Select Your Language

Notifications

webdunia
webdunia
webdunia
webdunia

ಗೋಚಾರದಲ್ಲಿ ಗುರು ಮತ್ತು ರಾಹುವಿನ ಪಾತ್ರ

ಗೋಚಾರದಲ್ಲಿ ಗುರು ಮತ್ತು ರಾಹುವಿನ ಪಾತ್ರ
, ಗುರುವಾರ, 3 ಅಕ್ಟೋಬರ್ 2013 (15:11 IST)
PTI
ಪರಮೇಶ್ವರ ಶೃಂಗೇರಿ. ಹಿಂದೂ ಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರ ಆದಿಕಾಲದಿಂದಲೂ ಅತ್ಯಂತ ಮಹತ್ವಪೂರ್ಣ ಸ್ಥಾನವನ್ನು ಹೊಂದಿದ್ದು ಅದರಲ್ಲೂ ಜಾತಕ ಎನ್ನುವುದು ಮನುಷ್ಯನ ಜೀವನದ ಘಟನಾವಳಿಗಳನ್ನು ವಿವರಿಸುವ ವಿಜ್ಞಾನವೆಂದೇ ಹೇಳಬಹುದು.ಈ ಜಾತಕದ ಪ್ರಕಾರ ಶುಭಾಶುಭಗಳನ್ನು ,ಯೋಗಗಳು ಯಾವ ಸಮಯಕ್ಕೆ ಫಟಿಸುವುದೆಂದು ನಿಶ್ಚಯವಾಗಿ ಹೇಳುವುದಕ್ಕಾಗಿ ದಶಾಭುಕ್ತಿ ಮತ್ತು ಗೋಚಾರ ಎಂಬ ಅಂಶಗಳನ್ನು ಪರಿಗಣಿಸುತ್ತಾರೆ.

webdunia
 
PR
ಯಾವಯಾವ ಗ್ರಹಗಳಿಗೆ ಯಾವಯಾವ ಗ್ರಹಗಳು ಮಾರಕವಾಗಿರುತ್ತವೆ. ಅಥವಾ ಯೋಗಕಾರಕವಾಗಿ ಇರುತ್ತವೆ ಎಂಬುದನ್ನು ಆಧರಿಸಿ ನಕ್ಷತ್ರ ಆಧಾರಿತ ದಶಾ ಪದ್ಧತಿಯಿಂದ ಫಲವನ್ನು ನಿಶ್ಚಯಿಸಬಹುದಾಗಿದೆ.

ಅದೇ ರೀತಿ ನಿರಂತರವಾಗಿ ಚಲನೆಯಲ್ಲಿರುವ ಗ್ರಹಗಳ ಪ್ರಭಾವವೇ ಗೋಚಾರ ಎಂದೆನಿಸಿಕೊಳ್ಳುತ್ತದೆ ‘ಗ್ರಹಚಾರ’ ಎಂದೂ ಕರೆಯಿಸಿಕೊಳ್ಳುವ ಈ ಗೋಚಾರದ ಆಧಾರವನ್ನಾಧರಿಸಿಯೇ ಜಾತಕನ ಭವಿಷ್ಯವನ್ನು ಜೋತಿಷ್ಯ ಶಾಸ್ತ್ರದ ಪ್ರಕಾರ ನಿರ್ಣಯಿಸಲಾಗುವುದು. ಚಂದ್ರನು ಒಂದು ರಾಶಿಯಲ್ಲಿ ಎರಡುಕಾಲುದಿನಗಳಲ್ಲಿ ತನ್ನ ಸಂಚಾರ ಮುಗಿಸಿದರೆ ಸೂರ್ಯನಿಗೆ ಮೂವತ್ತು ದಿನಗಳ ಕಾಲ ಬೇಕಾಗುವುದು.ಅದೇ ಒಂದು ರಾಶಿಯಲ್ಲಿ ಗುರುವು ಒಂದು ವರ್ಷವಿದ್ದರೆ ಶನಿಯು ಎರಡುವರೆ ವರ್ಷಗಳ ಕಾಲ ಮಂದಗತಿಯಲ್ಲಿ ಆ ರಾಶಿಯ ಸಂಚಾರವನ್ನು ಪೂರೈಸುತ್ತಾನೆ.ಹಾಗಾಗಿ ವಿಶೇಷವಾಗಿ ಜಾತಕನ ಭವಿಷ್ಯವನ್ನು ಗುರು ಮತ್ತು ಶನಿಯ ಚಲನೆಯನ್ನು ಆಧರಿಸಿ ಈ ಗೋಚಾರ ಭವಿಷ್ಯವನ್ನು ನಿಶ್ಚಯಿಸಲಾಗುವುದು.

webdunia
PR
ಹಿಂದೂ ಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರ ಆದಿಕಾಲದಿಂದಲೂ ಅತ್ಯಂತ ಮಹತ್ವಪೂರ್ಣ ಸ್ಥಾನವನ್ನು ಹೊಂದಿದ್ದು ಅದರಲ್ಲೂ ಜಾತಕ ಎನ್ನುವುದು ಮನುಷ್ಯನ ಜೀವನದ ಘಟನಾವಳಿಗಳನ್ನು ವಿವರಿಸುವ ವಿಜ್ಞಾನವೆಂದೇ ಹೇಳಬಹುದು.ಈ ಜಾತಕದ ಪ್ರಕಾರ ಶುಭಾಶುಭಗಳನ್ನು ,ಯೋಗಗಳು ಯಾವ ಸಮಯಕ್ಕೆ ಫಟಿಸುವುದೆಂದು ನಿಶ್ಚಯವಾಗಿ ಹೇಳುವುದಕ್ಕಾಗಿ ದಶಾಭುಕ್ತಿ ಮತ್ತು ಗೋಚಾರ ಎಂಬ ಅಂಶಗಳನ್ನು ಪರಿಗಣಿಸುತ್ತಾರೆ.

ಯಾವಯಾವ ಗ್ರಹಗಳಿಗೆ ಯಾವಯಾವ ಗ್ರಹಗಳು ಮಾರಕವಾಗಿರುತ್ತವೆ. ಅಥವಾ ಯೋಗಕಾರಕವಾಗಿ ಇರುತ್ತವೆ ಎಂಬುದನ್ನು ಆಧರಿಸಿ ನಕ್ಷತ್ರ ಆಧಾರಿತ ದಶಾ ಪದ್ಧತಿಯಿಂದ ಫಲವನ್ನು ನಿಶ್ಚಯಿಸಬಹುದಾಗಿದೆ.

webdunia
PR
ಇದೇ ರೀತಿ ಗೋಚಾರದಲ್ಲಿ ಜನ್ಮ ರಾಶಿಯಿಂದ 3,6,9,10,11 ನೇ ರಾಶಿಗಳಲ್ಲಿ ಶನಿಯು ಸಂಚರಿಸುವಾಗ ಜಾತಕನಿಗೆ ಉದ್ಯೋಗ ಪ್ರಾಪ್ತಿ,ಧನಲಾಭ,ವಿವಾಹಭಾಗ್ಯ,ಸುಖಜೀವನದಂತಹ ಶುಭ ಫಲಗಳು ಕಂಡುಬರುತ್ತವೆ. ಆದರೆ 4 ಮತ್ತು 8ನೇ ರಾಶಿಯಲ್ಲಿ ಸಂಚರಿಸುವಾಗ ಅಷ್ಟಮ ಹಾಗೂ ಅರ್ಧಾಷ್ಟಮ ಶನಿಗಳು ಬಂದು ಬಗೆ ಬಗೆಯ ತಾಪತ್ರಯಗಳು ಬೆಂಬಿಡದೇ ಕಾಡಿಸುತ್ತವೆ.

ಶನಿಯು 2 ನೇ ಭಾವಕ್ಕೆ ಪ್ರವೇಶ ಮಾಡಿದ ನಂತರ ಜನ್ಮರಾಶಿ ಹಾಗೂ ದ್ವಿತೀಯ ಭಾವಗಳಲ್ಲಿ ಸಂಚರಿಸುವಾಗ ನಾನಾ ಬಗೆಯ ಕಷ್ಟಗಳು ಎದುರಾಗುತ್ತವೆ. ಈ ಏಳುವರೆ ವರ್ಷಗಳ ಅವಧಿಯನ್ನೇ ‘ಸಾಡೇ ಸಾಥ್ ಶನಿ’ ಎಂದು ಕರೆಯುತ್ತಾರೆ.ಕೆಲವೊಮ್ಮೆ ಜಾತಕಗಳಲ್ಲಿ ಯೋಗಕಾರಕ ಗ್ರಹದ ಮಹಾದಶೆಗಳು ನಡೆಯುತ್ತಿದ್ದ ಪಕ್ಷದಲ್ಲಿ ಶನಿ ಹಾಗೂ ಗುರುವಿನ ಗೋಚಾರದ ದುಷ್ಫಲಗಳು ಅಷ್ಟಾಗಿ ಕಂಡುಬರುವುದಿಲ್ಲ. ಇಲ್ಲದಿದ್ದಲ್ಲಿ ಗುರುವಿನ ಕೋಪ ಮತ್ತು ಶನಿಕಾಟಕ್ಕೆ ಜಾತಕನು ಜರ್ಜರನಾಗುವುದು ಖಂಡಿತ. ಈ ಸಮಯದಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ,ಮಾನಸಿಕ ಹಿಂಸೆ,ಆರ್ಥಿಕ ಮುಗ್ಗಟ್ಟು, ಮಾನಹಾನಿ,ಅಪಘಾತದಂತಹ ಅವಘಡಗಳು ಜರುಗುತ್ತವೆ. ಹಾಗಾಗಿ ಇಂತಹ ಸಮಯದಲ್ಲಿ ಸೂಕ್ತ ಜ್ಯೋತಿಷಿಗಳಲ್ಲಿ ಜಾತಕವನ್ನು ಪರಿಶೀಲಿಸಿ ಸೂಕ್ತ ಸಲಹೆ ಪಡೆಯುವುದು ಉತ್ತಮವಾಗಿದೆ.

Share this Story:

Follow Webdunia kannada