆ ಒಂದೇ ಉಸಿರಿಗೆ) ಮಾಧುರಿ ದೀಕ್ಷಿತ್.

ಫರ್ಹಾ ಖಾನ್: ಹೀರೋಗಳ ಪೈಕಿ ಅಮಿತಾಬ್ ಬಚ್ಚನ್, ರಾಜೇಶ್ ಖನ್ನಾ, ಧರ್ಮೇಂದ್ರ, ವಿನೋದ್ ಖ್ನಾ ಇವರಲ್ಲಿ ಯಾರಿಷ್ಟ?

ಶಾಹಿದ್ ಕಪೂರ್: ಅಮಿತಾಬ್.

ಫರ್ಹಾ ಖಾನ್: 70ರ ದಶಕದಲ್ಲಿ ನಿಮಗೆ ಇವರ ಜತೆಗೆ ಕಾಶ್ಮೀರದಲ್ಲಿ ಸಿನಿಮಾ ಶೂಟಿಂಗಿಗೆ ಹೋಗಲು ಅವಕಾಶ ಸಿಕ್ಕಿತು ಎಂದಿಟ್ಟುಕೊಳ್ಳಿ. ನಿಮಗೆ ರೊಮ್ಯಾಂಟಿಕ್ ರೋಲ್. ಆಗ ಅಲ್ಲಿ ಶೂಟಿಂಗ್ ಸಮಯದಲ್ಲಿ ಏನೇನು ಮಾಡುತ್ತಿದ್ದಿರಿ?

ಶಾಹಿದ್ ಕಪೂರ್: 70 ರ ದಶಕದಲ್ಲಿ ಅಂದರೆ ಮೊಬೈಲ್ ಫೋನ್‌ಗಳು ಇರುವುದಿಲ್ಲ. ಹಾಗಾಗಿ ಹೀರೋಯಿನ್‌ಗಳು ಫೋನ್‌ನಲ್ಲಿ ಯಾರದ್ದೋ ಜತೆ ಮಾತಾಡುತ್ತಾ ಇರೋದಿಲ್ಲ. ಹಾಗಾಗಿ ನನಗೆ ಅವರ ಜತೆ ಮಾತನಾಡಲು ಸಾಕಷ್ಟು ಸಮಯ ಸಿಕ್ಕುತ್ತಿತ್ತು. ಎಲ್ಲ ನಟಿಯರೊಂದಿಗೂ ಚೆನ್ನಾಗಿ ಮಾತಾಡುತ್ತಿದ್ದೆ. ಸ್ವಲ್ಪ ಫ್ಲರ್ಟ್ ಮಾಡ್ತಿದ್ದೆ. ಆಧರೂ ಮಾಧುರಿ ದೀಕ್ಷಿತ್ ಜತೆಗೆ ಎಲ್ಲರ ಜತೆಗಿಂತ ಸ್ವಲ್ಪ ಹೆಚ್ಚು ಫ್ಲರ್ಟ್ ಮಾಡ್ತಿದ್ದೆ. ಮಧುರಿ ಸೆಟ್‌ನಲ್ಲಿ ಸಿಕ್ತಿದ್ದಿದ್ದರೆ, ಆಕೆ ಜತೆಗೊಂದು ಮಧ್ಯಾಹ್ನದ ಊಟ ಮಾಡಿ ಹರಟುತ್ತಾ ಕೂರುತ್ತಿದ್ದೆನೇನೋ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಮರ್ಡರ್ ಕೇಸ್: ನಟ ದರ್ಶನ್ ಗೆ ಇಂದು ಮಹತ್ವದ ದಿನ

ನಟರು ದೇವಲೋಕದಿಂದ ಇಳಿದು ಬಂದವರಾ… ಏರ್ ಪೋರ್ಟ್ ನಲ್ಲಿ ಅಲ್ಲು ಅರ್ಜುನ್ ವರ್ತನೆಗೆ ಟೀಕೆ Video

ಕೇರಳಕ್ಕೆ ಮರಳುವ ದಾರಿ ತಪ್ಪಿದ್ದ ಮಮ್ಮುಟ್ಟಿ: ಸಹಾಯಕ್ಕೆ ಬಂದ ಸ್ಥಳೀಯನಿಗೆ ಮಾಡಿದ್ದೇನು ನೋಡಿ Video

ನಿಷೇಧಿತ ಉತ್ಪನ್ನಗಳಿಗೆ ಪ್ರಚಾರ: ಬಾಲಿವುಡ್‌ ಸ್ಟಾರ್‌ ಶಾರುಖ್, ದೇವಗನ್, ಟೈಗರ್ ಶ್ರಾಫ್‌ಗೆ ಪೋಕಾಸ್‌ ನೋಟಿಸ್

ಶೂಟಿಂಗ್ ಸ್ಥಳಕ್ಕೆ ಹೋಗುವಾಗ ದಾರಿ ತೋರಿಸಿದ ವ್ಯಕ್ತಿ, ಖ್ಯಾತ ನಟ ಮಮ್ಮೂಟ್ಟಿ ಆ ವ್ಯಕ್ತಿ ಜತೆ ನಡೆದುಕೊಂಡ ರೀತಿ ನೋಡಿದ್ರೆ ಶಾಕ್

Show comments