ಲೋಕಸಭೆ ಚುನಾವಣೆ:ಆಸ್ಸಾಂನಲ್ಲಿ ಶೇ.75ರಷ್ಟು ಮತದಾನ
ನವದೆಹಲಿ , ಸೋಮವಾರ, 7 ಏಪ್ರಿಲ್ 2014 (19:06 IST)
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆಸ್ಸಾಂನ ಐದು ಕ್ಷೇತ್ರಗಳಲ್ಲಿ ಮುಕ್ತಾಯಗೊಂಡಿದ್ದು ಶೇ.75 ರಷ್ಟು ಮತದಾನವಾಗಿದೆ. ತ್ರಿಪುರಾದ ಒಂದು ಕ್ಷೇತ್ರದಲ್ಲಿ ಶೇ.84 ರಷ್ಟು ಮತದಾನವಾಗಿದೆ ಎಂದು ಚುನಾವಣೆ ಆಯೋಗ ಪ್ರಕಟಿಸಿದೆ. ಆಸ್ಸಾಂನ ಐದು ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸಂಜೆಯ ವೇಳೆಗೆ ಶೇ.72.5 ರಷ್ಟಾಗಿತ್ತು. ಮುಕ್ತಾಯದ ವೇಳೆಗೆ ಶೇ.75ಕ್ಕೆ ತಲುಪುವ ನಿರೀಕ್ಷೆಗಳಿವೆ. ಆದರೆ, ತ್ರಿಪುರಾದಲ್ಲಿ ದಾಖಲೆಯ ಶೇ.84 ರಷ್ಟು ಮತದಾನವಾಗಿದೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 2009ರಲ್ಲಿ ನಡೆದ ಆಸ್ಸಾಂ ಲೋಕಸಭೆ ಚುನಾವಣೆಯಲ್ಲಿ ಶೇ.69.60 ರಷ್ಟು ಮತದಾನವಾಗಿದ್ದರೇ ತ್ರಿಪುರಾದಲ್ಲಿ ಶೇ.86 ರಷ್ಟಾಗಿತ್ತು.