Webdunia - Bharat's app for daily news and videos

Install App

ಜೂನ್ 23ರಂದು ಸೂಪರ್ ಮೂನ್ ದರ್ಶನ

Webdunia
ಶುಕ್ರವಾರ, 14 ಜೂನ್ 2013 (18:07 IST)
PR
ಸಾಮಾನ್ಯವಾಗಿ ಚಂದ್ರನು ಪ್ರತೀ ಹುಣ್ಣಿಮೆಯಂದು ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ. ಕೆಲವೊಮ್ಮೆ ಪೂರ್ಣಚಂದ್ರನು ಭೂ ಸಮೀಪದ ಬಿಂದುವಿನ ಪಥದಲ್ಲಿ ಅಂದರೆ ಭೂಮಿಗೆ ಹತ್ತಿರದಲ್ಲಿ ಹಾದು ಹೋಗುತ್ತಾನೆ. ಆಗ ಎಂದಿನ ಹುಣ್ಣಿಮೆಗಿಂತ ಅತೀ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ ಹಾಗೂ ಹೆಚ್ಚು ಗಾತ್ರವಾಗಿ ಕಂಡುಬರುತ್ತದೆ. ಈ ದಿವಸ ಸೃಷ್ಠಿಯ ಮತ್ತೊಂದು ಸುಂದರಾನುಭೂತಿಗೆ ಸಾಕ್ಷಿಯಾಗಲಿದ್ದೇವೆ. ಇದು ಈ ವರ್ಷದ ಸೂಪರ್ ಮೂನ್. ಆಕಾಶಕಾಯದಲ್ಲಿ ಚಂದ್ರನ ನೈಸರ್ಗಿಕ ಕ್ರಿಯೆ. ಅದೊಂದು ನಿಸರ್ಗದ ಸುಂದರ ಪ್ರದರ್ಶನ ಅಪರೂಪದ ಈ ವಿಸ್ಮಯ ವಿದ್ಯಮಾನವನ್ನು ಎಲ್ಲರೂ ವೀಕ್ಷಿಸಬಹುದಾಗಿದೆ. ಮನಸ್ಸಿನಲ್ಲಿ ತೃಪ್ತಿ, ನಿಸರ್ಗದ ಬಗ್ಗೆ ಆಸಕ್ತಿ ಮೂಡುತ್ತದೆ.,

ಇದೇ ಜೂನ್ 23 ರಂದು ಹುಣ್ಣಿಮೆಯ ದಿವಸ ಪೂರ್ಣ ಚಂದ್ರನು ಭೂ ಸಮೀಪದ ಬಿಂದುವಿನ ಪಥದಲ್ಲಿ ಅಂದರೆ ಭೂಮಿಗೆ ತೀರಾ ಹತ್ತಿರದಲ್ಲಿ ಭೂಮಿಯಿಂದ 356.991 ಕಿ.ಮೀ. ಅಂತರದಲ್ಲಿ ಹಾದು ಹೋಗುತ್ತದೆ. ಅಪರೂಪದ-ಪ್ರಕೃತಿಯ ಈ ವಿದ್ಯಮಾನ ಎಂತಹವರ ಸೃಷ್ಟಿಗೂ ರಸದೌತಣವೇ ಆಗಿರುತ್ತದೆ. ಪೂರ್ಣ ಚಂದ್ರನು ಈ ದಿವಸ ಎಂದಿನ ಪೂರ್ಣ ಚಂದ್ರನಿಗಿಂತ 14ಅ ಹೆಚ್ಚು ಅಗಲವಾಗಿ ಗೋಚರಿಸುತ್ತದೆ ಹಾಗೆಯೇ ಎಂದಿನ ಪ್ರಕಾಶಕ್ಕಿಂತ 30ಅ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ. ಇದನ್ನೇ ಸೂಪರ್ ಮೂನ್ (ಬೃಹತ್ತಾದ ಚಂದ್ರ) ಎಂದು ಕರೆಯುತ್ತಾರೆ.

ಪುನಃ ಈ ಸೂಪರ್ಮೂನ್ ವಿದ್ಯಮಾನವು ಕಾಣಸಿಗುವುದು 2014 ರ ಆಗಸ್ಟ್ 10 ರಂದು ನಂತರ 2015ರ ಸೆಪ್ಟಂಬರ್ 28 ರಂದು ತರುವಾಯ ಮಗದಷ್ಟು 2016ರ ನವೆಂಬರ್ 25 ರಂದು ಮಾತ್ರ ನಂತರ ಈ ಸೂಪರ್ಮೂನ್ ದರ್ಶನ 2034ರ ನವೆಂಬರ್ 25 ರಂದು.

ಈ ಹಿಂದೆ ಈ ಸೂಪರ್ ಮೂನ್ ಗೋಚರಿಸಿದ್ದು 2012 ರಲ್ಲಿ ಮೇ 6 ರಂದು ಹಾಗೂ 2011ರಲ್ಲಿ ಮಾರ್ಚ್ 19ರಂದು ಕಂಡುಬಂದಿತ್ತು.

ಖ್ಯಾತ ಖಗೋಳ ವಿಜ್ಞಾನಿ ರಿಚರ್ಡ್ಸೊಲ್ ಎಂಬುವವರು 1979ರಲ್ಲಿ ಸೂಪರ್ಮೂನ್ ಕಂಡುಹಿಡಿದರು.

ಈ ಸೂಪರ್ಮೂನ್ ಸಾಮಾನ್ಯವಾಗಿ 14 ಚಂದ್ರಮಾಸಗಳ ಚಕ್ರಕ್ಕೆ ಒಂದು ಸಲ ಪುನರಾವರ್ತಿಸುತ್ತದೆ. ಒಂದು ಚಂದ್ರಮಾಸವೆಂದರೆ. 2 ಹುಣ್ಣಿಮೆಗಳ ನಡುವಿನ ಕಾಲಮಾನ (ಸರಾಸರಿ 29.530 59 ದಿವಸಗಳು)

ಚಂದ್ರನಿಗೂ ಅಲೆಗಳಿಗೂ ಅವಿನಾಭಾವ ಸಂಬಂಧ ಪ್ರತೀ ಹುಣ್ಣಿಮೆಯಲ್ಲೂ ಸಾಗರದ ಅಲೆಗಳಲ್ಲಿ ಉಬ್ಬರವಿರುತ್ತದೆ. ಹೀಗಿರುವಾಗ ಈ ಸೂಪರ್ಮೂನ್ನಿಂದ ಈ ಉಬ್ಬರದ ಅಬ್ಬರ ಎರಡರಷ್ಟಿರುತ್ತದೆ. ಆದರೆ ಪೂರಕ ವಾತಾವರಣವಿರದ ಹೊರತು ಈ ಅಲೆಗಳು ಪ್ರವಾಹವನ್ನೇನೂ ಉಂಟುಮಾಡುವುದಿಲ್ಲ. ಆದರೂ ಹೆಚ್ಚಿನ ನಿಗಾವಹಿಸುವುದು ಸೂಕ್ತ.

ಸಮುದ್ರದಂಡೆಯ ಬಳಿ ಇರುವವರು ಈ ಉಬ್ಬರಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಬಹುದು. ಈ ದಿನದಿಂದ ಕೆಲದಿನಗಳವರೆಗೆ ಅಲೆಗಳ ಉಬ್ಬರದ ಅಬ್ಬರ ನಡದೇ ಇರುತ್ತದೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments