Select Your Language

Notifications

webdunia
webdunia
webdunia
webdunia

ನಿಮ್ಮ ಕುಂಡಲಿಯಲ್ಲಿ ಶನಿ ದೋಷವಿದೆಯೇ?

ನಿಮ್ಮ ಕುಂಡಲಿಯಲ್ಲಿ ಶನಿ ದೋಷವಿದೆಯೇ?
ಭಾರತೀ ಪಂಡಿತ್

ND
ಶನಿಯ ರಾಶಿ ಪರಿವರ್ತನೆ ಆಗುತ್ತಿದ್ದಂತೆ ಸಾಮಾನ್ಯವಾಗಿ ಜನರು ಭಯಭೀತರಾಗುತ್ತಾರೆ. ಶನಿದೇವನ ಕಾಟದಿಂದ ಇನ್ನೇನು ತೊಂದರೆಗಳಾಗುತ್ತೋ... ಅಥವಾ ಕಾರ್ಯಗಳಲ್ಲಿ ಏನೇನು ವಿಘ್ನ ಸಂಭವಿಸುತ್ತೋ ಎಂಬ ದುಗುಡ ಹೆಚ್ಚುತ್ತದೆ. ಅದರಲ್ಲೂ ಕೆಲವು ಮಂದಿಗೆ ತಮ್ಮ ರಾಶಿ, ನಕ್ಷತ್ರ, ಜನ್ಮ ಕುಂಡಲಿಯ ಪರಿಚಯವೇ ಇರೋದಿಲ್ಲ. ಯಾವುವೆಂಬುದರ ಗಂಧಗಾಳಿಯೂ ತಿಳಿದಿರುವುದಿಲ್ಲ. ಅಂತಹ ಸಂದರ್ಭ ಹಲವು ಜ್ಯೋತಿಷ್ಯದ ವಿಚಾರಗಳನ್ನು ಓದುವಾಗ ಅಂಥವರಲ್ಲಿ ಭಯ, ದುಗುಡ, ಗೊಂದಲ ಹೆಚ್ಚುವುದು ಸಾಮಾನ್ಯ. 'ತಮಗೆ ಮುಂದೇನು ಕಾದಿದೆಯೋ, ತನ್ನ ರಾಶಿ ಯಾವುದೆಂದೇ ಗೊತ್ತಿಲ್ಲ, ಹಾಗಾಗಿ ಶನಿ ತನ್ನ ರಾಶಿಯಲ್ಲಿ ಯಾವಾಗ ಇರುತ್ತಾನೋ..' ಎಂದೆಲ್ಲ ಭಯ ಇದ್ದೇ ಇರುತ್ತದೆ. ಕುಂಡಲಿಯಲ್ಲಿ ಶನಿ ದೋಷವಿದಯೋ ಎಂಬ ಬಗ್ಗೆಯೂ ಎಳ್ಳಷ್ಟೂ ತಿಳಿದಿರುವುದಿಲ್ಲ. ಇಂತಹ ಸಂದರ್ಭ ತಮ್ಮ ನಿತ್ಯ ಜೀವನದಲ್ಲಿ ನಡೆಯುತ್ತಿರುವ ಕೆಲವು ತೀರಾ ಸಾಮಾನ್ಯ ಘಟನೆಗಳಿಂದಲೇ ತಮಗೆ ಶನಿ ದೋಷವಿದೆಯೋ ಎಂದು ಪತ್ತೆಹಚ್ಚಬಹುದು. ಅಂತಹ ಘಟನೆಗಳ ವಿವರ ಇಲ್ಲಿದೆ.

1. ಶರೀರದಲ್ಲಿ ಯಾವಾಗಲೂ ಜಡತ್ವ, ಆಲಸ್ಯ ಅನಿಸುತ್ತಿರುವುದು.
2. ಸ್ನಾನ ಮಾಡುವುದು, ಬಟ್ಟೆ ಒಗೆಯುವುದರಲ್ಲಿ ಆಸಕ್ತಿಯೇ ಇಲ್ಲದಿರುವುದು ಅಥವಾ ಸ್ನಾನ, ಬಟ್ಟೆ ಒಗೆಯಲು ಸಮಯವೇ ಸಿಗದಿರುವುದು.
3. ಹೊಸ ಬಟ್ಟೆ ಖರೀದಿಸಲು ಹಾಗೂ ಧರಿಸಲು ಅವಕಾಶವೇ ಸಿಗದಿರುವುದು.
4. ಹೊಸ ಬಟ್ಟೆ ಅಥವಾ ಹೊಸ ಚಪ್ಪಲಿ ಬೇಗ ಬೇಗ ಹರಿದು ಹೋಗುವುದು ಅಥವಾ ತುಂಡಾಗುವುದು.
5. ಮನೆಯ ಗಂಟೆ ಯಾವಾಗಲೂ ಹಾಳಾಗುತ್ತಿರುವುದು.
6. ಊಟ ಮಾಡಲು ಪ್ರತಿ ಸಾರಿಯೂ ಆಸಕ್ತಿಯಿಲ್ಲದಿರುವುದು ಹಾಗೂ ರುಚಿಯೇ ಸಿಗದಿರುವುದು.
7. ತಲೆನೋವು ಬರುವುದು.
8. ತಂದೆಯ ಜತೆಗೆ ಹೆಚ್ಚಾಗಿ ವೈಮನಸ್ಸು ಉಂಟಾಗುವುದು.
9. ಓದುವುದು, ಬರೆಯುವುದರಲ್ಲಿ ಆಸಕ್ತಿ ಕುಂದುವುದು ಹಾಗೂ ಯಾರನ್ನೂ ಭೇಟಿಯಾಗಲು ಆಸಕ್ತಿಯೇ ಇಲ್ಲವಾಗಿ ಒಬ್ಬನೇ ಕುಳಿತಿರಲು ಹೆಚ್ಚು ಮನಸ್ಸಾಗುವುದು.
10. ಎಣ್ಣೆ, ಎಳ್ಳು, ಬೇಳೆಕಾಳುಗಳು ಚೆಲ್ಲಿ ಹೋಗುವುದು ಅಥವಾ ಇವುಗಳ ಖರೀದಿ ಕಷ್ಟವಾಗುವುದು.

ಇಂತಹ ಅನುಭವಗಳು ಪದೇ ಪದೇ ಹೆಚ್ಚಾಗಿ ಆಗುತ್ತಿದೆಯೆಂದು ನಿಮಗೆ ಅನಿಸಿದರೆ, ಎಣ್ಣೆ, ಎಳ್ಳನ್ನು ದಾನ ಮಾಡಿ. ಶನಿ ದೇವಸ್ಥಾನದಲ್ಲಿ ಎಳ್ಳೆಣ್ಣೆಯ ದೀಪ ಹಚ್ಚಿ. ಹನುಮಂತ ಅಥವಾ ಸೂರ್ಯನ ಆರಾಧನೆ ಮಾಡಿ. ಮಾಂಸ, ಮದಿರೆಯ ಸಹವಾಸ ಬಿಡಿ. ಕಪ್ಪು ಬಟ್ಟೆ ಧರಿಸುವುದನ್ನು ಬಿಟ್ಟುಬಿಡಿ. ಹಾಗೂ ಕಪ್ಪು ವಸ್ತುಗಳ ದಾನ ಮಾಡಿ. ಆಗ ನೀವು ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು.

Share this Story:

Follow Webdunia kannada