Webdunia - Bharat's app for daily news and videos

Install App

ಒಮ್ಮೆಗೆ ಒಂದು ಜವಾಬ್ದಾರಿ: ಇದು ರಾಹುಲ್ ಮಂತ್ರ

Webdunia
' ಒಮ್ಮೆಗೆ ಒಂದೇ ಕೆಲಸ' ತತ್ವದ ಮೇಲೆ ನಂಬುಗೆ ಇರಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ತಾನು ಇದೇ ಕಾರಣಕ್ಕಾಗಿ ಸಚಿವಗಿರಿಯನ್ನು ನಿರಾಕರಿಸಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಪೋಸ್ಟರ್ ಬಾಯ್, ತಾರಾ ಪ್ರಚಾರಕರಾಗಿದ್ದ ರಾಹುಲ್, ಯುವಕರ ಸೇರ್ಪಡೆಯೊಂದಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ತನ್ನ 'ಮುದ್ರೆ'ಯು ಈಗಾಗಲೇ ಇದೆ ಎಂಬುದಾಗಿ 39ರ ಹರೆಯದ ರಾಹುಲ್ ಹೇಳಿದ್ದಾರೆ.

" ನಾನು ಪಕ್ಷಕ್ಕೆ ದುಡಿಯಬೇಕಾಗಿದೆ. ಒಮ್ಮೆಗೆ ಒಂದೇ ಕಾರ್ಯನಿರ್ವಹಿಸುವುದನ್ನು ನಾನು ನಂಬುತ್ತೇನೆ. ಆರು ಕೆಲಸಗಳನ್ನು ಒಮ್ಮೆಗೇ ನಿರ್ವಹಿಸುವುದರ ಮೇಲೆ ನನಗೆ ನಂಬುಗೆ ಇಲ್ಲ. ಹಾಗಾದಾಗ ನಾನು ನನ್ನ ಕರ್ತವ್ಯಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಹೇಳಿದ್ದಾರೆ. ಎರಡನೆ ಹಂತದ ಪ್ರಮಾಣವಚನ ಸ್ವೀಕಾರದ ಬಳಿಕ ಅವರು ವರದಿಗಾರರೊಂದಿಗೆ ಮಾತನಾಡುತ್ತಿದ್ದರು. ನಿವ್ಯಾಕೆ ಸಚಿವರಾಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಈ ಅಭಿಪ್ರಾಯ ಸೂಚಿಸಿದ್ದಾರೆ.

ಈ ಹಿಂದೆ ಸೋನಿಯಾಗಾಂಧಿ ಅವರು ರಾಹುಲ್ ಸಂಪುಟಕ್ಕೆ ಸೇರ್ಪಡೆಯಾಗಬೇಕೆಂದು ತಾನು ಬಯಸುವುದಾಗಿ ಹೇಳಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments