Webdunia - Bharat's app for daily news and videos

Install App

'ಸಿಎಂ ಬಲಗೈಗೆ ಶಾಯಿ'-ಅಧಿಕಾರಿಗೆ ನೋಟಿಸ್

Webdunia
ಗುರುವಾರ, 30 ಏಪ್ರಿಲ್ 2009 (19:41 IST)
NRB
ಮತದಾನ ಸಂದರ್ಭದಲ್ಲಿ ಮತದಾರರ ಎಡಗೈ ತೋರುಬೆರಳಿಗೆ ಶಾಯಿ ಚಿಹ್ನೆ ಹಾಕುವುದು ಆಯೋಗದ ಕಾನೂನು, ಆದರೆ ಮತಗಟ್ಟೆ ಅಧಿಕಾರಿಯ ಅಚಾತುರ್ಯದಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಲಗೈ ತೋರುಬೆರಳಿಗೆ ಶಾಯಿ ಹಾಕಿದ್ದು, ಆ ಕಾರಣಕ್ಕಾಗಿ ಜಿಲ್ಲಾಧಿಕಾರಿ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಇಂದು ಬೆಳಿಗ್ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು ಮತಚಲಾಯಿಸಲು ತೆರಳಿದಾಗ ಆರಂಭದಲ್ಲಿ ಗಲಿಬಿಲಿಗೊಂಡಂತೆ ಕಂಡಿದ್ದರು, ಆದರೆ ನಿಜಕ್ಕೂ ಗಲಿಬಿಲಿಗೊಂಡ ಅಧಿಕಾರಿ ಯಡಿಯೂರಪ್ಪ ಅವರ ಬಲಗೈಗೆ ಶಾಯಿ ಚಿಹ್ನೆ ಹಾಕಿ, ಜಿಲ್ಲಾಧಿಕಾರಿಯಿಂದ ಷೋಕಾಸ್ ನೋಟಿಸ್ ಪಡೆದಿದ್ದಾರೆ.

ಮತದಾನದ ವಿಶೇಷತೆಗಳು:

ಮೈಸೂರಿನ ಎಚ್‌ಜಿಎಸ್‌ಎಲ್ ಕಾಲ್ ಸೆಂಟರ್ ನೌಕರರಿಗೆ ಮತದಾನ ಮಾಡಲು ರಜೆ ನೀಡದಿದ್ದುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ದಾಳಿ ನಡೆಸಿತ್ತು.

ಮಂಗಳೂರಿನ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಲಿ. ಸುಮಾರು 250 ನೌಕರರಿಗೆ ಮತದಾನ ನೀಡಲು ಅವಕಾಶ ಮಾಡಿಕೊಡುವುದಾಗಿ ಲಿಖಿತ ಹೇಳಿಕೆ ನೀಡಿಯೂ, ಮತದಾನಕ್ಕೆ ಅವಕಾಶ ಮಾಡಿಕೊಟ್ಟಿಲ್ಲದ ಪರಿಣಾಮ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಧಾರವಾಡ ಶಿಗ್ಗಾವಿ ಕ್ಷೇತ್ರದ ಮಡ್ಲಿ ಗ್ರಾಮದ ಮತದಾರ ತಿಮ್ಮಣ್ಣ ಮಲ್ಲಪ್ಪ(80ವ) ಎಂಬವರು ಮತಗಟ್ಟೆಯಲ್ಲಿ ಮತದಾನ ಮಾಡಿ ಹೊರಬಂದಾಗ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು.

ಶಿವಮೊಗ್ಗದ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಮತಗಟ್ಟೆ ಒಳಗೆ ಮೊಬೈಲ್ ಉಪಯೋಗಿಸಬಾರದೆಂಬ ಕಾನೂನು ಗೊತ್ತಿದ್ದೂ, ಮತಗಟ್ಟೆ ಒಳಗಡೆ ರಾಜಾರೋಷವಾಗಿ ಮೊಬೈಲ್ ಬಳಕೆ ಮಾಡಿದ್ದರು.

ಹಾಸನದ ಕೆಲವೆಡೆ ಜೆಡಿಎಸ್ ಕಾರ್ಯಕರ್ತರು ಗೂಂಡಾಗಿರಿ ಮಾಡಿ ಬೇರೆ ಪಕ್ಷದ ಏಜೆಂಟರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಅಲ್ಲದೇ ಬೋಗಸ್ ಮತದಾನ ನಡೆದಿದೆ ಎಂದು ದೂರಿ ಕಾಂಗ್ರೆಸ್ -ಬಿಜೆಪಿ ಆಯೋಗಕ್ಕೆ ದೂರು ಸಲ್ಲಿಸಿದೆ.

ನಕ್ಸಲ್ ಪೀಡಿತ ಪ್ರದೇಶವಾದ ಉಡುಪಿಯ ಹೆಬ್ರಿಯಲ್ಲಿ ಶೇ.75ರಷ್ಟು ಮತದಾನ.

ಹಾವೇರಿ ಯಡಗೋಡಿಗೆ ಮತದಾನ ಬಹಿಷ್ಕರಿಸದಂತೆ ಗ್ರಾಮಸ್ಥರನ್ನು ಸಮಾಧಾನಪಡಿಸಲು ಆಗಮಿಸಿದ ಶಾಸಕ ಬಿ.ಸಿ.ಪಾಟೀಲ್‌ಗೆ ನಾಗರಿಕರಿಂದ ಮುತ್ತಿಗೆ.

ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿ ಮತ ಚಲಾಯಿಸಿದ್ದರು.

ಮಂಗಳೂರು ಮತದಾನಕ್ಕೆ ಬರುತ್ತಿದ್ದ ಆಶ್ರಮವಾಸಿಗಳ ವಾಹನಕ್ಕೆ ದುಷ್ಕರ್ಮಿಗಳಿಂದ ವಾಹನಕ್ಕೆ ಅಡ್ಡಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments