Webdunia - Bharat's app for daily news and videos

Install App

100ನೇ ಶತಕ ಕೇವಲ ಅಂಕಿ ಮಾತ್ರ: ಇದು ಮಾಸ್ಟರ್ ನುಡಿ..!

Webdunia
ಶುಕ್ರವಾರ, 18 ನವೆಂಬರ್ 2011 (18:21 IST)
WD
WD
ಭಾರತದ ಕ್ರಿಕೆಟ್‌ ಪ್ರೇಮಿಗಳ ಆರಾಧ್ಯ ದೈವವಾಗಿರುವ ಸಚಿನ್‌ ತೆಂಡುಲ್ಕರ್ ಅವರು ವೆಸ್ಟ್‌ ಇಂಡೀಸ್‌ ವಿರುದ್ಧ ಮುಂದಿನ ವಾರ ನಡೆಯಲಿರುವ ಅಂತಿಮ ಟೆಸ್ಟ್‌ನಲ್ಲಿ ತಮ್ಮ ನೂರನೇ ಶತಕ ದಾಖಲಿಸುವುದಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸಚಿನ್‌ ಅವರ ಪ್ರಕಾರ ಇದೊಂದು ಅಂಕಿ ಸಂಖ್ಯೆಯ ಲೆಕ್ಕಾಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಸಚಿನ್‌ ತೆಂಡುಲ್ಕರ್‌ ಅವರು ನೂರನೇ ಶತಕ ದಾಖಲಿಸಿ ದಾಖಲೆ ನಿರ್ಮಿಸುವುದನ್ನು ನೋಡಲು ಅವರ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದರೂ ಸಚಿನ್‌ ಮಾತ್ರ ನಿರಾಳರಾಗಿದ್ದಂತೆ ಕಂಡು ಬಂದರು.

ನೂರನೇ ಶತಕ ಬರೀ ಅಂಕಿ ಅಂಶ ಎಂದು ನನಗನ್ನಿಸುತ್ತದೆ ಎಂದು ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಯಶಸ್ವೀ ಬ್ಯಾಟ್ಸ್‌ಮನ್‌ ಎನಿಸಿರುವ ಸಚಿನ್‌ ತೆಂಡುಲ್ಕರ್‌ ತಿಳಿಸಿದ್ದಾರೆ.

ನಾನು ನೂರನೇ ಶತಕದ ಬಗ್ಗೆ ಯೋಚಿಸುತ್ತಿಲ್ಲ. ಉತ್ತಮವಾಗಿ ಕ್ರಿಕೆಟ್‌ ಆಡುವ ಕುರಿತು ಯೋಚಿಸುತ್ತಿದ್ದೇನೆ. ನಾನೀಗ ನನ್ನ ಆಟವನ್ನು ಆನಂದಿಸುತ್ತೇನೆ ಎಂದು ತೆಂಡುಲ್ಕರ್ ವಿವರಿಸಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್‌ 22ರಂದು ಆರಂಭವಾಗಲಿರುವ ಭಾರತ- ವೀಂಡೀಸ್‌ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಸಚಿನ್‌ ಅವರು ನೂರನೇ ಶತಕ ದಾಖಲಿಸಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಸಚಿನ್‌ ಅನಗತ್ಯ ಗಡಿಬಿಡಿಯ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ನಾನು ನನ್ನ 90ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದಾಗ ಯಾರೊಬ್ಬರೂ ಏನೂ ಹೇಳಲಿಲ್ಲ, ನನ್ನ 99ನೇ ಶತಕಕ್ಕೆ ಮುನ್ನವೂ ಸಹಾ ಯಾರೊಬ್ಬರೂ ಏನೂ ಹೇಳಿರಲಿಲ್ಲ. ಆದರೆ ಈಗೇಕೆ ಅದರ ಬಗ್ಗೆ ಚಿಂತಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ ಎಂದು ಸಚಿನ್‌ ತಿಳಿಸಿದ್ದಾರೆ.

ಪ್ರತಿಯೊಬ್ಬರೂ ನನ್ನ 100ನೇ ಶತಕದ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಿದ್ದಾರೆ ಎಂದು ನನಗೆ ಗೊತ್ತು. ಆದರೆ ಇದು ಯಾವಾಗ ನಡೆಯಬೇಕು ಎಂಬುದನ್ನು ಕ್ರಿಕೆಟ್‌ ನಿರ್ಧರಿಸಲಿದೆ. ನಾನು ಶತಕ ಗಳಿಸುವ ಧಾವಂತದಲ್ಲಿ ಕ್ರಿಕೆಟ್‌ ಆಡುವುದಿಲ್ಲ. ಸಹಜವಾಗಿಯೇ ಕ್ರಿಕೆಟ್‌ ಆಡುತ್ತೇನೆ ಎಂದು ಸಚಿನ್‌ ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಗಪುರದಲ್ಲಿ ನಡೆದ ವಿಶ್ವಕಪ್‌‌ ಪಂದ್ಯದಲ್ಲಿ 99 ಶತಕಗಳನ್ನು ಪೂರೈಸಿರುವ ಸಚಿನ್‌ ತದಾ ನಂತರ ನಾಲ್ಕು ಏಕದಿನ ಪಂದ್ಯಗಳು ಹಾಗೂ ಆರು ಟೆಸ್ಟ್‌ಗಳನ್ನು ಆಡಿದ್ದರೂ ತಮ್ಮ ನೂರನೇ ಶತಕವನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನೂರನೇ ಶತಕ ಪೂರೈಸುವತ್ತ ದಾಪುಗಾಲಿಟ್ಟಿದ್ದ ಸಚಿನ್‌ ಮೂರು ಬಾರಿ ಶತಕ ಸಮೀಪಿಸುತ್ತಿದ್ದಂತೆ ಔಟ್‌ ಆಗಿದ್ದರು. ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ 85 ರನ್‌ ಗಳಿಸಿ ಔಟ್‌ ಆಗಿದ್ದ ಸಚಿನ್‌ ಇಂಗ್ಲೆಂಡ್‌ ವಿರುದ್ಧ ನಡೆದ ಓವೆಲ್‌ ಟೆಸ್ಟ್‌ನಲ್ಲಿ 91ಗಳಿಸಿದ್ದರು. ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ 76ರನ್‌ ಗಳಿಸಿದ್ದರು.

ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 22 ವರ್ಷ ಪೂರೈಸಿರುವುದರಿಂದ ಉದ್ವೇಗಗೊಂಡಿದ್ದೇನೆ ಎಂದು ಲಿಟ್ಲ್ ಮಾಸ್ಟರ್ ತಿಳಿಸಿದ್ದಾರೆ. 1989ರ ನವೆಂಬರ್ 15ರಂದು ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಆಡುವ ಮೂಲಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ನಾನು 22 ವರ್ಷ ಕ್ರಿಕೆಟ್‌ ರಂ‌ಗದಲ್ಲಿ ಸೇವೆ ಸಲ್ಲಿಸಿರುವ ಬಗ್ಗೆ ನನಗೆ ಅದ್ಭುತವಾದ ಅನುಭವವಾಗಿದೆ. ಎರಡು ದಶಕಗಳ ಕಾಲ ದೇಶಕ್ಕಾಗಿ ಆಡಿರುವ ಬಗ್ಗೆ ನನಗೆ ಸಂತೃಪ್ತಿಯಿದೆ ಎಂದು ಸಚಿನ್‌ ಅಭಿಪ್ರಾಯಪಟ್ಟಿದ್ದಾರೆ.

ಸಚಿನ್‌ ತೆಂಡುಲ್ಕರ್‌ ಅವರು 183 ಟೆಸ್ಟ್‌ ಪಂದ್ಯದಲ್ಲಿ 51ಶತಕಗಳು ಸೇರಿದಂತೆ ಒಟ್ಟು 15,086 ರನ್‌ ಹಾಗೂ 453 ಏಕದಿನ ಪಂದ್ಯಗಳಲ್ಲಿ 48 ಶತಕಗಳು ಸೇರಿದಂತೆ 18,111ರನ್‌ ಗಳಿಸಿದ್ದಾರೆ.

ಸಚಿನ್‌ ತೆಂಡುಲ್ಕರ್‌ ಅವರು ವೆಸ್ಟ್‌ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್‌ ಅಥವಾ ಏಕದಿನ ಸರಣಿಯಲ್ಲಿ ತಮ್ಮ ನೂರನೇ ಶತಕ ಗಳಿಸಲು ವಿಫಲವಾದರೆ ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ನಡೆಯಲಿರುವ ನಾಲ್ಕು ಟೆಸ್ಟ್ ಪಂದ್ಯಗಳ ವರೆಗೆ ಕಾಯುವುದು ಅನಿವಾರ್ಯವಾಗುತ್ತದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments