Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿ, ಜೆಡಿಎಸ್‌ನಲ್ಲಿ ಗೊಂದಲ

ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿ, ಜೆಡಿಎಸ್‌ನಲ್ಲಿ ಗೊಂದಲ
, ಬುಧವಾರ, 19 ಮಾರ್ಚ್ 2014 (15:49 IST)
PR
ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಗೆಲುವಿನ ಗುರಿಯಲ್ಲಿ ರಾಜಕೀಯ ತಂತ್ರ ಹೆಣೆಯುತ್ತಿದ್ದು ಒಂದೆರಡು ಕ್ಷೇತ್ರಗಳನ್ನು ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಮೋದಿ ಅಲೆಯಲ್ಲಿ ತೇಲುತ್ತಿರುವ ಬಿಜೆಪಿಗೆ ನೇರ ಹಣಾಹಣಿ ನಡೆಯುವ ಸಾಧ್ಯತೆಗಳು ನಿಚ್ಛಳವಾಗಿದೆ.

ಕಾಂಗ್ರೆಸ್ ಪಾಳಯದಿಂದ ಕಣಕ್ಕಿಳಿಯುವರು ಯಾರು..?

ಕಾಂಗ್ರೆಸ್ ಹಾವೇರಿ ಹಾಗೂ ಧಾರವಾಡ ಇವೆರಡು ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದೆ. ಬೀದರ್‌ನಿಂದ ಧರ್ಮಸಿಂಗ್,ಗುಲ್ಭರ್ಗದಿಂದ ಮಲ್ಲಿಕಾರ್ಜುನ್ ಖರ್ಗೆ,ಚಿಕ್ಕಬಳ್ಳಾಪುರದಿಂದ ವೀರಪ್ಪ ಮೊಯ್ಲಿ,ರಾಮನಗರದಿಂದ ಡಿಕೆ ಸುರೇಶ್, ಮಂಡ್ಯದಿಂದ ರಮ್ಯಾ, ಉಡುಪಿ-ಚಿಕ್ಕಮಗಳೂರಿನಿಂದ ಜಯಪ್ರಕಾಶ್ ಹೆಗ್ದೆ, ಚಾಮರಾಜನಗರದಿಂದ ಧ್ರುವನಾರಾಯಣ,,ಮೈಸೂರಿನಿಂದ ಹೆಚ್.ವಿಶ್ವನಾಥ,ಕೋಲಾರದಿಂದ ಕೆ.ಹೆಚ್.ಮುನಿಯಪ್ಪ,ಬೆಂಗಳೂರು ದಕ್ಷಿಣದಿಂದ ನಂದನ ನಿಲೇಕಣಿ,ದಕ್ಷಿಣ ಕನ್ನಡದಿಂದ ಜನಾರ್ಧನ ಪೂಜಾರಿ,ಕೊಪ್ಪಳದಿಂದ ಬಸವರಾಜ ಹಿಟ್ನಾಳ್,ಬೆಳಗಾವಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್,ಚಿಕ್ಕೋಡಿಯಿಂದ ಪ್ರಕಾಶ್ ಹುಕ್ಕೇರಿ,ಚಿತ್ರದುರ್ಗದಿಂದ ಚಂದ್ರಪ್ಪ,ರಾಯಚೂರಿನಿಂದ ಬಿ.ವಿನಾಯಕ,ಬಾಗಲಕೋಟೆಯಿಂದ ಅಜಯಕುಮಾರ್ ಸರನಾಯಕ,ಬೆಂಗಳೂರು ಕೇಂದ್ರದಿಂದ ರಿಜ್ವಾನ್ ಇರ್ಷದ್,ಬಿಜಾಪುರದಿಂದ ಪ್ರಕಾಶ್ ರಾಥೋಡ್,ಬಳ್ಳಾರಿಯಿಂದ ಎಸ್ ವೈ ಹನುಮಂತಪ್ಪ,ದಾವಣಗೆರೆಯಿಂದ ಎಸ್ ಮಲ್ಲಿಕಾರ್ಜುನ್, ಹಾಸನದಿಂದ ಎ ಮಂಜು,ತುಮಕೂರಿನಿಂದ ಮುದ್ದ ಹನುಮೇಗೌಡ,ಬೆಂಗಳೂರು ಉತ್ತರದಿಂದ ಸಿ.ನಾರಾಯಣಸ್ವಾಮಿ ಕಣಕ್ಕಿಳಿದರೆ,ಶಿವಮೊಗ್ಗದಿಂದಮಂಜುನಾಥ ಭಂಡಾರಿ/ಕುಮಾರ್ ಬಂಗಾರಪ್ಪ ನಡುವೆ ಟಿಕೆಟ್ ಗಾಗಿ ಸ್ಪರ್ಧೆ ಏರ್ಪಟ್ಟಿದೆ.

webdunia
PR
ಕಮಲವರಳಿಸ್ತಾರಾ ಇವರು..?

ಜೆಡಿಎಸ್ ಸೇರಿದಂತೆ ಕಾಂಗ್ರೆಸ್‌ಗೆ ಸೋಲನ್ನುಣ ಬಡಿಸಲು ಹವಣಿಸುತ್ತಿರುವ ಬಿಜೆಪಿ 25 ಕ್ಷೇತ್ರಗಳಲ್ಲಿ ತನ್ನ ಪ್ರಭಲ ಅಭ್ಯರ್ಥಿಗಳನ್ನು ಆಖಾಡಕ್ಕಿಳಿಸಿದ್ದು ಬಳ್ಳಾರಿಯಿಂದ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.ಶಿವಮೊಗ್ಗದಲ್ಲಿ ಬಿ.ಎಸ್ ಯಡಿಯೂರಪ್ಪ,ಚಾಮರಾಜನಗರದಲ್ಲಿ ಎ ಆರ್ ಕೃಷ್ಣಮೂರ್ತಿ,ದಕ್ಷಿಣ ಕನ್ನಡದಲ್ಲಿ ನಳೀನ್ ಕುಮಾರ್ ಕಟೀಲು, ಉತ್ತರಕನ್ನಡದಲ್ಲಿ ಅನಂತ ಕುಮಾರ್ ಹೆಗಡೆ,ಧಾರವಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಹಾವೇರಿಯಿಂದ ಶಿವಕುಮಾರ್ ಉದಾಸಿ,ಬೆಳಗಾವಿಯಲ್ಲಿ ಸುರೇಶ್ ಅಂಗಡಿ,ಚಿಕ್ಕೋಡಿಯಿಂದ ರಮೇಶ್.ವಿ.ಕತ್ತಿ,ಬಾಗಲಕೋಟೆಯಿಂದ ಪಿ.ಸಿ.ಸಿದ್ದಿಗೌಡರ್,ಬಿಜಾಪುರದಿಂದ ರಮೇಶ್ ಸಿ.ಜಿಗಜಿಣಗಿ,ರಾಯಚೂರಿನಿಂದ ಕೆ.ಶಿವನಗೌಡ ನಾಯ್ಕ, ಕೊಪ್ಪಳದಿಂದ ಸಂಗಣ್ಣ.ವಿ.ಕರಡಿ,ದಾವಣಗೆರೆಯಿಂದ ಜಿ.ಎಮ್.ಸಿದ್ದೇಶ್ವರ,ಚಿತ್ರದುರ್ಗದಿಂದ ಜನಾರ್ಧನ ಸ್ವಾಮಿ,ಚಿಕ್ಕಬಳ್ಳಪುರದಿಂದ ಬಿ.ಎನ್ ಬಚ್ಚೇಗೌಡ,ಬೆಂಗಳೂರು ಗ್ರಾಮಾತರದಿಂದ ವಿ.ಮುನಿರಾಜು ಗೌಡ,ಬೆಂಗಳೂರು ದಕ್ಷೀಣ ದಿಂದ ಅನಂತಕುಮಾರ್,ಬೆಂಗಳೂರು ಸೆಂಟ್ರಲ್ ನಿಂದ ಪಿ.ಸಿ. ಮೋಹನ್,ಬೆಂಗಳೂರು ಉತ್ತರದಿಂದ ಡಿ.ವಿ.ಸದಾನಂದ ಗೌಡ,ಮೈಸೂರಿನಿಂದ ಪ್ರತಾಪ್ ಸಿಂಹ,ಮಂಡ್ಯದಿಂದ ಡಾ.ಬಿ.ಶಿವಲಿಂಗಯ್ಯ,ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ,ತುಮಕೂರಿನಿಂದ ಜಿ.ಎಸ್.ಭಸವರಾಜ,ಕೋಲಾರದಿಂದ ಎಮ್.ನಾರಾಯಣಸ್ವಾಮಿ ಅವರು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Share this Story:

Follow Webdunia kannada