Select Your Language

Notifications

webdunia
webdunia
webdunia
webdunia

ವಾರಾಣಸಿಯಲ್ಲಿ ಕೇಜ್ರಿವಾಲ್ ಭಾಷಣದ ಮುಖ್ಯಾಂಶಗಳು ಕೆಳಗಿವೆ ಓದಿ

ವಾರಾಣಸಿಯಲ್ಲಿ ಕೇಜ್ರಿವಾಲ್ ಭಾಷಣದ ಮುಖ್ಯಾಂಶಗಳು ಕೆಳಗಿವೆ ಓದಿ
, ಮಂಗಳವಾರ, 25 ಮಾರ್ಚ್ 2014 (19:33 IST)
PR
PR
ವಾರಾಣಸಿ: ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರಿವಾಲ್ ಉತ್ತರಪ್ರದೇಶದ ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅವರ ಭಾಷಣದ ಮುಖ್ಯಾಂಶಗಳು ಕೆಳಗಿನಂತಿವೆ. ನಾವು ಏನು ತಪ್ಪು ಮಾಡಿದೆವು? ನಮಗೆ ಕಪ್ಪು ಧ್ವಜಗಳನ್ನು ತೋರಿಸಲಾಯಿತು. ನರೇಂದ್ರ ಮೋದಿ ಗೂಂಡಾಗಳು ಕಪ್ಪು ಮಸಿಯನ್ನು ಚೆಲ್ಲಿದರು. ಬಿಜೆಪಿ ಸೋನಿಯಾ, ರಾಹುಲ್ ಗಾಂಧಿ, ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್ ಅವರಿಗೆ ಕಪ್ಪು ಧ್ವಜ ತೋರಿಸಿದೆಯಾ? ಎಂದು ಪ್ರಶ್ನಿಸಿದರು.ಕಾಂಗ್ರೆಸ್ ನರೇಂದ್ರ ಮೋದಿ, ನಿತಿನ್ ಗಡ್ಕರಿ, ಯಡಿಯೂರಪ್ಪ ಅವರಿಗೆ ಕಪ್ಪು ಧ್ವಜ ತೋರಿಸಿದೆಯೇ, ಇಲ್ಲ, ತೋರಿಸಿಲ್ಲ
ಕಾಂಗ್ರೆಸ್ ಮತ್ತು ಬಿಜೆಪಿ ಕೈಗೂಡಿಸಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕೆ?

ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ಈ ದೇಶವನ್ನು ಲೂಟಿ ಮಾಡುತ್ತಿದೆ. ಕಾಶಿಗೆ ನೀವು ಬಂದರೆ ಗಂಗಾ ನದಿ ಎಷ್ಟೇ ಮಲಿನವಾಗಿದ್ದರೂ ಪವಿತ್ರ ಸ್ನಾನ ಮಾಡಬೇಕು. ವಾರಾಣಸಿಯಲ್ಲಿ ರಸ್ತೆಗಳು, ವಿದ್ಯುತ್, ನೀರು ಪ್ರತಿಯೊಂದು ದುಸ್ಥಿತಿಯಲ್ಲಿವೆ. ವಾರಾಣಸಿಯ ಜನರಿಗೆ ಒಂದು ಸಿಹಿಸುದ್ದಿ, ಚುನಾವಣೆ ಆಯೋಗ ನಮ್ಮ ಮನವಿಗೆ ಸ್ಪಂದಿಸಿ ಅನಿಲ ದರ ಏರಿಕೆಯನ್ನು 2 ತಿಂಗಳ ಕಾಲ ಮುಂದುವರಿಸಿದೆ.2 ತಿಂಗಳ ನಂತರ ನೀವು ತಪ್ಪು ಸರ್ಕಾರವನ್ನು ಆಯ್ಕೆ ಮಾಡಿದರೆ ಈ ಭ್ರಷ್ಟಾಚಾರಕ್ಕೆ ನಮ್ಮನ್ನು ದೂರಬೇಡಿ. ನನಗೆ ದುರಾಸೆ ಇದ್ದಿದ್ದರೆ ಮುಖ್ಯಮಂತ್ರಿ ಹುದ್ದೆ ಏಕೆ ತ್ಯಜಿಸುತ್ತಿದ್ದೆ.

ಲೋಕಪಾಲ ಮಸೂದೆಗೆ ಕಾಂಗ್ರೆಸ್, ಬಿಜೆಪಿ ಅವಕಾಶ ನೀಡದಿದ್ದರಿಂದ ಮುಖ್ಯಮಂತ್ರಿ ಹುದ್ದೆ ಬಿಡಬೇಕಾಯಿತು.ಬಿಜೆಪಿ ಮತ್ತು ಕಾಂಗ್ರೆಸ್ ಅನೇಕ ವರ್ಷಗಳ ಕಾಲ ಈ ದೇಶವನ್ನು ಲೂಟಿ ಮಾಡಿದವು. ನರೇಂದ್ರ ಮೋದಿ ಗುಜರಾತಿನಲ್ಲಿ ಅಭಿವೃದ್ಧಿ ಮಾಡಿದ್ದಾರೆಂದು ಕೆಲವು ಮಾಧ್ಯಮಗಳು ನನಗೆ ಪಕ್ಷ ಮುಖ್ಯವಲ್ಲ, ದೇಶ ಮುಖ್ಯ, ಗುಜರಾತಿನಲ್ಲಿ ನಾನು ಕಂಡ ದೃಶ್ಯದಿಂದ ಮೋದಿ ವಿರುದ್ಧ ನಿಲ್ಲುವಂತೆ ಮಾಡಿದೆ.

webdunia
PR
PR
ಮೋದಿ ಪ್ರಧಾನಿಯಾದ್ರೆ ಗುಜರಾತ್ ಮಾದರಿಯಲ್ಲಿ ದೇಶವನ್ನು ಅಭಿವೃದ್ಧಿ ಮಾಡುತ್ತಾರೆಂದು ಮಾಧ್ಯಮಗಳು ಹೇಳುತ್ತಿವೆ.ನರೇಂದ್ರ ಮೋದಿ ಎಲ್ಲ ಸಬ್ಸಿಡಿಗಳನ್ನು ತೆಗೆದಿದ್ದಾರೆ. ಇಲ್ಲಿಯವರೆಗೆ 5874 ರೈತರು ಗುಜರಾತಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀವು ಮೋದಿಗೆ ವೋಟ್ ಮಾಡಿದರೆ ನಿಮ್ಮ ಭೂಮಿಯನ್ನು ಉಳಿಸಿಕೊಳ್ಳಲಾಗುವುದಿಲ್ಲ ಮತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.

ನಾನು ಕುಟುಂಬಗಳಿಗೆ, ವಾರಾಣಸಿಯ ಗೃಹಿಣಿಯರಿಗೆ ಹೇಳುವುದು, ನೀವು ಈ ಪಕ್ಷಗಳಿಗೆ ಮತ ನೀಡಿದರೆ ನಿಮ್ಮ ಸಂಬಳ ಏರಿಕೆಯಾಗುವುದಿಲ್ಲ. ಹಣದುಬ್ಬರ ಏರಿಕೆಯಾಗುತ್ತದೆ. ವಿದ್ಯುತ್, ಆಹಾರ ದರಗಳು ದುಪ್ಪಟ್ಟಾಗುತ್ತದೆ.ಬಿಜೆಪಿ ಮತ್ತು ಮೋದಿ ದುರಾಸೆಯಿಂದ ಕೂಡಿದ್ದಾರೆ. 272 ಸೀಟುಗಳನ್ನು ಗಳಿಸಲು ಯಾವ ಮಟ್ಟಕ್ಕೆ ಬೇಕಾದರೂ ಹೋಗ್ತಾರೆ. ಮೋದಿ ಕಳ್ಳರು, ಕ್ರಿಮಿನಲ್‌ಗಳ ಜತೆ ಕೈಗೂಡಿಸಿದ್ದಾರೆ.ಮೋದಿ ಎಂ‌ಎನ್‌ಎಸ್, ಬಿಹಾರದ ಶಿವಸೇನೆ ಜತೆ ಕೈಗೂಡಿಸಿದ್ದಾರೆ. ಮೋದಿ ಪ್ರಧಾನಿಯಾದ್ರೆ ಅವರ ಕ್ಯಾಬಿನೆಟ್‌ ಸಚಿವರು ಯಾರಾಗ್ತಾರೆ? ಅಮಿತ್ ಶಾ ಗೃಹ ಸಚಿವ, ಯಡಿಯೂರಪ್ಪ ಟೆಲಿಕಾಂ ಸಚಿವರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ವಿದೇಶಿ ಹೂಡಿಕೆಯನ್ನು ಬಯಸಿವೆ. ಅಂದಮೇಲೆ ಅವೆರಡು ಪಕ್ಷಗಳ ನಡುವೆ ಏನು ವ್ಯತ್ಯಾಸವಿದೆ. ಮೋದಿಗೆ ವೋಟ್ ಮಾಡಿದರೆ ಸಣ್ಣ ಉದ್ದಿಮಗಳು ವ್ಯಾಪಾರಿಗಳು ಉಳಿಯುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

Share this Story:

Follow Webdunia kannada