Select Your Language

Notifications

webdunia
webdunia
webdunia
webdunia

ಸ್ಟೀವ್‌ ಮೆಕೀನ್‌ ಅನ್ನುವ ಕಪ್ಪು ದೈತ್ಯ ಪ್ರತಿಭೆಗೆ ಸಂದ ಆಸ್ಕರ್ ಪ್ರಶಸ್ತಿ...!

ಸ್ಟೀವ್‌ ಮೆಕೀನ್‌ ಅನ್ನುವ ಕಪ್ಪು ದೈತ್ಯ ಪ್ರತಿಭೆಗೆ ಸಂದ ಆಸ್ಕರ್ ಪ್ರಶಸ್ತಿ...!
, ಮಂಗಳವಾರ, 4 ಮಾರ್ಚ್ 2014 (10:25 IST)
PR
ಲಾಸ್‌ಏಂಜಲಿಸ್‌: ಕಪ್ಪು ವರ್ಣದ ಚಿತ್ರ ನಿರ್ದೇಶಕನ ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ದೊರೆತಿದೆ. ಸ್ಟೀವ್‌ ಮೆಕೀನ್‌ ಅವರ ಗುಲಾಮಗಿರಿಯ ಕಥೆಯನ್ನು ಒಳಗೊಂಡ '12 ಇಯರ್ ಎ ಸ್ಲೇವ್‌' ಚಿತ್ರಕ್ಕೆ ಅತ್ಯುತ್ತಮ ಚಿತ್ರವೆಂಬ ಅಗ್ಗಳಿಕೆಗೆ ಪಾತ್ರವಾಗಿ ಆಸ್ಕರ್‌ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಇಲ್ಲಿ ಈ ಸುದ್ದಿ ಅಷ್ಟೊಂದು ಜನರ ಗಮನ ಸೆಳೆಯಲು ಮುಖ್ಯ ಕಾರಣ ಏನೆಂದರೆ ಕಪ್ಪು ವರ್ಣೀಯ ನಿರ್ದೇಶಕನಿಗೆ ಇಂತಹ ಪ್ರಶಸ್ತಿ ಲಭ್ಯವಾಗುತ್ತಿರುವುದು ಇದೆ ಮೊದಲ ಬಾರಿ . ಆದ್ದರಿಂದ ಈ ಸಂಗತಿ ವಿಶ್ವದೆಲ್ಲೆಡೆ ತನ್ನ ಗಮನ ಸೆಳೆದಿದೆ. ಈ ಮುಖಾಂತರ ಮೆಕೀನ್‌ ಅವರು ಆಸ್ಕರ್‌ ಇತಿಹಾಸವನ್ನು ನಿರ್ಮಿಸಿದ್ದಾರೆ.

webdunia
PR
44ರ ಹರೆಯದ ನಿರ್ಮಾಪಕ, ನಿರ್ದೇಶಕ ಸ್ಟೀವ್‌ ಮೆಕೀನ್‌ ಅವರ '12 ಇಯರ್ ಎ ಸ್ಲೇವ್‌' ಚಿತ್ರವು ಅಮೆರಿಕದ ಕರಾಳ ಇತಿಹಾಸದ ಕಥಾವಸ್ತುವನ್ನು ಹೊಂದಿದೆ. ಹಾಲಿವುಡ್‌ ಚಿತ್ರಗಳೆಲ್ಲ ಈ ವಿಷಯವನ್ನು ನಿರ್ಲಕ್ಷಿಸುತ್ತಾ ಬಂದಿದೆ. ಗುಲಾಮಗಿರಿಯ ನರಕಯಾತನೆಯನ್ನು ಅನುಭವಿಸಿರುವವರಿಗೆ ಹಾಗೂ ಈಗಲೂ ಗುಲಾಮಗಿರಿಯಲ್ಲಿರುವ 2 ಕೋಟಿ ಜನರಿಗೆ ತಾನು ಈ ಆಸ್ಕರ್‌ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಮೆಕೀನ್‌ ಹೇಳಿದ್ದಾರೆ.

86ನೇ ಅಕಾಡೆಮಿ ಪ್ರಶಸ್ತಿ ಪಟ್ಟಿಯಲ್ಲಿ ಅಲ್‌ಫೋನ್ಸೋ ಕ್ಯುರನ್‌ ಅವರು 'ಗ್ರೇವಿಟಿ' 3ಡಿ ಬಾಹ್ಯಾಕಾಶ ಚಿತ್ರ ಏಳು ಆಸ್ಕರ್‌ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Share this Story:

Follow Webdunia kannada