Select Your Language

Notifications

webdunia
webdunia
webdunia
webdunia

ರಾಜ, ಬಾಲು ಯಾಕೆ ಪ್ರಧಾನಿಗೆ ಬೇಡ?

ರಾಜ, ಬಾಲು ಯಾಕೆ ಪ್ರಧಾನಿಗೆ ಬೇಡ?
ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ, ಟಿ.ಆರ್. ಬಾಲು ಹಾಗೂ ಎ. ರಾಜಾ ಅವರಿಗೆ ಖಾತೆ ಇಲ್ಲ ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಟ್ಟುನಿಟ್ಟಾಗಿ ಹೇಳಿರುವ ಕಾರಣ ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ಅಪಸ್ವರ ಮೂಡಿದೆ. ಆದರೆ ಈ ಇಬ್ಬರು ಬೇಡವೇ ಬೇಡ ಎಂಬುದಾಗಿ ಪ್ರಧಾನಿ ಪಟ್ಟುಹಿಡಿಯಲು ಕಾರಣಗಳಾದರೂ ಏನು?

ಡಿಎಂಕೆಯು ನೂತನ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲಿದೆ ಎಂದು ಘೋಷಿಸಿರುವ ಟಿ.ಆರ್. ಬಾಲು ಹಿಂದಿನ ಸಂಪುಟದಲ್ಲಿ ರಸ್ತೆ ಸಾರಿಗೆ, ಹೆದ್ದಾರಿಗಳು ಮತ್ತು ಶಿಪ್ಪಿಂಗ್ ಸಚಿವರಾಗಿದ್ದರು. 68ರ ಹರೆಯದ ಬಾಲು ಅವರು ಹೆದ್ದಾರಿ ಯೋಜನೆಯನ್ನು ನಿಧಾನಗತಿಗೆ ತಳ್ಳಿದ್ದಾರೆ ಮತ್ತು ಎನ್ಎಚ್ಎಐಯನ್ನು ಗುತ್ತಿಗೆ ಸಂಸ್ಥೆಯನ್ನಗಾಗಿ ಪರಿವರ್ತಿಸಿದ್ದರು ಎಂಬ ಆಪಾದನೆ ಅವರ ಮೇಲಿದೆ.

ಇದಲ್ಲದೆ ಆರುತಿಂಗಳೊಳಗಾಗಿ ಜುಲೈ 2008 ಹಾಗೂ ಜನವರಿ 2009ಲ್ಲಿ ಎರಡೆರಡು ಬಾರಿ ನಡೆದ ಲಾರಿ ಮುಷ್ಕರವು ಬಾಲು ಅವರಿಗೆ ನೀಡಿರುವ ದೊಡ್ಡ ಹೊಡೆತ.

ಇದಲ್ಲದೆ ತಾನು ತನ್ನ ಪುತ್ರನಿಗಾಗಿ ಅನಿಲ ಏಜೆನ್ಸಿಯನ್ನು ಕೋರಿದ್ದೆ ಎಂಬುದಾಗಿ ಅವರು ಒಪ್ಪಿಕೊಂಡ ವೇಳೆ ಅವರು ಇನ್ನೊಂದು ದೊಡ್ಡ ವಿವಾದಕ್ಕೆ ಸಿಲುಕಿದ್ದರು. ಎಐಎಡಿಎಂಕೆ ಈ ಅಪವಾದ ಹೇರಿತ್ತು.

ಎ. ರಾಜಾ
ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆಯನ್ನು ಎ. ರಾಜಾ ಅವರು 2007ರ ಮಧ್ಯಾವಧಿಯಲ್ಲಿ ಪಡೆದಿದ್ದರು. ದಯಾನಿಧಿ ಮಾರನ್ ಕರುಣಾನಿಧಿ ಅವರೊಂದಿಗಿನ ವೈಮನಸ್ಸಿನಿಂದಾಗಿ ಸ್ಥಾನ ತೆರವು ಮಾಡಿದ್ದಾಗ ಅದು ರಾಜಾಗೆ ಧಕ್ಕಿತ್ತು.

ರಾಜಾ ಅವರು ಸ್ಪೆಕ್ಟ್ರಂ ಹಂಚುವಿಕೆ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದ್ದಾರೆ. ಅವರು ಅತ್ಯಂತ ಕಡಿಮೆ ಬೆಲೆಗೆ ಸ್ಪೆಕ್ಟ್ರಂ ನೀಡಿರುವ ಕಾರಣ ರಾಷ್ಟ್ರದ ಬೊಕ್ಕಸಕ್ಕೆ 60 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

Share this Story:

Follow Webdunia kannada