Select Your Language

Notifications

webdunia
webdunia
webdunia
webdunia

ಸೂಕ್ತ ಸಂಗಾತಿ ಆರಿಸಲೊಂದು ಯಂತ್ರ!

ಸೂಕ್ತ ಸಂಗಾತಿ ಆರಿಸಲೊಂದು ಯಂತ್ರ!
WD
ಜೋಡಿ ಸರಿಯಾಗಿರಬೇಕು ಅಂತನ್ನಿಸೋದು ಕೇವಲ ಜಾತಕ, ಜ್ಯೋತಿಷ್ಯಕ್ಕೆ ಸಂಬಂಧಿಸಿ ಮಾತ್ರವೇ ಅಲ್ಲ. ಇದು ಕೆಮಿಸ್ಟ್ರಿಗೂ ಸಂಬಂಧಿಸಿದೆ. ಅದರಲ್ಲೂ ವೈಯಕ್ತಿಕ ಕೆಮಿಸ್ಟ್ರಿ ಮಾತ್ರವೇ ಒಳಗೊಂಡಿಲ್ಲ, ವೈಜ್ಞಾನಿಕ ಕೆಮಿಸ್ಟ್ರಿಯೂ ಇಲ್ಲಿದೆ.

ವಿಶೇಷ ಏನಂದ್ರೆ, ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಹೊಸದಾದ ಒಂದು ಡೇಟಿಂಗ್ ಸರ್ವಿಸ್‌ಗೆ ಸಜ್ಜಾಗಿದೆ. ಹೊಂದಾಣಿಕೆ ಅಳೆಯುವ ವ್ಯವಸ್ಥೆ (ಕಾಂಪೆಟಿಬಿಲಿಟಿ ಮ್ಯಾಚಿಂಗ್ ಸಿಸ್ಟಂ) ಬಗ್ಗೆ ಅದು ಪೇಟೆಂಟ್ ಪಡೆದುಕೊಂಡಿದ್ದು, ಮನೋವೈಜ್ಞಾನಿಕ ಪ್ರವೃತ್ತಿಯ ಮೂಲಕ ಇದರ ಸದಸ್ಯರು ತಮಗೆ ಸೂಕ್ತವಾದ ಸಂಗಾತಿಯನ್ನು ಆಯ್ದುಕೊಳ್ಳಬಹುದಾಗಿದೆ.

ಇದಕ್ಕಾಗಿ ಸಂಶೋಧಕರು ಆಯಾ ದೇಶಗಳಿಗೆ ಅನುಗುಣವಾದ ಮ್ಯಾಚ್-ಮೇಕಿಂಗ್ ಫಾರ್ಮುಲಾವನ್ನು ಕೂಡ ರಚಿಸಿದ್ದಾರೆ.

ಮೊದಲ ಡೇಟಿಂಗ್‌ಗೆ ಅರ್ಹವಾಗಲು, ಸಂಭಾವ್ಯ ಜೋಡಿಗಳಲ್ಲಿ 29 ಪ್ರಮುಖ ಅಂಶಗಳು ಹೊಂದಾಣಿಕೆಯಾಗಬೇಕು. ಇವುಗಳಲ್ಲಿ ಭಾವನಾತ್ಮಕ, ಮನಸ್ಥಿತಿ, ಸಾಮಾಜಿಕ ಶೈಲಿ, ಬುದ್ಧಿಮತ್ತೆ ಮತ್ತು ಆಧ್ಯಾತ್ಮಿಕ ನಂಬಿಕೆಗಳೇ ಮೊದಲಾದ ಅಂಶಗಳಿರುತ್ತವೆ.

ಈ ಮೂಲಕ ಅತ್ಯಂತ ಸಂತಸಮಯ ಸುದೀರ್ಘಕಾಲದ ಸಂಬಂಧ ಹೊಂದುವ ಸಾಧ್ಯತೆಗಳು ಶೇ.80ರಷ್ಟೂ ಇರುತ್ತದೆಯಂತೆ. ಮನೋವಿಜ್ಞಾನಿ ಗ್ಯಾಲೆನ್ ಬಕ್‌ವಾಲ್ಟರ್ ಅವರನ್ನು ಉಲ್ಲೇಖಿಸಿ ಟೆಲಿಗ್ರಾಫ್ ಪತ್ರಿಕೆ ಈ ವರದಿ ಮಾಡಿದೆ.

ತಮ್ಮ ವ್ಯಕ್ತಿತ್ವದ ಮಾದರಿ ಯಾವುದು, ನಂಬಿಕೆಗಳೇನು, ಮೌಲ್ಯಗಳೇನು ಎಂಬುದನ್ನೆಲ್ಲಾ ತಿಳಿದುಕೊಳ್ಳಲು ಈ ಸಿಸ್ಟಂನ ಸದಸ್ಯರಾದವರಿಗೆ ಸುಮಾರು 256 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರ ಪ್ರೊಫೈಲ್‌ಗಳನ್ನು ಆ ಬಳಿಕ ಹೊಂದಾಣಿಕೆ ಯಂತ್ರದ ಮೂಲಕ ಪರೀಕ್ಷಿಸಲಾಗುತ್ತದೆ. ಈ ಮೂಲಕ ಯಶಸ್ವಿ ದೀರ್ಘಕಾಲಿಕ ಸಂಬಂಧಕ್ಕಾಗಿ ಅತ್ಯುತ್ತಮವಾದ ಜೋಡಿಯನ್ನು ಆರಿಸಬಹುದಾಗಿದೆ.

ಒಬ್ಬ ವ್ಯಕ್ತಿಯ ಭಾವನಾತ್ಮಕ ಮತ್ತು ಸಾಮಾಜಿಕ ಹವ್ಯಾಸಗಳು ಉತ್ತಮ ಸಂಗಾತಿಯನ್ನು ಆಯ್ದುಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಆದರೆ, "ತದ್ವಿರುದ್ಧ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ" ಎಂಬ ಹಳೇ ಸಿದ್ಧಾಂತವನ್ನವರು ಖಡಾಖಂಡಿತವಾಗಿ ತಳ್ಳಿ ಹಾಕುತ್ತಾರೆ. ಮೊದಲ ನೋಟದಲ್ಲಿ ಅದು ನಿಜವಾಗಿರಬಹುದು, ಆದರೆ ದೀರ್ಘಕಾಲಿಕ ಸಂಬಂಧಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಹೇಳುತ್ತಾರೆ ಬಕ್‌ವಾಲ್ಟರ್.

ನಿಮ್ಮಲ್ಲಿ ಮೂಲಭೂತವಾದ ವಿಭಿನ್ನ ನಂಬಿಕೆಗಳಿದ್ದರೆ, ಈ ವಿಭಿನ್ನತೆಗಳನ್ನು ತೊಡೆದುಹಾಕುವುದಕ್ಕಾಗಿಯೇ ಸಾಕಷ್ಟು ಸಮಯ ವ್ಯಯಿಸಬೇಕಾಗುತ್ತದೆ. ಇದು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಸಂಶೋಧಕರು.

Share this Story:

Follow Webdunia kannada