Select Your Language

Notifications

webdunia
webdunia
webdunia
webdunia

ಶಿಲ್ಪಾ ಶೆಟ್ಟಿಗೆ ಮತ್ತೊಂದು ಮಗು ಬೇಕಂತೆ?

ಶಿಲ್ಪಾ ಶೆಟ್ಟಿಗೆ ಮತ್ತೊಂದು ಮಗು ಬೇಕಂತೆ?
ಮುಂಬೈ , ಬುಧವಾರ, 28 ಆಗಸ್ಟ್ 2013 (11:05 IST)
PR
ಚಿಕ್ಕವಳಿದ್ದಾಗ ಶಿಕ್ಷಕಿ ಪ್ರತಿನಿತ್ಯ ಕ್ಲಾಸಿನಲ್ಲಿ ನಿಲ್ಲಿಸಿಕೊಂಡು ಮುಂದೆ ದೊಡ್ಡವಳಾದ ಬಳಿಕ ನೀನೆನು ಆಗುತ್ತಿ ಎಂದು ಕೇಳುತ್ತಿದ್ದರು. ಇದೇ ಪ್ರಶ್ನೆ ಬಂಧುಗಳು ಸುತ್ತಮುತ್ತಲಿನ ಮಂದಿಯೂ ಕೇಳುತ್ತಿದ್ದರು. ಆಗೆಲ್ಲಾ ನನಗೆ ಏನು ಹೇಳಬೇಕೆಂದು ತಿಳಿಯುತ್ತಿರಲಿಲ್ಲ. ಆದರೆ ಈಗ ಆ ಪ್ರಶ್ನೆಗೆ ಉತ್ತರ ತಿಳಿದಿದೆ. ಈಗ ಯಾರಾದರೂ ಅದೇ ಪ್ರಶ್ನೆ ಕೇಳಿದರೆ ನನಗೆ ಮತ್ತೆ ಮಗು ಬೇಕು ಅಂತ ಹೇಳುತ್ತೀನಿ ಎಂದಿದ್ದಾರೆ ಶಿಲ್ಪಾ ಶೆಟ್ಟಿ. ಕಳೆದ ವರ್ಷ ಒಂದು ಮಗುವಿಗೆ ಇದೀಗ ಮತ್ತೆ ಮತ್ತೊಂದು ಮಗು ಬೇಕು ಎಂದೆನಿಸಿದೆಯಂತೆ. 38 ವರ್ಷ ತುಂಬಿರುವ ಶಿಲ್ಪಾ ವಿಹಾನ್ಗೆ ತಾಯಿ ಆಗಿದ್ದಾರೆ. ರಾಜ್ ಕುಂದ್ರಾ ಈ ಮಗುವಿನ ತಂದೆ. ಆತನಿಗೆ ಅದಾಗಲೇ ಮದುವೆ ಆಗಿ ಡೈವೋರ್ಸ್ ಕೂಡಾ ಆಗಿರುವುದು ಹಳೇ ಸಂಗತಿ.

ಲಂಡನ್ನಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿದ್ದರೂ 2-3 ವರ್ಷದ ಪರಿಚಯ ಮದುವೆಯಲ್ಲಿ ಅಂತ್ಯವಾಗಿತ್ತು. ಮಗ ವಿಹಾನ್ ಹುಟ್ಟಿದ ಬಳಿಕ ಶಿಲ್ಪಾ ಕೆಲ ಕಾಲ ಹೊರಗೆ ಕಾಣಿಸಿಕೊಂಡಿರಲಿಲ್ಲ. ಈಗ ಇನ್ನೊಂದು ಮಗುವಿಗೆ ತಾಯಿಯಾಗುವ ಕಾತರದಲ್ಲಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ಮತ್ತೊಮ್ಮೆ ಗರ್ಭಿಣಿಯಾಗಿದ್ದೇನೆ ಎಂಬ ಸಂದೇಶವನ್ನು ಹೊರಹಾಕಿದ್ದಾರೆ ಎಂಬುದಾಗಿ ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರಂತೆ.

Share this Story:

Follow Webdunia kannada