Webdunia - Bharat's app for daily news and videos

Install App

ಪ್ರೇಮ ವಿವಾಹ ಯಾಕೆ ಸಫಲವಾಗುವುದಿಲ್ಲ?: ಉತ್ತರ

Webdunia
WD
ಪ್ರೀತಿ. ಯಾರಿಗೆ ಆಗುವುದಿಲ್ಲ ಹೇಳಿ. ಇಂತಹ ಪ್ರೀತಿಯ ಬಗ್ಗೆ, ಪ್ರೇಮ ವಿವಾಹದ ಬಗ್ಗೆ ಜ್ಯೋತಿಷ್ಯದಲ್ಲೂ ಕೆಲವಾರು ವಿವರಗಳು ಸಿಗುತ್ತವೆ.

ವರ್ತಮಾನದ ಆಧುನಿಕತೆ ಪ್ರವೇಶ, ಬಿಚ್ಚುಸಂಸ್ಕೃತಿ, ಟಿವಿ, ಸಿನಿಮಾ, ವ್ಯಾಲೆಂಟೈನ್ ಡೇ... ನಮ್ಮ ಸಂಸ್ಕೃತಿ ಹಲವನ್ನು ಒಳಗೊಂಡು ಮುಂದೆ ಹೋಗುತ್ತಲೇ ಇದೆ. ಹೀಗಾಗಿ ಪ್ರೀತಿ, ಪ್ರೇಮಗಳ ಪ್ರಕರಣಗಳೂ ಹೆಚ್ಚಾಗುತ್ತಲೇ ಇವೆ. ಜತೆಗೆ ಪ್ರೇಮ ವಿವಾಹ ಬೆಳೆದಂತೆಯೇ ವಿಚ್ಚೇದನವೂ ಹೆಚ್ಚಾಗುತ್ತಲೇ ಇವೆ.

ಯಾವ ಗ್ರಹಗಳ ಕಾರಣದಿಂದ ವ್ಯಕ್ತಿಯೊಬ್ಬ ಪ್ರೇಮಕ್ಕೆ ಬೀಳುತ್ತಾನೋ.. ಅದೇ ಗ್ರಹಗಳ ಕಾರಣದಿಂದಲೇ ಆ ವ್ಯಕ್ತಿ ತನ್ನ ಪ್ರೇಮದಲ್ಲಿ ವಿಫಲನೂ/ಳೂ ಆಗುತ್ತಾನೆ/ಳೆ ಎಂಬುದು ಜ್ಯೋತಿಷ್ಯದ ವಿಶೇಷ ಕುತೂಹಲಕರ ವಿಷಯ. ಪ್ರೇಮ ವಿವಾಹಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸ್ಪಷ್ಟ ವಿವರಗಳು ಸಿಗದಿದ್ದರೂ, ಪ್ರೇಮ ವಿವಾಹ ಯಾಕೆ ಸಫಲವಾಗುವುದು ಕಡಿಮೆ ಎಂಬುದಕ್ಕೆ ಹಲವು ಕಾರಣಗಳು ಸಿಗುತ್ತವೆ.

1. ಶುಕ್ರ ಅಥವಾ ಮಂಗಳನ ಸ್ಥಿತಿ ಪ್ರೇಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಯವುದೇ ಜಾತಕದ ಕುಂಡಲಿಯಲ್ಲಿ ಶುಕ್ರ ಹಾಗೂ ಮಂಗಳ ಅನುಕೂಲ ಸ್ಥಿತಿಯಲ್ಲಿ ಇಲ್ಲದಿದ್ದರೆ, ಪ್ರೇಮ ಸಂಬಂಧದಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗುತ್ತದೆ. ಅಂದರೆ ಪ್ರೇಮ ವಿಫಲವಾಗಿ ನೋವಿನಲ್ಲಿ ನರಳಬೇಕಾಗುತ್ತದೆ.

ND
2. ಸಪ್ತಮ ಭಾವ ಅಥವಾ ಸಪ್ತಮೇಶದ ಪಾಪ ಪೀಡಿತನಾದರೂ ಪ್ರೇಮ ವಿಫಲವಾಗುತ್ತದೆ. ಅಂದರೆ ಸಪ್ತಮೇಶ ಹಾಗೂ ಪಂಚಮೇಶಗಳ ಸ್ಥಿತಿ ಸಪ್ತಮ ಹಾಗೂ ಪಂಚಮದ ಜತೆ ಸಂಬಂಧ ಹೊಂದಿರದಿದ್ದಲ್ಲಿ ಪ್ರೇಮದಲ್ಲಿ ವಿರಸ ಉಂಟಾಗುತ್ತದೆ.

3. ಸೂರ್ಯನಲ್ಲಿರುವ ಶುಕ್ರನ ಮೇಲೆ ಚಂದ್ರನ ಪ್ರಭಾವವಿದ್ದರೆ ಪ್ರೇಮ ಸಂಬಂಧ ಮದುವೆಯವರೆಗೆ ತಲುಪಿದರೂ ಮದುವೆಯ ನಂತರ ವಿಚ್ಚೇದನದಲ್ಲೇ ಅಂತ್ಯವಾಗುತ್ತದೆ. ಸೂರ್ಯ ಹಾಗೂ ಚಂದ್ರನ ಮಧ್ಯೆ ಶುಕ್ರ ಬಂದಲ್ಲಿ ಅದು ಪ್ರೇಮದ ಅವಸಾನ ಎಂದೇ ಅರ್ಥ.

4. ಪ್ರೇಮವಿವಾಹಕ್ಕಾಗಿ ಜನ್ಮ ಕುಂಡಲಿಯಲ್ಲಿ ಮೊದಲು ಐದನೇ ಸಪ್ತಮ ಭಾವದ ಜತೆ ಜತೆಗೆ 12ನೇ ಭಾವವನ್ನೂ ನೋಡಬೇಕು. ಯಾಕೆಂದರೆ ಮದುವೆಯ ಸಮದಲ್ಲಿ 12ನೇ ಮನೆ ಶಯನ ಸುಖದ ಭಾವವಾದ್ದರಿಂದ ಅದ್ನನೂ ಮದುವೆಯ ಸಮಯ ಕುಂಡಲಿ ಹೊಂದಣಿಕೆಯ ಸಮಯದಲ್ಲಿ ನೋಡುತ್ತಾರೆ. ಇದರಲ್ಲೂ ತೊಂದರೆಯಿದ್ದರೆ ವಿವಾಹ ನಂತರ ವಿರಸದಲ್ಲಿ ಅಂತ್ಯವಾಗುವ ಸಂಭವಗಳಿವೆ.

ಪ್ರೇಮ ವಿವಾಹ ಚೆನ್ನಾಗಿರಬೇಕಾದರೂ ಜ್ಯೋತಿಷ್ಯದ್ಲಲಿ ಸಾಕಷ್ಟು ಸೂತ್ರಗಳಿವೆ.

1. ಶುಕ್ರನನ್ನು ಆರಾಧಿಸಿ.
2. ಪಂಚಮೇಶ ಅಥವಾ ಸಪ್ತಮೇಶನ ಪೂಜೆ ಮಾಡಿ.
3. ಪಂಚಮೇಶನ ರತ್ನ ಧಾರಣೆ ಮಾಡಿ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Show comments