Select Your Language

Notifications

webdunia
webdunia
webdunia
webdunia

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ
, ಶನಿವಾರ, 5 ಅಕ್ಟೋಬರ್ 2013 (18:10 IST)
PR
ಪರಮೇಶ್ವರ ಶೃಂಗೇರಿ.

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ಪ್ರಕಾರ ಈ ಎಲ್ಲ ದೋಷಗಳಿಗೂ ಮೂಲ ಕಾರಣವನ್ನು ಹುಡುಕಿ ಅದಕ್ಕೆ ಪರಿಹಾರ ಮಾರ್ಗವನ್ನು ನೀಡುವ ನಿಟ್ಟಿನಲ್ಲಿ ಜ್ಯೋತಿಷ್ಯಶಾಸ್ತ್ರ ಪ್ರಮುಖವಾದ ಪಾತ್ರವಹಿಸುತ್ತದೆ. ವಿಶೇಷವಾಗಿ ಇಂದು ಬಹಳಷ್ಟು ಜನರು ನಾಗಸಂಬಂಧಿ ದೋಷಗಳಿಂದ ಬಳಲುತ್ತಾರೆ.ಇದಕ್ಕೆ ಹಲವು ಬಗೆಯ ಕಾರಣವಿದ್ದು ಅದನ್ನು ಸಮಗ್ರವಾಗಿ ಜೋತಿಷ್ಯ ಶಾಸ್ತ್ರದ ಪ್ರಕಾರ ಅಧ್ಯಯಿಸಿ ಪರಿಹಾರ ನೀಡಲಾಗುತ್ತದೆ.

webdunia
 
PR
ಏನಿದು ನಾಗ ದೋಷ?

ಹೆಸರೇ ಸೂಚಿಸುವಂತೆ ಅಷ್ಟಕುಲನಾಗನಿಗೆ ಸಂಬಂಧಿಸಿದಂತೆ, ಮಾನವನಿಗೆ ಈ ದೋಷ ಕಂಡುಬರುತ್ತದೆ.ಇದರಲ್ಲಿ ಪ್ರಮುಖವಾಗಿ ನಾಗಹತ್ಯಾದೋಷ,ನಾಗಕೇತ್ರಗಳ ಬದಲಾವಣೆ,ನಾಗಕ್ಷೇತ್ರಗಳ ಅಪವಿತ್ರತೆ,ನಾಗವಿಗ್ರಹಗಳ ಭಗ್ನತೆ,ಪೂಜಾ ಕೈಂಕರ್ಯದ ದೋಷ, ಸರ್ಪಗಳನ್ನು ಗಾಯಗೊಳಿಸಿರುವುದು ಹೀಗೆ ಹಲವು ಬಗೆಯ ನಾಗವಿರೋಧಿ ಚಟುವಟಿಕೆಯಿಂದ ಈ ದೋಷಗಳು ಕಂಡುಬರುತ್ತವೆ. ಕೆಲವೊಮ್ಮೆ ಪೂರ್ವಜನ್ಮ ಸಂಬಂಧಿಯಾದ ನಾಗದೋಷವೂ,ಕುಟುಂಬ ಸಂಬಂಧಿಯಾದ ನಾಗದೋಷವೂ ಕಂಡುಬರುತ್ತದೆ.

ಪರಿಣಾಮವೇನು?

ಸಾಮಾನ್ಯವಾಗಿ ಈ ನಾಗಸಂಬಂಧಿ ದೋಷದಿಂದ ವಿಪರೀತವಾದ ದುಷ್ಪರಿಣಾಮ ಮಾನವನ ಮೇಲಾಗುವುದು ಖಚಿತ.ವಿಶೇಷವಾಗಿ ಈ ದೋಷದಿಂದ ಆರ್ಥಿಕ ಮುಗ್ಗಟ್ಟು,ಆರೋಗ್ಯದಲ್ಲಿ ಏರುಪೇರು,ಮಾನಸಿಕ ಖಿನ್ನತೆ,ಗೃಹಕಲಹ,ವ್ಯವಹಾರದಲ್ಲಿ ನಷ್ಟ,ಸಹೋದರರಲ್ಲಿ ವೈಷಮ್ಯ,ಶತ್ರುಬಾಧೆ,ಅಂಗವೈಕಲ್ಯ, ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಹೀಗೆ ಹಲವು ಬಗೆಯ ಸಮಸ್ಯೆಗಳು ಎದುರಾಗುತ್ತವೆ.

webdunia
PR
ತಿಳಿಯುವ ಬಗೆ ಹೇಗೆ ?

ಸಾಮಾನ್ಯವಾಗಿ ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿ ವೈದ್ಯರ ಸಲಹೆ ಪಡೆಯುವಂತೆ ಹಿಂದೆ ಹೇಳಿದ ಎಲ್ಲಾ ಬಗೆಯ ಸಮಸ್ಯೆಗಳಿಂದ ಬಳಲುವವರು ಸೂಕ್ತವಾದ ಜ್ಯೋತಿಷಿಗಳ ಮೊರೆಹೋಗುವುದು ಸೂಕ್ತ.ಅಲ್ಲದೇ ಜಾತಕ ವಿಮರ್ಶೆ,ಆರೂಢ ಪ್ರಶ್ನಾವಿಧಿ ಹೀಗೆ ಹಲವು ಬಗೆಯ ವಿಧಾನದಿಂದ ಈ ಸಮಸ್ಯೆಗಳ ಮೂಲವನ್ನು ಕಂಡುಹಿಡಿಯಬಹುದಾಗಿದೆ.

ಪರಿಹಾರವೇನು?

ಕತ್ತಲೆ ಇದೆ ಎಂದರೆ ಬೆಳಕು ಇರಲೇಬೇಕು ಹಾಗೆಯೇ ಸಮಸ್ಯೆ ಇದೆ ಎಂದಾದಲ್ಲಿ ಅದಕ್ಕೆ ಪರಿಹಾರ ಖಂಡಿತ ಇದ್ದೆ ಇದೆ.ಅದೇ ರೀತಿ ಈ ನಾಗಸಂಬಂಧಿ ದೋಷಕ್ಕೂ ಪರಿಹಾರವಿದ್ದೇ ಇದೆ.ನಾಗಜಪ,ಆಶ್ಲೇಷಾಬಲಿ,ನಾಗಪ್ರತಿಷ್ಟೆ ಹೀಗೆ ಹಲವು ಬಗೆಯ ಪರಿಹಾರ ಕ್ರಮಗಳಿವೆ . ಆ ಸಮಸ್ಯೆಗಳಿಗನುಗುಣವಾಗಿ ಪರಿಹಾರವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದ್ದು ,ಅದನ್ನು ಸೂಕ್ತ ಜ್ಯೋತಿಷಿಗಳ ಮೂಲಕ ತಿಳಿದೇ ಮಾಡಿಸುವುದು ಸೂಕ್ತ. ಆಗ ಮಾತ್ರ ಸಮಸ್ಯೆ ಪರಿಹಾರವಾದೀತು. ಅಲ್ಲದೇ ನಾಗಬ್ರಹ್ಮನ ಅನುಗ್ರಹದಿಂದ ಕುಟುಂಬ ಸಂತೋಷ,ಸೌಖ್ಯವನ್ನು ಹೊಂದಿ ನೆಮ್ಮದಿಯ ಜೀವನ ನಡೆಸಬಹುದಾಗಿದೆ.

Share this Story:

Follow Webdunia kannada