Webdunia - Bharat's app for daily news and videos

Install App

ಚುನಾವಣೆಯ ನಂತರ ನಿತೀಶ್ ಕುಮಾರ್ 'ಭಿಕ್ಷುಕರಾಗುತ್ತಾರೆ' : ಬಿಜೆಪಿ ಲೇವಡಿ

Webdunia
ಗುರುವಾರ, 10 ಏಪ್ರಿಲ್ 2014 (16:28 IST)
ಬಿಜೆಪಿಯ ಚುನಾವಣಾ ಪ್ರಣಾಳಿಕೆ ಒಳಗೊಂಡಿರುವ ನೀತಿಗಳ ವಿರುದ್ಧ ಮತ್ತು ಪಕ್ಷದ ಪ್ರಧಾನಿಯಾಗಿ ನರೇಂದ್ರ ಮೋದಿಯನ್ನು ಆಯ್ಕೆ ಮಾಡಿರುವುದರ ವಿರುದ್ಧ ಕಿರುಚುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ರವರ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಸಂಸತ್ ಚುನಾವಣೆಯ ನಂತರ ಬಿಹಾರ್ ರಾಜಕಾರಣದಲ್ಲಿ ನಿತೀಶ್ "ರಾಜಕೀಯ ಭಿಕ್ಷುಕ" ರಾಗುತ್ತಾರೆ ಮತ್ತು ಲಾಲು "ಸಂಪೂರ್ಣ ಶೂನ್ಯತೆ" ಎಡೆ ಜಾರುತ್ತಾರೆ ಎಂದು ಕಿಡಿಕಾರಿದೆ.
PTI

ಬಿಜೆಪಿ ಪ್ರಣಾಳಿಕೆಯನ್ನು "ದಿಕ್ಕುತಪ್ಪಿದ ಬಂಡವಾಳಶಾಹಿವಾದ" ಎಂದು ಜರಿದಿದ್ದ ನಿತೀಶ್ ಹೇಳಿಕೆಗೆ ಪ್ರತಿದಾಳಿ ನಡೆಸಿರುವ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ರವಿಶಂಕರ್ ಪ್ರಸಾದ್ "ಇದು ನರೇಂದ್ರಮೋದಿ ಕೈಯಲ್ಲಿ ಸೋಲುವುದು ಖಚಿತವಾಗಿರುವುದಕ್ಕೆ ಹೆದರಿರುವ ನಿತೀಶ್ ಕುಮಾರ್‌ರವರ ಹತಾಶ ಮಾತು" ಎಂದು ಹೀಗಳೆದಿದ್ದಾರೆ.

" ನಿತೀಶ್ ಕುಮಾರ್ ತಾನು ಎಲ್ಲರಿಗಿಂತ ಬುದ್ಧಿವಂತ 'ರಾಜಕೀಯ ಆಟಗಾರ' ಎಂದು ಅಂದುಕೊಂಡಿದ್ದಾರೆ ಮತ್ತು ರಾಜ್ಯದ ಜನರನ್ನು 'ಪೆದ್ದ' ರೆಂದು ಭಾವಿಸಿದ್ದಾರೆ. ಆದರೆ ಜನರು ಈ ಚುನಾವಣೆಯಲ್ಲಿ ಅವರನ್ನು 'ರಾಜಕೀಯ ಭಿಕ್ಷುಕ' ನನ್ನಾಗಿಸುತ್ತಾರೆ " ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ನಂದ ಕಿಶೋರ್ ಯಾದವ್ ಭವಿಷ್ಯ ನುಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments