ದ್ರಾವಿಡ್‌ಗೂ ಸಲಾಂ... ಇದೇ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಬಗ್ಗೆಯೂ ಪ್ರಶಂಸೆಯ ಮಾತುಗಳನ್ನಾಡಿರುವ ಈ ಉತ್ತರ ಪ್ರದೇಶ ಆಲ್‌ರೌಂಡರ್, ದ್ರಾವಿಡ್ ತನಗೆ ಪ್ರೇರಣೆಯಾಗಿದ್ದಾರೆ ಎಂದಿದ್ದಾರೆ.
ದ್ರಾವಿಡ್ ಓರ್ವ ಸಭ್ಯ ಹಾಗೂ ಗಮನ ಕೇಂದ್ರಿತ ಆಟಗಾರ. ಅವರು ಹಗುರವಾಗಿ ಮಾತನಾಡಿದ್ದನ್ನು ಕೇಳಲು ಸಾಧ್ಯವೇ ಇಲ್ಲ. ನನ್ನ ಸಾಮರ್ಥ್ಯದ ಮೇಲೆ ನಂಬಿಕೆಯನ್ನಿರಿಸಿದ ಅವರಿಗೆ ನಾನು ಬದ್ಧನಾಗಿರುತ್ತೇನೆ ಎಂದು ದ್ರಾವಿಡ್ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧ 2005ರಲ್ಲಿ ಅಂತರಾಷ್ಟ್ರೀಯ ಏಕದಿನ ಕೆರಿಯರ್‌ಗೆ ಪದಾರ್ಪಣೆ ಮಾಡಿದ್ದ ದ್ರಾವಿಡ್ ತಿಳಿಸಿದರು.
ಏಕದಿನದಲ್ಲಿ ಎದುರಿಸಿದ ಮುರಳೀಧರನ್ ಅವರ ಮೊದಲ ಎಸೆತದಲ್ಲೇ ನಾನು ಕ್ಲೀನ್ ಬೌಲ್ಡ್ ಆದೆ. ಆದರೆ ಸಂಜೆಯ ಹೊತ್ತಿಗೆ ನನ್ನ ಬಳಿಗೆ ಬಂದ ದ್ರಾವಿಡ್, ರಿಲಾಕ್ಸ್ ಆಗಿರು ಇನ್ನೂ ಸಾಕಷ್ಟು ದೂರ ಕ್ರಮಿಕರಿಸಬೇಕಾಗಿದೆ ಎಂದು ಆಶ್ವಾಸನೆ ಮಾಡಿರುವುದಾಗಿ ರೈನಾ ನೆನಪಿಸಿಕೊಂಡರು.
ತಾನೀಗ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಕೆಲಸ ಮಾಡುತ್ತಿರುವುದಾಗಿ ತಿಳಿಸಿರುವ ರೈನಾ, ಉತ್ತಮ ನಿರ್ವಹಣೆ ಕುರಿತು ಗಮನ ವಹಿಸಿರುವುದೇ ಇಷ್ಟರ ತನಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿದೆ ಎಂದರು.
100 ನೇ ಶತಕದ ಹೊಸ್ತಿಲಲ್ಲಿರುವ ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡಿದ ಅವರು, ಇತರರ ಯಶಸ್ಸನ್ನು ಸಹಆನಂದಿಸುತ್ತಿರುವುದು ಸಚಿನ್‌ರನ್ನು ಇತರರಿಗಿಂತ ಹೆಚ್ಚು ವಿಶೇಷವನ್ನಾಗಿಸುತ್ತದೆ ಎಂದರು.