Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆ: ಆಮ್ ಆದ್ಮಿ ಪಕ್ಷದ 350ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣಕ್ಕೆ

ಲೋಕಸಭೆ ಚುನಾವಣೆ: ಆಮ್ ಆದ್ಮಿ ಪಕ್ಷದ 350ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣಕ್ಕೆ
ನವದೆಹಲಿ , ಗುರುವಾರ, 30 ಜನವರಿ 2014 (18:44 IST)
PR
PR
ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಮೇನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ 350ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಅಪರಾಧ ಚಟುವಟಿಕೆಗಳ ಆರೋಪ ಹೊತ್ತಿರುವ ಬೇರೆ ಪಕ್ಷಗಳ ರಾಜಕಾರಣಿಗಳ ವಿರುದ್ಧ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಕ್ಕೆ ಆಮ್ ಆದ್ಮಿ ಹೆಚ್ಚು ಗಮನವಹಿಸಿದೆ. ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಕ್ರಿಮಿನಲ್ ಹಿನ್ನೆಲೆಯ ಹೊಂದಿರುವ 162 ಸದಸ್ಯರ ವಿರುದ್ಧ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಕ್ಕೆ ಆದ್ಯತೆ ನೀಡುತ್ತದೆ ಎಂದು ಎಎಪಿ ತಿಳಿಸಿದೆ.ಕಳೆದ ತಿಂಗಳು ದೆಹಲಿ ಚುನಾವಣೆಯಲ್ಲಿ ಪಕ್ಷದ ಉತ್ತಮ ಸಾಧನೆ ಹಿನ್ನೆಲೆಯಲ್ಲಿ ಎಎಪಿಯ ಆಸಕ್ತಿ ಹೆಚ್ಚಿದೆ.

ಇತ್ತೀಚೆಗೆ ನಡೆಸಿದ ಸಮೀಕ್ಷೆಗಳಲ್ಲಿ ಎಎಪಿ 12 ಅಥವಾ ಅದಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವ ಸಂಭವವಿಲ್ಲ ಎಂದು ತಿಳಿಸಿವೆ. ಆದರೆ ದೆಹಲಿಯಲ್ಲಿ ಎಎಪಿಯ ಯಶಸ್ಸು ಮತ್ತು ವಿಐಪಿ ಸಂಸ್ಕೃತಿ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಭಾಷೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ತಲೆಬಿಸಿ ಉಂಟುಮಾಡಿದೆ.ಎಎಪಿಗೆ ಕೆಲವೇ ಸೀಟುಗಳು ದಕ್ಕಿದರೂ ಮೋದಿ ಅವರಿಗೆ ಸರ್ಕಾರ ರಚನೆಯ ಅವಕಾಶ ತಪ್ಪಿಹೋಗಬಹುದು ಎಂದು ಹೇಳಲಾಗುತ್ತಿದೆ.ಅನೇಕ ಮಂದಿ ಕ್ಯಾಬಿನೆಟ್ ಸಚಿವರಿದ್ದು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಅವರನ್ನು ಸೋಲಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಕೇಜ್ರಿವಾಲ್ ರಾಯ್ಟರ್ಸ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

Share this Story:

Follow Webdunia kannada