Webdunia - Bharat's app for daily news and videos

Install App

ಗುರು ಸ್ಥಾನ ಪಲ್ಲಟ ಧನುಸ್ಸು ರಾಶಿ ಫಲಾಫಲಗಳು

Webdunia
WD
ತಾನಾಯ್ತು, ತನ್ನ ಮಕ್ಕಳಾಯ್ತು, ಮನೆ ಇದೆ , ತಿನ್ನಲು ಇದೆ ಬೇರೇನು ಬೇಡವೆಂದು ಹೇಳದೆ ದೇಶ, ತಾಯ್ನುಡಿ ಮೇಲೆ ಅಪಾರ ಪ್ರೀತಿಯಿರಿಸಿಕೊಂಡಿದ್ದೀರಿ. ಬೇರೇನೂ ಪ್ರತಿಫಲ ನಿರೀಕ್ಷಿಸದೆ ಯಾವುದೇ ಕೆಲಸಕ್ಕೆ ಸಹಾಯ ಮಾಡುತ್ತೀರಿ. ಒಂದೇ ನಿಮಿಷದಲ್ಲಿ ಎದುರಿನಲ್ಲಿರುವವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದೆ ನಿಮಗೆ. ಜೀವನದಲ್ಲಿ ಏನೆಲ್ಲಾ ಕಷ್ಟಗಳು ಎದುರಾದರೂ ಎಲ್ಲವನ್ನು ಸಹನೆಯಿಂದ ಅನುಭವಿಸಿದ್ದೀರಿ.
ಇದುವರೆಗೆ ನಿಮ್ಮ ರಾಶಿಯಲ್ಲಿ ವ್ಯಯಸ್ಥಾನದಲ್ಲಿದ್ದು ಅಪಾರವಾದ ಖರ್ಚುಗಳನ್ನು ಮಾಡಿಸುತ್ತಿದ್ದ ಗುರುಭಗವಾನ್ ಇನ್ನು ಮುಂದೆ ನಿಮ್ಮ ರಾಶಿಯೊಳಗೇ ಪ್ರವೇಶ ಮಾಡುತ್ತಾನೆ. ಜನ್ಮಗುರುವೆಂದು ಹೆದರಬೇಡಿ. ನೀವು ಗುರುವಿನ ರಾಶಿಯಲ್ಲಿಯೇ ಜನಿಸಿರುವುದರಿಂದ, ಗುರು ತನ್ನ ಸ್ವಂತ ಮನೆಗೆ ಬರುವುದರಿಂದ ಈ ಗುರುವಿನ ಸ್ಥಾನ ಪಲ್ಲಟದಿಂದ ನಿಮಗೆ ಹೆಚ್ಚು ಶುಭವಾಗುತ್ತದೆ. ಕೆಟ್ಟ ಫಲಗಳು ಕಡಿಮೆಯಾಗುತ್ತವೆ.
ನಿಮ್ಮ ಕೈಯಲ್ಲಿ ಯಾವ ಕೆಲಸವೂ ಮಾಡಲಾಗುವುದಿಲ್ಲ ಎಂದು ನಿಮ್ಮನ್ನು ಕಡೆಗಣಿಸಿದರು. ಅದಕ್ಕೆ ಎದುರೇಟಿನಂತೆ ನೀವು ಸಮರ್ಥವಾಗಿ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತೀರಿ. ಆದರೆ ಗಂಡ ಹೆಂಡಿರ ಮಧ್ಯೆ ಅನಗತ್ಯ ಸಂದೇಹಗಳು ಬರುತ್ತವೆ; ವಾಗ್ವಾದವೂ ಇರುತ್ತದೆ.ಹೆಂಡತಿಗೆ ಔಷಧಿ ಖರ್ಚು.ಮಡದಿಯ ಮುಖಾಂತರ ಬಂಧು ವರ್ಗದಲ್ಲಿ ಮನಸ್ತಾಪವುಂಟಾಗುತ್ತದೆ. ನಿಮ್ಮ ಮಕ್ಕಳೇ ನಿಮ್ಮ ವಿರುದ್ಧ ಮಾತನಾಡಿದರಲ್ಲವೆ? ಗುರುಭಗವಾನ್ 5ನೇ ಸ್ಥಾನದಿಂದ ಅವರನ್ನು ವೀಕ್ಷಿಸುವುದರಿಂದ ಅವರೆಲ್ಲಾ ಒಳ್ಳೆಯವರಾಗುತ್ತಾರೆ. ಊರಿನವರೆಲ್ಲರೂ ಮೆಚ್ಚುವಂತೆ ನಿಮ್ಮ ಮಗಳ ಮದುವೆಯನ್ನು ನಡೆಸಬೇಕೆಂಬ ನಿಮ್ಮ ಆಶೆ ಈಡೇರುತ್ತದೆ. ಮಗನಿಗೆ ವಿದೇಶದಲ್ಲಿ ಕೆಲಸ ದೊರೆಯುತ್ತದೆ.
ಸಹೋದರರೊಂದಿಗೆ ಬಂದಿದ್ದ ಮನಸ್ತಾಪ ದೂರವಾಗುತ್ತದೆ.ಅದರಿಂದ ಸಹಾಯವೂ ದೊರೆಯುತ್ತದೆ. ನಿಮ್ಮ ತ್ಯಾಗಬುದ್ದಿಯನ್ನು ಅವರು ಅರ್ಥಮಾಡಿ ಕೊಳ್ಳುತ್ತಾರೆ. ಸರಕಾರಿ ಅಧಿಕಾರಿಗಳ ಸಹಾಯ ದೊರೆಯುತ್ತದೆ. ತಾಯಿಯ ದೇಹಾರೋಗ್ಯ ಕುದುರುತ್ತದೆ. ಆಧ್ಯಾತ್ಮಿಕ ಒಲವು ಹೆಚ್ಚಾಗುತ್ತದೆ. ದೇವಾಲಯ ಕಾರ್ಯಗಳನ್ನು ಮುತುವರ್ಜಿಯಿಂದ ನಡೆಸುತ್ತೀರಿ. ಬೆಲೆಬಾಳುವ ಉಡುಪು, ಆಭರಣಗಳನ್ನಪ ಖರೀದಿಸುತ್ತೀರಿ. ಅಕ್ಕಪಕ್ಕದವರೊಂದಿಗೆ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತವೆ.
ಹೊರವಲಯದಲ್ಲಿ ಮೆಚ್ಚುಗೆ ಪಡೆಯುತ್ತೀರಿ. ಅಧಿಕಾರಿಗಳ, ವಿದ್ಯಾವಂತರ ಸಂಪರ್ಕ ಬೆಳೆಯುತ್ತದೆ.ಕ ನ್ಯಾಮಣಿಗಳು ಬೇರೆಯವರ ಮಾತಿನಂತೆ ಆತುರಪಟ್ಟು ತೀರ್ಮಾನ ಕೈಗೊಳ್ಳುವುದು ಬೇಡ. ಪ್ರೇಮ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರಲಿ. ತಂದೆತಾಯಿ ಮನಸ್ಸಿಗೆ ನೋವು ಮಾಡುವಂತೆ ಮಾತನಾಡಬೇಡಿ. ಗುರುವಿನ ಪ್ರವೇಶದಿಂದ ತಲೆಸುತ್ತುವಿಕೆ,ಹಸಿವಿಲ್ಲದಿರುವುದು,ಮುಂಗೋಪ,ಬೆನ್ನು ನೋವು,ಸೋಮಾರಿತನ ಬರುತ್ತದೆ. ವೈದ್ಯರ ಸಲಹೆಯಿಲ್ಲದೆ ಯಾವ ಔಷಧಿ ಸೇವನೆಯೂ ಬೇಡ. ಮೆಡಿಕ್ಲೈಮ್ ತೆಗೆದುಕೊಳ್ಳಿ. ಟ್ರಸ್ಟ್,ಸಂಘ ಮುಂತಾದವುಗಳನ್ನು ಪ್ರಾರಂಭಿಸುತ್ತೀರಿ. ಸಮಾಜ ಸೇವೆಯಲ್ಲಿ ತೊಡಗುತ್ತೀರಿ. ಸಾಧು, ಸನ್ಯಾಸಿಗಳ ಸಂಪರ್ಕ ದೊರೆಯುತ್ತದೆ.
ಪಿತ್ರಾರ್ಜಿ ಸ್ವತ್ತು ಬದಲಾವಣೆಯಾಗುತ್ತದೆ.ವಿದ್ಯಾರ್ಥಿಗಳು ಹರಟೆ ಹೊಡೆಯದೆ ವಿದ್ಯಾರ್ಜೆನೆಯಲ್ಲಿ ಗಮನ ಹರಿಸುತ್ತಾರೆ. ಗಣಿತ, ವಿಜ್ಞಾನದ ಬಗೆಗೆ ಹೆಚ್ಚು ಗಮನ ನೀಡಿ.
ವ್ಯಾಪಾರದಲ್ಲಿ ಸ್ವಲ್ಪ ಇಕ್ಕಟ್ಟು ಬರುತ್ತದೆ.ಸ್ಪರ್ಧೆಗಳನ್ನು ಪ್ರಬಲವಾಗಿ ಎದುರಿಸುತ್ತೀರಿ. ಕೆಲಸದಾಳುಗಳೊಂದಿಗಿದ್ದ ಮನಸ್ತಾಪ ದೂರವಾಗುವುದು. ಹಳೆ ಬಾಕಿ ವಸೂಲಾಗುತ್ತದೆ. ಹೊಸ ಏಜನ್ಸಿಗಳನ್ನು ಪಡೆಯುತ್ತೀರಿ.ಗಿರಾಕಿಗಳನ್ನು ಆಕರ್ಷಿಸಲು ವಿಶೇಷ ರಿಯಾಯ್ತಿ ನೀಡುತ್ತೀರಿ. ಆಹಾರ ಪದಾರ್ಥ, ಕಬ್ಬಿಣ,ರಿಯಲ್ ಎಸ್ಟೇಟ್ ಮುಂತಾದವುಗಳಲ್ಲಿ ಕಡಿಮೆ ಲಾಭ ಬರುತ್ತದೆ.
ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಅನುಸರಣೆ ಇರಲಿ. ಪದೋನ್ನತಿ ಹೋರಾಟದ ನಂತರ ದೊರೆಯುತ್ತದೆ. ಕಂಪ್ಯೂಟರ್ ವಿಭಾಗದವರಿಗೆ ಹೆಚ್ಚು ಸಂಬಳ ದೊರೆಯುತ್ತದೆ. ವಿದೇಶಕ್ಕೆ ಹೋಗಿ ಬರುತ್ತೀರಿ. ಬಿಡುವಿಲ್ಲದ ಕೆಲಸದ ಪರಿಣಾಮ ಕೆಲಸದ ಭಾರ ಹೆಚ್ಚುತ್ತದೆ. ಕಲಾವಿದರಿಗೆ ಸಣ್ಣ ಪುಟ್ಟ ತೊಂದರೆಗಳು ಎದುರಾಗುತ್ತವೆ. ಬೇರೆಯವರ ವೈಯಕ್ತಿಕ ವಿಷಯಗಳು ನಿಮಗೆ ಬೇಡ.
ಈ ಸ್ಥಾನಪಲ್ಲಟದಿಂದ ನಿಮ್ಮನ್ನು ಹೆಚ್ಚು ಕೆಲಸ ಮಾಡುವಂತೆ ಮಾಡುತ್ತದೆ. ಅದರಿಂದ ಜೀವನದಲ್ಲಿ ಒಳ್ಳಎಯ ಪಾಠವನ್ನು ನೀವು ಕಲಿತಂತಾಗುತ್ತದೆ.

ಪರಿಹಾರ: ಕುಂಭಕೋಣಂ-ತಂಜಾವೂರು ಮಾಗ್ರದಲ್ಲಿರುವ ತೆನ್‌ಕುಡಿತ್ತಿಟ್ಟೈ ಎಂಬಲ್ಲಿ ಗೌತಮ, ಆದಿಶೇಷ, ಕಾಮಧೇನು ಇವುಗಳಿಗೆ ಪ್ರತ್ಯಕ್ಷನಾದ ಪಶುಪತಿನಾಥನನ್ನು ಪೂಜಿಸಿ ದಕ್ಷಿಣಾಮೂರ್ತಿಯನ್ನು ಆರಾಧನೆ ಮಾಡಿ. ಮಕ್ಕಳಿಲ್ಲದೆ ದಂಪತಿಗಳಿಗೆ ಸಹಾಯ ಮಾಡಿ.ಸಂತೋಷವುಂಟಾಗುತ್ತದೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments