Select Your Language

Notifications

webdunia
webdunia
webdunia
webdunia

`ಮಹಿಳಾ ವಿರೋಧಿ ಮುತಾಲಿಕ್‌ಗೆ ಬಿಜೆಪಿ ಸೇರ್ಪಡೆಗೆ ಅವಕಾಶ ನೀಡಬಾರದು ಎಂದು ಹೇಳಿದ್ದೆ' : ಮನೋಹರ ಪರೀಕರ

`ಮಹಿಳಾ ವಿರೋಧಿ ಮುತಾಲಿಕ್‌ಗೆ ಬಿಜೆಪಿ ಸೇರ್ಪಡೆಗೆ ಅವಕಾಶ ನೀಡಬಾರದು ಎಂದು ಹೇಳಿದ್ದೆ' : ಮನೋಹರ ಪರೀಕರ
ಪಣಜಿ , ಬುಧವಾರ, 26 ಮಾರ್ಚ್ 2014 (10:58 IST)
PTI
"ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಹಿಳೆಯರ ವಿರೋಧಿ ಮತ್ತು ಹಿಂಸಾತ್ಮಕ ಚಟುವಟಿಕೆಯುಳ್ಳವರಾಗಿದ್ದು, ಅವರಿಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಗೆ ಅವಕಾಶ ನೀಡುವುದು ಸೂಕ್ತವಲ್ಲ ಎಂದು ಬಿಜೆಪಿ ವರಿಷ್ಠರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೆ" ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರೀಕರ ಹೇಳಿದ್ದಾರೆ.

ಈ ಕುರಿತು ಮಾಧ್ಯಮದರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಪಕ್ಷದಲ್ಲಿ ಮಹಿಳಾ ವಿರೋಧಿಗಳಿಗೆ ಮತ್ತು ಹಿಂಸಾತ್ಮಕ ಚಟುವಟಿಕೆ ಹೊಂದಿದವರಿಗೆ ಅವಕಾಶವಿಲ್ಲ. ಬಿಜೆಪಿಯ ಕರ್ನಾಟಕ ಘಟಕ ಮುತಾಲಿಕ್ ಸೇರ್ಪಡೆಗೆ ಸಂಬಂಧಿಸಿದಂತೆ ಸ್ಥಳೀಯ ಕೆಲವು ಕಾರಣಗಳಿಂದ ಕೆಲ ತಪ್ಪುಗಳನ್ನು ಎಸಗಿದೆ".

"ಯಾವುದೇ ಕಾರಣಕ್ಕೂ ಮಹಿಳಾ ವಿರೋಧಿಗಳಿಗೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರಿಗೆ ಬಿಜೆಪಿಗೆ ಅವಕಾಶ ನೀಡಬಾರದು ಎಂಬುದು ನನ್ನ ಭಾವನೆಯಾಗಿತ್ತು. ಇದು ಪಕ್ಷದ ವರ್ಚಸ್ಸಿಗೂ ಕುಂದು ತರುವಂತಹದ್ದು. ಈ ಹಿನ್ನೆಲೆಯಲ್ಲಿ ಪ್ರಮೋದ ಮುತಾಲಿಕ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು ಎಂದು ಬಿಜೆಪಿ ವರಿಷ್ಠರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೆ" ಎಂದು ಅವರು ಸ್ಪಷ್ಟಪಡಿಸಿದರು.

Share this Story:

Follow Webdunia kannada