Select Your Language

Notifications

webdunia
webdunia
webdunia
webdunia

ತಮಿಳುನಾಡಿನ 40 ಸ್ಥಾನಗಳ ಹೊರತಾಗಿಯೂ ಮೋದಿ ಪ್ರಧಾನಿಯಾಗಲಿದ್ದಾರೆ :ವೈಕೊ

ತಮಿಳುನಾಡಿನ 40 ಸ್ಥಾನಗಳ ಹೊರತಾಗಿಯೂ ಮೋದಿ ಪ್ರಧಾನಿಯಾಗಲಿದ್ದಾರೆ :ವೈಕೊ
ಚೆನ್ನೈ , ಶನಿವಾರ, 22 ಮಾರ್ಚ್ 2014 (18:28 IST)
ದೇಶಾದ್ಯಂತ ಹರಿದಾಡುತ್ತಿರುವ ಮೋದಿ ಅಲೆಯಿಂದಾಗಿ ತಮಿಳುನಾಡಿನ 40 ಸ್ಥಾನಗಳ ಹೊರತಾಗಿಯೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಎಂಡಿಎಂಕೆ ನಾಯಕ ವೈಕೊ ಹೇಳಿದ್ದಾರೆ.
PTI

ಎಂಡಿಎಂಕೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಪತ್ರಕರ್ತರ ಜತೆ ಮಾತನಾಡಿದ ವೈಕೋ, ದೇಶಾದ್ಯಂತ ಮೋದಿ ಅಲೆ ವ್ಯಾಪಕವಾಗಿ ಹರಡಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿನ 40 ಸ್ಥಾನಗಳನ್ನು ಗಣನೆಗೆ ತೆಗೆದುಕೊಳ್ಳದೇ ನೋಡಿದರೂ ನಿಶ್ಚಿತವಾಗಿ ಅವರು ಪ್ರಧಾನಿಯಾಗುತ್ತಾರೆ ಎಂದು ತಿಳಿಸಿದ್ದಾರೆ

ಎಂಡಿಎಂಕೆ ತಮಿಳುನಾಡಿನ 7 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ.

ಎಐಡಿಎಂಕೆ ಬಿಟ್ಟು ಉಳಿದ ಪಕ್ಷಗಳಿಗೆ ನೀಡುವ ಮತಗಳು ವ್ಯರ್ಥವಾಗಿ ಹೋಗುತ್ತವೆ ಎಂದು ಇತ್ತೀಚಿಗೆ ಮುಖ್ಯಮಂತ್ರಿ ಜಯಲಲಿತಾ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಕೇಂದ್ರದಲ್ಲಿ ಸರಕಾರ ರಚಿಸಲು ಕಾಂಗ್ರೆಸ್ ಪಕ್ಷ ಇತರ ಪಕ್ಷಗಳ ಬೆಂಬಲ ಪಡೆಯುವಂತಹ ಸ್ಥಿತಿ ಮಾತ್ರ ನಿರ್ಮಾಣವಾಗಬಾರದು" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಆದರೆ, ನನ್ನ ಪ್ರಕಾರ ಬಿಜೆಪಿ ಮೈತ್ರಿಕೂಟ ಹೊರತು ಪಡಿಸಿ ಇನ್ಯಾರಿಗಾದರೂ ಮತ ನೀಡಿದರೆ ಅದು ವ್ಯರ್ಥವಾಗುತ್ತದೆ. ಇತರ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಕಾಂಗ್ರೆಸ್‌ ಪಕ್ಷಕ್ಕೆ ಕೇಂದ್ರ ಸರಕಾರ ರಚಿಸಲು ಹೊರಗಿನ ಬೆಂಬಲ ಪಡೆಯಲು ನೀಡುತ್ತವೆ " ಎಂದು ವಿರುಧ್‌ನಗರ್‌ನಿಂದ ಸ್ಪರ್ಧಿಸಿರುವ ವೈಕೊ ಹೇಳಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada