Webdunia - Bharat's app for daily news and videos

Install App

ಸಹೋದರ ಮತ್ತು ಅಮ್ಮನಿಗಾಗಿ ಮಾತ್ರ ಚುನಾವಣೆ ಪ್ರಚಾರ : ಪ್ರಿಯಾಂಕಾ

Webdunia
ಗುರುವಾರ, 10 ಏಪ್ರಿಲ್ 2014 (18:02 IST)
ಲೋಕಸಭಾ ಚುನಾವಣೆಗಾಗಿ ತನ್ನ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ಪರವಾಗಷ್ಟೇ ಪ್ರಚಾರ ನಡೆಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
PTI

ದೇಶದಲ್ಲಿ ನರೇಂದ್ರ ಮೋದಿ ಅಲೆ ಇರುವುದನ್ನು ಅವರು ನಿರಾಕರಿಸಿದ್ದಾರೆ.

ದೆಹಲಿಯಲ್ಲಿಂದು ಪತಿ ರಾಬರ್ಟ್ ವಾದ್ರಾ ಜೊತೆಗೆ ಮತವನ್ನು ಚಲಾಯಿಸಲು ಬಂದ ಸಂದರ್ಭದಲ್ಲಿ ಮಾತನಾಡಿದ ಅವರು "ಕಾಂಗ್ರೆಸ್ಸಿನ ಇತರೆ ಮುಖಂಡರು ಪ್ರಚಾರಕ್ಕೆ ಬರುವಂತೆ ನನ್ನನ್ನು ಕೇಳಿಕೊಂಡರು ಸಹ, ನಾನು ಕೇವಲ ನನ್ನ ತಾಯಿ ಮತ್ತು ಸಹೋದರ ಪರವಾಗಿ ಮಾತ್ರ ಪ್ರಚಾರಕ್ಕಾಗಿ ಹೋಗುತ್ತಿದ್ದೇನೆ" ಎಂದು ಹೇಳಿದರು.

ಕೆಲವು ಕಾಂಗ್ರೆಸ್ ನಾಯಕರು ತಮ್ಮ ಪರ ಪ್ರಚಾರಕ್ಕೆ ಬರುವಂತೆ ಪ್ರಿಯಾಂಕಾರಲ್ಲಿ ವಿನಂತಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಪ್ರಿಯಾಂಕಾ ಈ ಹೇಳಿಕೆಗಳನ್ನು ನೀಡಿದ್ದಾರೆ.

ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ, "ಪ್ರಿಯಾಂಕಾ ತನಗೆ ಎಲ್ಲಾ ಸಂಭಾವ್ಯ ಸಹಾಯ ನೀಡುವ ಆಶ್ವಾಸನೆ ನೀಡಿದ್ದಾರೆ" ಎಂದು ಹೇಳಿದ್ದರು. ಅಲ್ಲದೇ ಮೋದಿ ಸ್ಪರ್ಧಿಸುತ್ತಿರುವ ಎರಡನೇ ಕ್ಷೇತ್ರವಾದ ಗುಜರಾತಿನ ವಡೋದರ ರಲ್ಲಿ ಮೋದಿಗೆ ಸವಾಲು ನೀಡಲಿರುವ ಕಾಂಗ್ರೆಸ್ಸಿನ ಮತ್ತೊಬ್ಬ ಪಕ್ಷದ ಅಭ್ಯರ್ಥಿ ಮಧುಸೂದನ್ ಮಿಸ್ತ್ರಿ, ಸಹ " ಪ್ರಿಯಾಂಕಾ ತನಗಾಗಿ ಪ್ರಚಾರ ಮಾಡಿದರೆ ನಾನು ಅವರಿಗೆ "ಕೃತಜ್ಞರಾಗಿರುತ್ತೆನೆ" ಎಂದು ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments