Select Your Language

Notifications

webdunia
webdunia
webdunia
webdunia

ತಪ್ಪು ಮಾಡಿದ್ದು ನಾವು, ಆದರೆ ಅನುಭವಿಸಿದ್ದು ದೆಹಲಿಯ ಜನ: ರಾಹುಲ್ ಗಾಂಧಿ ವಿಷಾದ

ತಪ್ಪು ಮಾಡಿದ್ದು ನಾವು, ಆದರೆ ಅನುಭವಿಸಿದ್ದು ದೆಹಲಿಯ ಜನ: ರಾಹುಲ್ ಗಾಂಧಿ ವಿಷಾದ
ನವದೆಹಲಿ , ಸೋಮವಾರ, 7 ಏಪ್ರಿಲ್ 2014 (17:35 IST)
ಕಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 'ಕಳಪೆ ಪ್ರದರ್ಶನ’ ದ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಸಾಮಾನ್ಯ "ಜನರ ಒಡನಾಟದಿಂದ ದೂರವಿದ್ದುದ್ದೇ ನಮ್ಮ ಸೋಲಿಗೆ ಕಾರಣವಾಗಿದ್ದು, ತಮ್ಮ ತಪ್ಪನ್ನು ಕಾಂಗ್ರೆಸ್ ಅರಿತು ಕೊಂಡಿದೆ ಮತ್ತು ಲೋಕಸಭಾ ಚುನಾವಣೆಯ ನಂತರ ತಳಮಟ್ಟದಿಂದಲೆ ಜನರನ್ನು ಪಕ್ಷದಲ್ಲಿ ಸೇರಿಸಿಕೊಳ್ಳಲಾಗುವುದು" ಎಂದು ಹೇಳಿದ್ದಾರೆ.
PTI

ದಕ್ಷಿಣ ದೆಹಲಿಯ ಅಂಬೇಡ್ಕರ್ ನಗರದಲ್ಲಿ ಸುಮಾರು 15,000 ಜನರು ಸೇರಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಕಳೆದ "15 ವರ್ಷಗಳಿಂದ ದೆಹಲಿಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದೆ.ಆದರೂ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಂಡಿದೆ" ಎಂದರು.

"ಅಭಿವೃದ್ಧಿ ಕೆಲಸ ಮಾಡಿ ಆದರೆ, ಜನರೊಂದಿಗಿನ ಹಳೆಯ ಸಂಬಂಧವನ್ನು ತೆರೆದಿಡಿ, ಎಂದಿಗೂ ಮುಚ್ಚದಿರಿ ಎಂದು ಎಂದು ದೆಹಲಿ ನಿವಾಸಿಗಳು ಕಾಂಗ್ರೆಸ್‌ಗೆ ಸಂದೇಶವನ್ನು ನೀಡಿದ್ದಾರೆ" ಎಂದು ಅವರು ಹೇಳಿದರು.

ಇದೇ ವೇದಿಕೆಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ಸಮಯದಲ್ಲೂ ರಾಹುಲ್ ಮಾತನಾಡಿದ್ದರು. ಆದರೆ ಆ ಸಮಯದಲ್ಲಿ ಜನರ ಹಾಜರಾತಿ ತುಂಬ ಕಡಿಮೆ ಇದ್ದಿದ್ದು ದೊಡ್ಡ ಸುದ್ದಿ ಮಾಡಿತ್ತು. ಆ ಸನ್ನಿವೇಶ ಪುನರಾವರ್ತನೆಯಾಗಲು ಅವಕಾಶ ಕೊಡಬಾರದೆಂದು ಪಕ್ಷದ ನಾಯಕರು ಈ ಬಾರಿ ಜಾಗರೂಕರಾಗಿದ್ದರು.

ರಾಹುಲ್ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಲು ಆರಂಭಿಸಿದ ಕೂಡಲೇ ಜನರು ಸಭೆಯನ್ನು ಬಿಟ್ಟು ಹೊರ ಹೋಗಲು ಪ್ರಾರಂಭಿಸಿದ್ದರು. ಆಗ ರಾಹುಲ್ ಜತೆ ವೇದಿಕೆ ಹಂಚಿಕೊಂಡಿದ್ದ ಆಗಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮೈದಾನವನ್ನು ಬಿಟ್ಟು ತೆರಳದಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿರುವುದು ಕ್ಯಾಮರಾದಲ್ಲಿ ದಾಖಲಾಗಿತ್ತು. ಈ ಘಟನೆಯ ನಂತರ ಕಾಂಗ್ರೆಸ್ ವಿರೋಧ ಪಕ್ಷಗಳಿಂದ ತೀವೃ ಟೀಕೆಯನ್ನು ಎದುರಿಸಿತ್ತು .

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada