ಬೆಂಗಳೂರು : ಮದುವೆಗಳು, ಇತರೆ ಶುಭಕಾರ್ಯಗಳಲ್ಲಿ ಯಾರಾದರೂ ಆತಿಥ್ಯ ಕೊಟ್ಟರೆ ಅವರಿಗೆ ಉಡುಗೊರೆ ನೀಡುವುದು ಪರಿಪಾಠ. ಸಾಮಾನ್ಯವಾಗಿ ಬಹಳಷ್ಟು ಮಂದಿ ವಿವಿಧ ರೀತಿಯ ವಸ್ತುಗಳನ್ನು ಗಿಫ್ಟ್ ಆಗಿ ಆಯ್ಕೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಕೆಲವು ವಸ್ತುಗಳನ್ನು ಮಾತ್ರ ನಾವು ಗಿಫ್ಟ್ ಆಗಿ ನೀಡಬಾರದಂತೆ. ಅವು ಯಾವುದು ಎಂದು ಮೊದಲು ತಿಳಿದುಕೊಳ್ಳಿ.
*ಹರಿತವಾದ ವಸ್ತುಗಳು: ಕತ್ತಿ, ನೇಯಿಲ್ ಕಟ್ಟರ್, ಅಡುಗೆಮನೆಯಲ್ಲಿ ಉಪಯೋಗಿಸುವ, ಕತ್ತಿಗಳು, ಬ್ಲೇಡ್‌ಗಳು, ಚೈನ್ ಗರಗಸದಂತಹ ಹರಿತವಾದ ವಸ್ತುಗಳನ್ನು ಗಿಫ್ಟ್ ಆಗಿ ನೀಡಬಾರದಂತೆ. ಆ ರೀತಿ ಕೊಟ್ಟರೆ ಹೊರಗಿನ ವ್ಯಕ್ತಿ ಜತೆಗಿನ ಒಳ್ಳೆಯ ಸಂಬಂಧ ಕಟ್ ಆಗುತ್ತದೆ.
*ಹ್ಯಾಂಡ್ ಕರ್ಚೀಫ್ : ಬೆವರು, ಕಣ್ಣೀರಿನಂತಹವನ್ನು ಒರೆಸಿಕೊಳ್ಳಲು, ಮುಖ ಒರೆಸಲು ಹ್ಯಾಂಡ್ ಕರ್ಚೀಫ್ ಬಳಸುತ್ತಾರೆ. ಆದರೆ ಆ ರೀತಿಯ ಹ್ಯಾಂಡ್ ಕರ್ಚೀಫ್‌ಗಳು ಮಾತ್ರ ಉಡುಗೊರೆಯಾಗಿ ನೀಡಬಾರದು. ಯಾಕೆಂದರೆ ಅವುಗಳನ್ನು ಉಡುಗೊರೆಯಾಗಿ ಪಡೆದವರು ಭವಿಷ್ಯದಲ್ಲಿ ದುಃಖದಲ್ಲೇ ಇರುತ್ತಾರಂತೆ.
*ಚಪ್ಪಲಿ, ಶೂಸ್ : ಚಪ್ಪಲಿ, ಶೂಸ್ ಸಹ ಯಾರಿಗೇ ಆಗಲಿ ಉಡುಗೊರೆಯಾಗಿ ನೀಡಬಾರದು. ಕೊಟ್ಟರೆ ಅವರಿಗೆ ಅಶುಭವಾಗುತ್ತದೆ. ಅವರು ಸಂತೋಷವಾಗಿ ಇರಲ್ಲವಂತೆ. ಯಾವಾಗಲೂ ವಿಷಾದದಲ್ಲಿ ಇರುತ್ತಾರಂತೆ.
*ಗಡಿಯಾರ : ಅಲಾರಂ ಕ್ಲಾಕ್ಸ್, ವಾಲ್ ಕ್ಲಾಕ್ಸ್, ಕೈಗಡಿಯಾರಗಳನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು. ಕೊಟ್ಟರೆ ಅದನ್ನು ಪಡೆದ ವ್ಯಕ್ತಿಗೆ ಒಳ್ಳೆಯದಾಗಲ್ಲ. ಅವರ ಆಯುಸ್ಸು ಕುಗ್ಗುತ್ತದೆ. ಎಲ್ಲಾ ಕಷ್ಟಗಳನ್ನು ಅನುಭವಿಸುತ್ತಾರಂತೆ.
*ಕಪ್ಪು ಬಣ್ಣದ ಬಟ್ಟೆಗಳು : ಕಪ್ಪು ಬಣ್ಣವನ್ನು ಅಶುಭಕ್ಕೆ, ಕೆಟ್ಟದಕ್ಕೆ ಸಂಕೇತವಾಗಿ ಭಾವಿಸುತ್ತಾರೆ ಬಹಳಷ್ಟು ಮಂದಿ. ಈ ಹಿನ್ನೆಲೆಯಲ್ಲಿ ಯಾರೂ ಸಹ ಇತರರಿಗೆ ಕಪ್ಪು ಬಣ್ಣದ ಬಟ್ಟೆಗಳನ್ನು ಉಡುಗೊರೆಯಾಗಿ ಕೊಡಬಾರದು. ಕೊಟ್ಟರೆ ಆ ಉಡುಗೊರೆಗಳನ್ನು ಪಡೆದವರಿಗೆ ಎಲ್ಲಾ ಕೆಟ್ಟದ್ದೇ ಆಗುತ್ತದೆ. ಯಾವುದೂ ಕೂಡಿಬರಲ್ಲ. ಆಯಸ್ಸು ಸಹ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ