Select Your Language

Notifications

webdunia
webdunia
webdunia
webdunia

ಕಳೆದ ಚುನಾವಣೆಯಂತೆ ಈ ಬಾರಿಯೂ ಬಿಜೆಪಿ ಬಲೂನ್ ಒಡೆಯಲಿದೆ: ರಾಹುಲ್ ಗಾಂಧಿ

ಕಳೆದ ಚುನಾವಣೆಯಂತೆ ಈ ಬಾರಿಯೂ ಬಿಜೆಪಿ ಬಲೂನ್ ಒಡೆಯಲಿದೆ: ರಾಹುಲ್ ಗಾಂಧಿ
ನವದೆಹಲಿ , ಬುಧವಾರ, 26 ಮಾರ್ಚ್ 2014 (18:35 IST)
PR
ಕಳೆದ 2004ರಲ್ಲಿ ಭಾರತ ಶೈನಿಂಗ್ ಎಂದು ಘೋಷಿಸಿ ಚುನಾವಣೆ ಎದುರಿಸಿ ಸೋಲನ್ನು ಕಂಡಿದ್ದ ಬಿಜೆಪಿ, 2014ರ ಚುನಾವಣೆಯಲ್ಲಿ ಮೋದಿ ಅಲೆಯ ಬಲೂನ್ ಒಡೆಯಲಿದೆ. ಮೋದಿ ಪ್ರದಾನಿಯಾಗುವುದು ದೇಶಕ್ಕೆ ಅಪಾಯಕಾರಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನರೇಂದ್ರ ಮೋದಿಯವರ ಸಿದ್ದಾಂತ ಭಾರತ ವಿರೋಧಿಯಾಗಿದೆ. ಇಂತಹ ಸಿದ್ದಾಂತವನ್ನು ಸೋಲಿಸುವುದೇ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಚುನಾವಣಾ ಪೂರ್ವ ಸಮೀಕ್ಷೆಗಳು ಯಪಿಎ ಮೈತ್ರಿಕೂಟ ಚುನಾವಣೆಯಲ್ಲಿ ಸೋಲನುಭವಿಸಲಿದೆ ಎಂದು ಪ್ರಕಟಿಸುತ್ತಿವೆ. ಆದರೆ, ಚುನಾವಣಾ ಫಲಿತಾಂಶ ಪ್ರತಿಯೊಬ್ಬರನ್ನು ದಂಗುಬಡಿಸಲಿದೆ ಎಂದು ಹೇಳಿದ್ದಾರೆ.

ಭಾರತ ಶೈನಿಂಗ್ ಬಲೂನ್ ಒಡೆದಂತೆ ಬಿಜೆಪಿಯ ಮೋದಿ ಬಲೂನ್ ಕೂಡಾ ಒಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ 80 ಕ್ಷೇತ್ರಗಳು ನಿರ್ಣಾಯಕ ಪಾತ್ರವಹಿಸಲಿವೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada