Webdunia - Bharat's app for daily news and videos

Install App

ತಪ್ಪು ಮಾಡಿದ್ದು ನಾವು, ಆದರೆ ಅನುಭವಿಸಿದ್ದು ದೆಹಲಿಯ ಜನ: ರಾಹುಲ್ ಗಾಂಧಿ ವಿಷಾದ

Webdunia
ಸೋಮವಾರ, 7 ಏಪ್ರಿಲ್ 2014 (17:35 IST)
ಕಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 'ಕಳಪೆ ಪ್ರದರ್ಶನ’ ದ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಸಾಮಾನ್ಯ "ಜನರ ಒಡನಾಟದಿಂದ ದೂರವಿದ್ದುದ್ದೇ ನಮ್ಮ ಸೋಲಿಗೆ ಕಾರಣವಾಗಿದ್ದು, ತಮ್ಮ ತಪ್ಪನ್ನು ಕಾಂಗ್ರೆಸ್ ಅರಿತು ಕೊಂಡಿದೆ ಮತ್ತು ಲೋಕಸಭಾ ಚುನಾವಣೆಯ ನಂತರ ತಳಮಟ್ಟದಿಂದಲೆ ಜನರನ್ನು ಪಕ್ಷದಲ್ಲಿ ಸೇರಿಸಿಕೊಳ್ಳಲಾಗುವುದು" ಎಂದು ಹೇಳಿದ್ದಾರೆ.
PTI

ದಕ್ಷಿಣ ದೆಹಲಿಯ ಅಂಬೇಡ್ಕರ್ ನಗರದಲ್ಲಿ ಸುಮಾರು 15,000 ಜನರು ಸೇರಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಕಳೆದ "15 ವರ್ಷಗಳಿಂದ ದೆಹಲಿಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದೆ.ಆದರೂ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಂಡಿದೆ" ಎಂದರು.

" ಅಭಿವೃದ್ಧಿ ಕೆಲಸ ಮಾಡಿ ಆದರೆ, ಜನರೊಂದಿಗಿನ ಹಳೆಯ ಸಂಬಂಧವನ್ನು ತೆರೆದಿಡಿ, ಎಂದಿಗೂ ಮುಚ್ಚದಿರಿ ಎಂದು ಎಂದು ದೆಹಲಿ ನಿವಾಸಿಗಳು ಕಾಂಗ್ರೆಸ್‌ಗೆ ಸಂದೇಶವನ್ನು ನೀಡಿದ್ದಾರೆ" ಎಂದು ಅವರು ಹೇಳಿದರು.

ಇದೇ ವೇದಿಕೆಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ಸಮಯದಲ್ಲೂ ರಾಹುಲ್ ಮಾತನಾಡಿದ್ದರು. ಆದರೆ ಆ ಸಮಯದಲ್ಲಿ ಜನರ ಹಾಜರಾತಿ ತುಂಬ ಕಡಿಮೆ ಇದ್ದಿದ್ದು ದೊಡ್ಡ ಸುದ್ದಿ ಮಾಡಿತ್ತು. ಆ ಸನ್ನಿವೇಶ ಪುನರಾವರ್ತನೆಯಾಗಲು ಅವಕಾಶ ಕೊಡಬಾರದೆಂದು ಪಕ್ಷದ ನಾಯಕರು ಈ ಬಾರಿ ಜಾಗರೂಕರಾಗಿದ್ದರು.

ರಾಹುಲ್ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಲು ಆರಂಭಿಸಿದ ಕೂಡಲೇ ಜನರು ಸಭೆಯನ್ನು ಬಿಟ್ಟು ಹೊರ ಹೋಗಲು ಪ್ರಾರಂಭಿಸಿದ್ದರು. ಆಗ ರಾಹುಲ್ ಜತೆ ವೇದಿಕೆ ಹಂಚಿಕೊಂಡಿದ್ದ ಆಗಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮೈದಾನವನ್ನು ಬಿಟ್ಟು ತೆರಳದಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿರುವುದು ಕ್ಯಾಮರಾದಲ್ಲಿ ದಾಖಲಾಗಿತ್ತು. ಈ ಘಟನೆಯ ನಂತರ ಕಾಂಗ್ರೆಸ್ ವಿರೋಧ ಪಕ್ಷಗಳಿಂದ ತೀವೃ ಟೀಕೆಯನ್ನು ಎದುರಿಸಿತ್ತು .

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments