Daily Horoscope
✕

'ಸಂಪೂರ್ಣ ಬೆತ್ತಲಾದ ಮೊದಲ ನಟಿ ನಾನೆಂದು ನನಗೆ ಹೆಮ್ಮೆ!'- ನಂದನಾ ಸೇನ್

Webdunia
IFM
ಈಕೆ ನೊಬೆಲ್ ಪುರಸ್ಕೃತ ಭಾರತೀಯ ಅಮಾರ್ತ್ಯ ಸೇನ್ ಅವರ ಖಾಸಾ ಮಗಳು. ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದರೂ ಹೆಚ್ಚು ಸುದ್ದಿಯಾಗಿದ್ದು ವಿವಾದಗಳಿಂದಲೇ. ಇತ್ತೀಚೆಗಷ್ಟೆ ರಾಜಾ ರವಿವರ್ಮನ ಕಥೆಯುಳ್ಳ ರಂಗ್ ರಸಿಯಾ ಚಿತ್ರದಲ್ಲಿ ಸಂಪೂರ್ಣ ಬೆತ್ತಲೆಯಾಗಿ ನಟಿಸಿದ ನಂದನಾಗೆ ತಾನು ಬೆತ್ತಲಾಗಿದ್ದರ ಬಗ್ಗೆ ಹೆಮ್ಮೆಯಂತೆ. ಹಾಗೆಯೇ ತಾನು ಬೆತ್ತಲಾಗಿದ್ದು ಕಾಮಪ್ರಚೋದನೆಗೆ ಅಲ್ಲ. ಅದೊಂದು ಕಲಾತ್ಮಕ ಚಿತ್ರ ಎಂದು ಹೇಳುವ ನಂದನಾಗೆ ಬೆತ್ತಲಾಗಿ ಇತಿಹಾಸ ಸೃಷ್ಟಿಸಿದ ಖುಷಿ. ಕೇತನ್ ಮೆಹ್ತಾರ ಈ ವಿವಾದಿತ ರಂಗ್ ರಸಿಯಾ ಮಾತ್ರ ಚಿತ್ರೀಕರಣ ಮುಗಿಸಿ ಸಮಯ ಸಂದರೂ, ಸೆನಸಾರ್ ಜತೆಗೆ ಗುದ್ದಾಡುತ್ತಿರುವುದರಿಂದ ಇನ್ನೂ ಬಿಡುಗಡೆಯ ಭಾಗ್ಯ ಕಂಡಿಲ್ಲ.

IFM
ಕೇತನ್ ಮೆಹ್ತಾದ ರಂಗ್ ರಸಿಯಾ ಚಿತ್ರದಲ್ಲಿ ಹಿಂದು ದೇವತೆಯರ ಚಿತ್ರಗಳಲ್ಲಿ ನಿಮ್ಮ ಮುಖವನ್ನು ಚಿತ್ರಿಸಲಾಗಿದೆ ಎಂಬ ವರದಿಯಿದೆಯಲ್ಲ. ಇದು ನಿಜವೇ?

ಹೌದು ನಿಜ. ಆದರೆ ಈ ಪೇಂಟಿಂಗ್ ಮಾಡಿರುವುದು ಕೇವಲ ಸಿನಿಮಾಕ್ಕಾಗಿ. ಆ ಪೇಂಟಿಂಗ್‌ಗಳಿಗಾಗಿ ನಾನು ಪೋಸ್ ಕೊಟ್ಟಿದ್ದೂ ನಿಜ. ಯಾಕೆಂದರೆ, ಅದು ಚಿತ್ರಕ್ಕೆ ಅಗತ್ಯವಾಗಿತ್ತು. ಚಿತ್ರದಲ್ಲಿ ನನ್ನದು ಸುಗಂಧಿಯ ಪಾತ್ರ. ರಣದೀಪ್ ಹೂಡಾ ಅವರದ್ದು ರಾಜಾ ರವಿವರ್ಮರ ಪಾತ್ರ. ರವಿವರ್ಮ ಸುಗಂಧಿಯ ಮುಖದ ರೂಪಿನಲ್ಲಿ ದೇವತೆಗಳನ್ನು ಪೇಂಟ್ ಮಾಡಿದ್ದರು. ಹಾಗೆಯೇ ಚಿತ್ರದಲ್ಲಿ ಸುಗಂಧಿಯ ಪಾತ್ರ ನಾನು ಮಾಡಿದ್ದರಿಂದ ನನ್ನ ಮುಖದ ರೂಪದಲ್ಲಿ ದೇವತೆಯರ ಚಿತ್ರ ರಚಿಸಬೇಕಾಗುತ್ತದೆ. ಹಾಗಾಗಿ ನಾನು ಲಕ್ಷ್ಮಿ, ಸರಸ್ವತಿ, ಸೀತೆ, ದ್ರೌಪದಿ, ಮೇನಕೆ, ಊರ್ವಶಿಯರ ರೂಪದಲ್ಲಿ ಚಿತ್ರಿಸಲ್ಪಟ್ಟಿದ್ದೇನೆ. ಇದರಲ್ಲಿ ವಿವಾದ ಮಾಡುವಂಥ ವಿಚಾರ ಏನಿದೆಯೋ ನನಗರ್ಥವಾಗುತ್ತಿಲ್ಲಪ್ಪ. ಆದರೆ ನನ್ನ ದೇವತಾ ರೂಪದ ಪೇಂಟಿಂಗ್‌ಗಳನ್ನು ಕ್ಯಾಲೆಂಡರ್ ರೂಪದಲ್ಲಿ ಪ್ರಕಟಿಸುವ ಹುಚ್ಚು ನನಗಿಲ್ಲ. ಇದು ಕೇವಲ ಚಿತ್ರಕ್ಕಾಗಿ ಮಾಡಿದ್ದು ಅಷ್ಟೆ.

IFM
ರಂಗ್ ರಸಿಯಾ ಚಿತ್ರದಲ್ಲಿ ನೀವು ತೆರೆದೆದೆಯಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದೀರಿ. ಇದು ಮೊದಲ ಭಾರತೀಯ ನಟಿ ಈ ರೀತಿ ಕಾಣಿಸಿಕೊಂಡದ್ದಲ್ಲವೇ?

ಮತ್ತೊಮ್ಮೆ ನನಗೆ ಈ ವಿಚಾರದಲ್ಲೂ ಅನಗತ್ಯ ವಿವಾದ ಹುಟ್ಟುಹಾಕುತ್ತಿದ್ದಾರೆ ಅನಿಸುತ್ತದೆ. ಇದೂ ಕೂಡಾ ಚಿತ್ರದಲ್ಲಿ ತುಂಬ ಕಲಾತ್ಮಕವಾಗಿ ನಗ್ನತೆಯನ್ನು ಬಳಸಲಾಗಿದೆ. ಇಲ್ಲಿ ಕಾಮಪ್ರಚೋದನೆಯ ಉದ್ದೇಶ ಖಂಡಿತಾ ಇಲ್ಲ. ಚಿತ್ರದಲ್ಲಿ ನಗ್ನತೆಯೇ ಕಥೆಯ ಜೀವಾಳ. ನನಗೆ ಚಿತ್ರದ ನಿರ್ದೇಶಕರ ಬಗ್ಗೆ ನಂಬಿಕೆಯಿದೆ. ಅವರಿಗೆ ಈ ಚಿತ್ರಕ್ಕೆ ಎಂಥಾ ನಟನೆ ಬೇಕೆಂಬುದೂ ನನಗೆ ಅರಿವಿದೆ. ಅದನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ.

IFM
ಈ ಮೊದಲೂ ಅರೆಬೆತ್ತಲೆ ದೃಶ್ಯಗಳಲ್ಲಿ ನಟಿಸಿರುವ ನಿಮಗೆ ಸಂಪೂರ್ಣ ಬೆತ್ತಲೆ ದೃಶ್ಯಗಳಲ್ಲಿ ನಟಿಸಲು ಮುಜುಗರವಾಗಲಿಲ್ಲವೇ?

ಮಣಿಶಂಕರ್ ಅವರ ಟಾಂಗೋ ಚಾರ್ಲಿಯ ಬಗ್ಗೆ ನೀವು ಮಾತಾಡುತ್ತಿದ್ದೀರಿ ಅನಿಸುತ್ತೆ. ಟಾಂಗೋದಲ್ಲಿ ನಾನು ನ್ನನ ಬೆತ್ತಲೆ ಹಿಂಭಾಗದ ಪ್ರದರ್ಶನ ಮಾಡಿದ್ದೆ. ಆದರೆ ಅವರು ನನ್ನನ್ನು ಮೋಸ ಮಾಡಿದರು. ಅಗತ್ಯಕ್ಕಿಂತ ಹಾಗೂ ಹೇಳಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಚಿತ್ರೀಕರಣ ಮಾಡಿದರು. ಆದರೆ, ರಂಗ್ ರಸಿಯಾ ಹಾಗಲ್ಲ. ನಾನು ನನ್ನ ಕಣ್ಣುಬಳನ್ನು ತೆರೆದೇ ಬೆತ್ತಲೆಯಾಗಿ ಪೋಸ್ ಕೊಟ್ಟಿದ್ದೇನೆ. ಹಾಗಾಗಿ ಇದು ನನಗೆ ತುಂಬ ಕಷ್ಟವೆನಿಸಿತು. ಅದಕ್ಕಾಗಿ ಸಾಕಷ್ಟು ಬೆತ್ತಲೆ ದೃಶ್ಯಗಳಿರುವ ಚಿತ್ರಗಳನ್ನೂ ನೋಡಿದೆ. ಅಭ್ಯಾಸ ಮಾಡಿದೆ. ಆದರೆ ರಂಗ್ ರಸಿಯಾದಲ್ಲಿ ಸಂಪೂರ್ಣ ಬೆತ್ತಲಾಗುವುದು ಚಿತ್ರದ ಜೀವಾಳ. ಅದಕ್ಕೆ ಒಪ್ಪಿದೆ. ಆದರೆ ನನ್ನ ಒಪ್ಪಿಗೆಯ ಹಿಂದೆ ನನ್ನ ಇಡೀ ಕುಟುಂಬವಿದೆ. ಕುಟುಂಬ ಈ ನಿಟ್ಟಿನಲ್ಲಿ ನನಗೆ ನೀಡಿದ ಸಹಕಾರ ಅದ್ಭುತ. ನಾನು ಬೆತ್ತಲೆ ದೃಶ್ಯದಲ್ಲಿ ನಟಿಸಬೇಕಾಗಿದೆ ಎಂದು ಕುಟುಂಬದ ಜತೆಗೆ ಮೊದಲು ವಿಚಾರ ಹಂಚಿಕೊಂಡಾಗ ಅವರು ನನ್ನನ್ನು ತುಂಬ ಸಪೋರ್ಟ್ ಮಾಡಿದರು. ಇಲ್ಲವಾರೆ ಖಂಡಿತ ನಾನು ಮಾಡುತ್ತಿರಲಿಲ್ಲ. ಈಗ ನಾನು ಬೆತ್ತಲೆಯಾಗಿ ಪೋಸ್ ಕೊಟ್ಟೆನೆಂದು ನನಗೆ ಹೆಮ್ಮೆಯೆನಿಸುತ್ತದೆ. ಬೆತ್ತಲೆಯಾಗಿ ಪೋಸ್ ಕೊಟ್ಟು ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಖುಷಿಯಾಗುತ್ತಿದೆ. ರವಿವರ್ಮನಿಗೆ ಪೋಸ್ ಕೊಟ್ಟ ಸುಗಂಧಿಯೆಂದು ಕ್ಯಾಲೆಂಡರ್ಗಳೂ ಲಭ್ಯವಾಗಲಿವೆ.
IFM


ಈಗ ನಿಮಗೆ ಬೆತ್ತಲೆಯ ಬಗ್ಗೆ ಮುಜುಗರವಾಗುತ್ತಿಲ್ಲವೇ?

ವಿಶ್ವದಲ್ಲಿ ಖ್ಯಾತ ನಿರ್ದೇಶಕರು ನಟ, ನಟಿಯರನ್ನು ಸಕಾರಣದಿಂದ ಬೆತ್ತಲೆಯಾಗಿ ಚಿತ್ರಗಳಲ್ಲಿ ಬಳಸಿಕೊಂಡಿದ್ದಾರೆ. ವಿಚಿತ್ರವೆಂದರೆ ಭಾರತೀಯರು ಬೆತ್ತಲಾಗುವುದನ್ನು ಸಂಪ್ರದಾಯ ವಿರೋಧವೆಂದು ಅಂದುಕೊಳ್ಳುತ್ತಾರೆ. ಆದರೆ ಬಹಳ ಹಿಂದೆಯೇ ರಾಜಾ ರವಿವರ್ಮ ಬೆತ್ತಲೆಯಾಗಿಸಿ ಸಾಕಷ್ಟು ಪೇಂಟಿಂಗ್‌ಗಳನ್ನು ರಚಿಸಿದ್ದರು. 130 ವರ್ಷಗಳ ನಂತರ ಈಗಲಾದರೂ ನಾವು ಬೆಳೆಯಬೇಕು. ಹಾಗಾಗಿ ನಾನು ಹಾಗೂ ನಿರ್ದೇಶಕ ಕೇತನ್ ಮೆಹ್ತಾ 130 ವರ್ಷಗಳ ಹಿಂದೆ ನಡೆದುದನ್ನು ತೆರೆಯ ಮೇಲೆ ತಂದಿದ್ದೇವೆ. ಇದರಲ್ಲಿ ವಿವಾದ ಮಾಡುವಂತಹದು ಏನೂ ಇಲ್ಲ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಭಿಮಾನಿಗಳ ಕೇಳಿದ್ರೆ ಬಿಡೋದು ಹೇಗೆ… ವಿಮಾನವನ್ನೇ ಮಿನಿ ಸಂಗೀತ ಕಚೇರಿಯನ್ನಾಗಿ ಬದಲಾಯಿಸಿದ ಗಾಯಕ ಸೋನು ನಿಗಮ್ Video

BBK13: ಜಗಳ ನೋಡಿ ಸಾಕಾಯ್ತು, ತಾಂಡವ್ ರಾಮ್ ಗೆ ಇನ್ನಷ್ಟು ಹಾಡಲು ಹೇಳಿ.. ವೀಕ್ಷಕರ ಬೇಡಿಕೆ

BBK13: ಗಾನವಿ ರಿಲೇಷನ್ ಶಿಪ್ ಬಗ್ಗೆ ಬಾಯ್ಬಿಟ್ಟ ಸೌಂದರ್ಯ: ಪರ್ಸನಲ್ ವಿಷ್ಯಕ್ಕೆ ಬಂದ್ರೆ ಸಾಯಿಸಿಬಿಡ್ತೀನಿ ಎಂದ ಗಾನವಿ Video

ಚಾನೆಲ್ ನವರೇ ಹೇಳಿದ್ದಕ್ಕೆ ಅಂಥಾ ಬಟ್ಟೆ ಹಾಕಿದ್ದೆ: ಬಿಗ್ ಬಾಸ್ ನಿಂದ ಹೊರ ಬಂದ ಕುಮಾರಿ ಹೇಳಿಕೆ ಈಗ ವೈರಲ್ Video

BBK13: ಕಿಚ್ಚ ಸುದೀಪ್ ಹೇಳಿದ್ದು ನಿಜವಾಯ್ತು ಈ ವಾರ ಸ್ನೇಹಿತರ ನಡುವೆಯೇ ಧಗ ಧಗ

Show comments