Select Your Language

Notifications

webdunia
webdunia
webdunia
webdunia

ಕಾರ್ಯ ಆರಂಭಿಸಿದ ಮನಮೋಹನ ಟೀಂ

ಕಾರ್ಯ ಆರಂಭಿಸಿದ ಮನಮೋಹನ ಟೀಂ
ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಅವರ ನೂತನ ತಂಡದ ಕೆಲವು ಸದಸ್ಯರು ಸೋಮವಾರ ತಮ್ಮ ಕಾರ್ಯಾರಂಭ ಮಾಡಿದ್ದಾರೆ. ಅಧಿಕಾರ ವಹಿಸಿಕೊಂಡವರಲ್ಲಿ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಗೃಹ ಸಚಿವ ಪಿ. ಚಿದಂಬರಂ, ರಕ್ಷಣಾ ಸಚಿವ ಎ.ಕೆ. ಆಂಟನಿ ಹಾಗೂ ವಿದೇಶಾಂಗ ಸಚಿವ ಎಸ್ಸೆಂ ಕೃಷ್ಣ ಸೇರಿದ್ದಾರೆ.

ಇಂದಿರಾಗಾಂಧಿ ಅವರ ಸರ್ಕಾರದಲ್ಲಿ ಪ್ರಣಬ್ ಮುಖರ್ಜಿ ವಿತ್ತ ಸಚಿವರಾಗಿದ್ದರು. ಇದೀಗ 25 ವರ್ಷಗಳ ಬಳಿಕ ಮತ್ತೆ ಹಣಕಾಸು ಖಾತೆಯನ್ನು ಹೊಂದಿದ್ದಾರೆ.

ಮುಖರ್ಜಿ ಅವರ ಮೊದಲ ಕರ್ತವ್ಯವೆಂದರೆ, 2009-10ರ ಬಜೆಟ್ ಮಂಡನೆ ಹಾಗೂ ನೂತನ ಯುಪಿಎ ಸರ್ಕಾರದ ಆದ್ಯತೆ ಹಾಗೂ ನೀತಿಗಳನ್ನು ತಿಳಿಯಪಡಿಸುವುದಾಗಿದೆ.

ಕಳೆದ ಬಾರಿ ಮುಂಬೈ ದಾಳಿವೇಳೆ ವಿತ್ತ ಖಾತೆಯಿಂದ ಗೃಹಖಾತೆಗೆ ವರ್ಗಾವಣೆ ಗೊಂಡ ಪಿ.ಚಿದಂಬರಂ ಅವರು ಈ ಅವಧಿಗೂ ಗೃಹಖಾತೆಯಲ್ಲೇ ಮುಂದುವರಿದಿದ್ದು, ಪ್ರಧಾನಿಯವರೊಂದಿಗೆ ಮೇ.22ರಂದು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು.

ಚಿದಂಬರಂ ಅವರು ಗುಪ್ತಚರ ಕಾರ್ಯಜಾಲವನ್ನು ಪುನರ್ ಸಂಘಟಿಸುವ, ಭಯೋತ್ಪಾದನಾ ಕಾನೂನುಗಳನ್ನು ಬಿಗಿಗೊಳಿಸುವ ಮತ್ತು ಸಿಐಎಸ್ಎಫ್ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಗಮನ ಹರಿಸಿದ್ದಾರೆ.

ಇದೇವೇಳೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಕೃಷಿ ಹಾಗೂ ಗ್ರಾಹಕರ ಖಾತೆ ವ್ಯವಹಾರಗಳ ಸಚಿವರಾಗಿ ಅಧಿಕಾರ ವಹಿಸಿದರು.

ಕೃಷಿ ಇಲಾಖೆಯ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಶರದ್ ಪವಾರ್ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

Share this Story:

Follow Webdunia kannada