Select Your Language

Notifications

webdunia
webdunia
webdunia
webdunia

ಮತ್ತಷ್ಟು ಆರ್ಥಿಕ ಸುಧಾರಣೆಯ ಸುಳಿವು ನೀಡಿದ ಸಿಂಗ್

ಮತ್ತಷ್ಟು ಆರ್ಥಿಕ ಸುಧಾರಣೆಯ ಸುಳಿವು ನೀಡಿದ ಸಿಂಗ್
ನವದೆಹಲಿ , ಮಂಗಳವಾರ, 19 ಮೇ 2009 (19:12 IST)
ನೂತನ ಸರ್ಕಾರದ ನೇತೃತ್ವ ವಹಿಸಲಿರುವ ಮನಮೋಹನ್ ಸಿಂಗ್ ಅವರು ರಾಷ್ಟ್ರದಲ್ಲಿ ಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಮತ್ತಷ್ಟು ಆರ್ಥಿಕ ಸುಧಾರಣೆಗಳ ಸುಳಿವು ನೀಡಿದರು.

ವಿಶ್ವದಲ್ಲಿ ಅಭಿವೃದ್ಧಿಯು ಪಶ್ಚಿಮದಿಂದ ಪೂರ್ವದತ್ತ ತಿರುಗುತ್ತಿರುವ ಈ ಸಂದರ್ಭದಲ್ಲಿ ಭಾರತವು ಅವಕಾಶವನ್ನು ತಪ್ಪಿಸಿಕೊಳ್ಳುವಂತಿಲ್ಲ ಎಂದು ಅವರು ನುಡಿದರು.

ತನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿದ ಬಳಿಕ, ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಈ ಚುನಾವಣೆಯಲ್ಲಿನ ಗೆಲುವು, ಅಭಿವೃದ್ಧಿ ಜಾತ್ಯತೀತತೆ ಮತ್ತು ಬಹುತ್ವದ ಭಾರತಕ್ಕಾಗಿ ಭಾರತದ ಮತದಾರ ನೀಡಿದ ತೀರ್ಪಾಗಿದೆ ಎಂದು ನುಡಿದರು.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸ್ಫೂರ್ತಿದಾಯಕ ನಾಯಕತ್ವ ಹಾಗೂ ರಾಹುಲ್ ಗಾಂಧಿಯವರ ಕೌಶಲ್ಯ ಮತ್ತು ಶ್ರಮಕ್ಕೆ ಸಂದ ಗೆಲುವು ಇದು ಎಂದು ಅವರು ಪಕ್ಷದ ನಾಯಕರನ್ನು ಬಣ್ಣಿಸಿದರು.

ಜಾಗತಿಕ ಆರ್ಥಿತ ಹಿಂಸರಿತವು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯನ್ನು ನಿಧಾನಗೊಳಿಸಿದ್ದು, ಅಭಿವೃದ್ಧಿಯನ್ನು ಪುನಶ್ಚೇತನಗೊಳಿಸಲು ಪ್ರಥಮ ಆದ್ಯತೆ ನೀಡಲಾಗುವುದು. ಆದರೆ ಇದಕ್ಕೆ ಹೊಸ ಹೂಡಿಕೆಯ ಅವಶ್ಯಕತೆ ಇದೆ. ಇದಕ್ಕಾಗಿ ಹೂಡಿಕೆಗೆ ಅನುಕೂಲವಾಗುವಂತಹ ಸಾಮಾಜಿಕ ಮತ್ತು ರಾಜಕೀಯ ವಾತವರಣವನ್ನು ಕಲ್ಪಿಸುವ ಅವಶ್ಯಕತೆ ಇದೆ ಎಂದವರು ನುಡಿದರು.

Share this Story:

Follow Webdunia kannada