Webdunia - Bharat's app for daily news and videos

Install App

ಆಗಸ್ಟ್ 2ರಂದು ರಾಖಿ ಸಾವಂತ್ ಮದುವೆ!

Webdunia
IFM
ಹೌದು. 'ದಿ ಅಲ್ಟಿಮೇಟ್ ಡ್ರಾಮಾ ಕ್ವೀನ್' ರಾಖಿ ಸಾವಂತ್ ಮದುವೆಯಾಗೋದು ನಿಜವಂತೆ. ಹಾಗಂತ, ತನ್ನ ಬಗ್ಗೆ ಇದ್ದ ಎಲ್ಲ ಗಾಸಿಪ್‌ಗಳನ್ನೂ ಕಿತ್ತೊಗೆದಿದ್ದಾಳೆ ರಾಖಿ. ರಾಖಿ ಕಾ ಸ್ವಯಂವರ ಎಂಬ ಕಾರ್ಯಕ್ರಮ ಶುದ್ಧ ಖೊಟ್ಟಿ. ಅದರಲ್ಲಿ ರಾಖಿ ನಿಜಕ್ಕೂ ಮದುವೆನೇ ಆಗೋದಿಲ್ಲ ಎಂದು ಹಬ್ಬಿದ ಗುಲ್ಲಿಗೆ ರಾಖಿಯೇ ಉತ್ತರ ನೀಡಿದ್ದಾಳೆ. ಅವಳ ಮಾತಲ್ಲೇ ಕೇಳಿ.

'' ಹೌದು. ನಾನು ಖಂಡಿತವಾಗಿಯೂ ಮದ್ವೆಯಾಗುತ್ತೇನೆ. ಅದಕ್ಕಾಗಿ ಆಗಸ್ಟ್ 2ರವರೆಗೆ ಕಾದರೆ ಸಾಕು ನಿಮಗೆ ನಿಜವಾದ ಸತ್ಯದ ಅರಿವಾಗುತ್ತದೆ. ನಾನು ಮದುವೆಯಾ ಆಗೋದಿಲ್ಲ ಎಂದು ಹಬ್ಬಿದ್ದ ಸುದ್ದಿಯೆಲ್ಲಾ ಬರೀ ಸುಳ್ಳು. ನಾನು ಮದುವೆಯೆಂಬ ಸಂಪ್ರದಾಯವನ್ನು ತಮಾಷೆಗೆ ಟಿವಿ ಪರದೆಯ ಮೇಲೆ ತರಲು ಒಪ್ಪಿಲ್ಲ. ಮದುವೆ ಎಂಬ ಪರಿಶುದ್ಧ ಬಾಂಧವ್ಯಕ್ಕೆ ನ್ಯಾಯ ಸಲ್ಲಿಸುತ್ತೇನೆ. ಅದನ್ನು ಅಣಕ ಮಾಡುವುದೇ ಇಲ್ಲ.''

' ಹಾಗಾದರೆ ರಾಖಿ, ಯಾರನ್ನೆಲ್ಲ ತನ್ನ ಅಂತಿಮ ವರರ ಪಟ್ಟಿಯಲ್ಲಿ ಇಟ್ಟಿದ್ದಾಳೆ?' ಎಂದು ಕೇಳಿದರೆ ಆಕೆ ಮೂರು ಹೆಸರನ್ನು ಹೇಳುತ್ತಾಳೆ. ''ನನ್ನ ಆಯ್ಕೆಯಲ್ಲಿ ಮೂರು ಹೆಸರುಗಳಿವೆ. ಕೆನಡಾದಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿ ಎಲೀಶ್ ಪರುಂಜವಾಲಾ, ಶಿತಿಜ್ ಜೈನ್ ಹಾಗೂ ಮಾನಸ್ ಕತ್ಯಾಲ್. ಈ ಮೂವರು ಈವರೆಗಿದ್ದ 16 ಮಂದಿಯಲ್ಲಿ ನನ್ನ ಆಯ್ಕೆಯಲ್ಲಿದ್ದಾರೆ. ಅದರಲ್ಲೂ ನನಗೆ ಎಲೀಶ್ ತುಂಬ ಇಷ್ಟವಾಗಿದ್ದಾನೆ. ನನಗೆ ನಿಜವಾಗಿ ಪ್ರೀತಿಸುವ ಹೃದಯ ಬೇಕು. ಎಲೀಶ್‌ ಕಣ್ಣುಗಳಲ್ಲೇ ಪ್ರೀತಿಯಿದೆ. ಆತನ ಕಣ್ಣಿನಿಂದಲೇ ಆತ ನನ್ನ ಮೇಲೆ ನಿಷ್ಕಲ್ಮಷ ಪ್ರೀತಿ ಹೊಂದಿದ್ದಾನೆ ಎಂದು ನಾನು ಅಳೆದಿದ್ದೇನೆ. ಉಳಿದವರಲ್ಲಿ ನನಗದು ಎಲೀಶ್‌ನಷ್ಟು ನೈಜ ಪ್ರೀತಿ ಕಂಡಿಲ್ಲ. ಎಲೀಶ್ ತುಂಬ ಒಳ್ಳೆಯವನು ಎಂದು ನನಗಾತನ ನಡವಳಿಕೆ ನೋಡಿದಾಗಲೇ ತಿಳಿಯುತ್ತದೆ.''

IFM
' ಓಹೋ, ಹಾಗಾದರೆ ನೀವು ಬಹುತೇಕ ಎಲೀಶ್‌ನನ್ನು ಮದುವೆಯಾದಂತೆಯೇ. ಆತ ಇರೋದು ಕೆನಡಾದಲ್ಲಿ. ಹಾಗಾದರೆ ನೀವು ಭಾರತ ಬಿಟ್ಟು ಕೆನಡಾಕ್ಕೆ ಹಾರುತ್ತೀರಾ?' ಎಂದರೆ ರಾಖಿ, ''ನೋಡೋಣ. ಇನ್ನೂ ಆ ಬಗ್ಗೆ ನಿರ್ಧಾರ ಮಾಡಿಲ್ಲ. ನನಗೆ ನನ್ನ ನೃತ್ಯ ಬಿಡಲು ಇಷ್ಟವಿಲ್ಲ. ಕೆರಿಯರ್ ನನಗೆ ಬೇಕೇ ಬೇಕು. ಕೆರಿಯರ್ ಜತೆಜತೆಗೇ ನನ್ನ ಸುಂದರ, ಸುಖಮಯವಾದ ಕನಸಿನ ದಾಂಪತ್ಯವನ್ನು ಕಾಪಾಡಿಕೊಳ್ಳುತ್ತೇನೆ ಎಂಬ ನಂಬಿಕೆ ಇದೆ. ಇಲ್ಲಿದ್ದರೂ ಸರಿ, ಅಲ್ಲಿಗೆ ಹೋದರೂ ಸರಿ. ಕಾಲ ನಿರ್ಧರಿಸುತ್ತೆ. ಏನಾಗುತ್ತದೋ ನೋಡೋಣ. ಇನ್ನೂ ಸಾಕಷ್ಟು ಸಮಯವಿದೆ'' ಎನ್ನುತ್ತಾಳೆ.

' ರಾಖಿ ಈ ಹಿಂದೆ ಹಲವು ರದ್ದಾಂತಗಳಿಂದ ಫೇಮಸ್ಸು ಆಗಿದ್ದಳು. ಹಾಗಾದ್ರೆ ಮದುವೆಯಂತಹ ಬಾಂಧವ್ಯದಲ್ಲಿ ಮುಂದೆ ಇಂತಹ ಹಳೆಯ ನೆನಪುಗಳು ಅಡ್ಡ ಬರಲಿಕ್ಕಿಲ್ಲವೇ?' ಎಂದು ಕೇಳಿದರೆ, ''ನಾನು ನನ್ನ ಹಿಂದಿನದೆಲ್ಲವನ್ನೂ ಮರೆತಿದ್ದೇನೆ. ನನ್ನ ಒಂದು ಕಾಲದ ಬಾಯ್‌ಫ್ರೆಂಡ್ ಆಗಿದ್ದ ಅಭಿಷೇಕ್ ಅವಸ್ಥಿಯನ್ನೂ ಕೂಡಾ. ಹಳೆಯ ಕೆಟ್ಟ ಹೆಳವಂಡಗಳನ್ನು ಬದುಕಿನುದ್ದಕ್ಕೂ ನೆನೆಸುತ್ತಾ ಸುಂದರ ಕ್ಷಣಗಳನ್ನು ಆಸ್ವಾದಿಸದೆ ಬಿಡುವುದಿಲ್ಲ. ನಾನು ನನ್ನ ಹೊಸ ಬದುಕನ್ನು ಆರಂಭಿಸುತ್ತೇನೆ. ಇದು ನನಗೆ ಹೊಸ ಜೀವನ ನೀಡುತ್ತದೆ ಎಂಬ ನಂಬಿಕೆಯಿದೆ'' ಎಂದು ಉತ್ತರಿಸುತ್ತಾಳೆ ರಾಖಿ.

ಅಂದಹಾಗೆ, ರಾಖಿಯ ಮದುವೆ ಉಡುಪು ಈಗಾಗಲೇ ನೀತಾ ಲಲ್ಲಾ ಸಿದ್ಧಪಡಿಸಿದ್ದಾರೆ. ಮದುವೆಯಲ್ಲಿ ಧರಿಸಲಿರುವ ಆಭರಣಗಳನ್ನು ಫರ್ಹಾ ಖಾನ್ ಡಿಸೈನ್ ಮಾಡಿದ್ದಾರೆ. ಮದುವೆಗೆ ಭರಪೂರ ಸಿದ್ಧತೆಗಳೂ ನಡೆಯುತ್ತಿವೆಯಂತೆ. ಆದರೆ ಮೂಲಗಳ ಪ್ರಕಾರ, ರಾಖಿಗೆ ಎಲೀಶ್ ಇಷ್ಟವಾದರೂ ಎರಡು ಗಂಟೆಗೊಮ್ಮೆ ಆಕೆಯ ನಿರ್ಧಾರ ಬದಲಾಗುತ್ತಲೇ ಇರುತ್ತದಂತೆ!!! ಅಂತೂ, ನಿಜ ನೋಡಬೇಕೆಂದರೆ ಆ.2ರವರೆಗೆ ಕಾಯಬೇಕು. ಕಾಯೋಣ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಊಹಿಸಲಾಗದ ಬೆಳವಣಿಗೆ

ಮಾಫಿ ಸಾಕ್ಷಿ ಅರ್ಜಿಯಲ್ಲಿ ರೇಣುಕಾಸ್ವಾಮಿ ಮರ್ಡರ್ ಕುರಿತು ಪ್ರದೋಷ್ ಹೇಳಿದ ಭಯಾನಕ ವಿಚಾರಗಳ ವಿವರ ಇಲ್ಲಿದೆ

ಟಾಕ್ಸಿಕ್ ನಲ್ಲಿ ಪತ್ನಿ ಹಸಿಬಿಸಿ ದೃಶ್ಯ: ಕೊನೆಗೂ ಮೌನ ಮುರಿದ ಸಿದ್ಧಾರ್ಥ ಮಲ್ಹೋತ್ರಾ

ಫೋಟೋಗೆ ಬೇಡಿಕೆಯಿಟ್ಟ ಫ್ಯಾನ್ಸ್‌ ವೇದಿಕೆ ಮೇಲೆ ನಡೆದುಕೊಂಡ ರೀತಿಗೆ ಮುಜುಗರಕ್ಕೊಳಗಾದ ನಟಿ ನಿಕಿತಾ ರಾವಲ್‌, Video

ಯಶ್‌ ಸಿನಿಮಾ ದೃಷ್ಟಿಕೋಣ ನನ್ನನ್ನು ಬೆರಗುಗೊಳಿಸಿತು: ಲೇಡಿ ಸೂಪರ್‌ಸ್ಟಾರ್‌ ನಯನತಾರಾ

Show comments