Select Your Language

Notifications

webdunia
webdunia
webdunia
webdunia

ಪ್ರೀತಿಯ ಭಾಷೆ ಕಲ್ತುಕೊಳ್ರೀ....

ಪ್ರೀತಿಯ ಭಾಷೆ ಕಲ್ತುಕೊಳ್ರೀ....
ಅಭಿಮನ್ಯು
WD
ಪ್ರೀತಿ ಮಾಡೋದಂದ್ರೆ ಯಾರದ್ದೇ ಆವಾಜ್ ಅಲ್ಲಿ ಕೆಲಸ ಮಾಡುವುದಿಲ್ಲ. ಈ ಪ್ರೀತಿ ಅನ್ನೋದು, ಎಲ್ಲಿ, ಯಾವಾಗ, ಹೇಗೆ ಮತ್ತು ಯಾರಿಂದ ಹುಟ್ಟುತ್ತದೆ ಎಂಬುದನ್ನು ಹೇಳುವುದು ಭಾರೀ ಕಷ್ಟವೇ. ಕೆಲವೊಮ್ಮೆ ಪ್ರೇಮ ಪುಷ್ಪವು ಅಕ್ಕ ಪಕ್ಕದಲ್ಲಿ ಇರುವವರ ಬಳಿಯಲ್ಲೇ ಅರಳಬಹುದು. ಇನ್ನು ಕೆಲವು ಬಾರಿ, ಸಪ್ತ ಸಾಗರದಾಚೆ ಎಲ್ಲೋ ಇರುವವರನ್ನು ನೀವು ಅತ್ಯಂತ ಇಷ್ಟಪಡಲು, ಬಯಸಲು ಆರಂಭಿಸಬಹುದು. ಇದು ಪ್ರೀತಿಯ ಮಹಿಮೆ.

ಇಲ್ಲಿ ಜಾತಿ, ಧರ್ಮ, ಭಾಷೆ ಅಥವಾ ಸ್ಥಾನ ಇತ್ಯಾದಿಗಳಿಗೆ ಸ್ಥಾನವೇ ಇರುವುದಿಲ್ಲ. ಯಾಕೆಂದ್ರೆ ಪ್ರೀತಿ ಇರೋದು ಇವೆಲ್ಲಕ್ಕಿಂತ ಮೇಲಿನ ಸ್ಥಾನದಲ್ಲಿ. ನೀವು ಅವರ ಮಾತನ್ನು ಕೇಳುವುದಿಲ್ಲ, ಅವರೂ ನಿಮ್ಮ ಮಾತನ್ನು ಕೇಳಲಾರರು... ಇಂಥಹ ವ್ಯಕ್ತಿಯನ್ನೇ ನೀವು ಪ್ರೀತಿಸ್ತೀರಿ ಅನ್ನೋದು ಬೇರೆ ವಿಷಯ. ಒಟ್ಟಿನಲ್ಲಿ ಹೇಳುವುದಾದರೆ, ನಿಮಗೆ ಅವರ ಭಾಷೆ ಗೊತ್ತಿಲ್ಲ, ಅವರಿಗೆ ನಿಮ್ಮ ಭಾಷೆ ತಿಳಿಯಲೊಲ್ಲದು. ಅಬ್ಬಾ... ಎಷ್ಟೊಂದು ಗೊಂದಲ! ಯಾಕಂದ್ರೆ, ಹೇಳಲೂ ಆಗದ, ಹೇಳದಿರಲೂ ಆಗದ ಉಭಯ ಸಂಕಟದ ಪರಮಾವಧಿ ತಲುಪುವುದು ಈ ಪ್ರೇಮ ಎಂಬ ಶಬ್ದದ ಮೂಲಕವೇ. ನೀವೇನೋ ಹೇಳ್ತೀರಿ, ಅವರೇನೋ ತಿಳ್ಕೋತಾರೆ ಅನ್ನೋ ಮಾತು ಅರಿವಿಗೆ ಬರೋದು ಕೂಡ ಇಲ್ಲೇ! ಹಾಗಾಗಿ ಪ್ರೀತಿಯ ಭಾಷೆಯೇ ಅಂಥದ್ದು.

ಸರಿ, ಏನೂ ತೊಂದ್ರೆ ಇಲ್ಲ.... ಯಾಕಂದ್ರೆ, ಪ್ರೀತಿ ಅನ್ನೋದು ಅಷ್ಟು ಕಷ್ಟದ ಕೆಲಸವೂ ಅಲ್ಲವಲ್ಲ. ನೀವು ಯಾರನ್ನಾದರೂ ಪ್ರೀತಿಸಲು ತೊಡಗಿದಾಗ, ಅವರಿಗಾಗಿ ಪ್ರೀತಿಯ ಈ ಭಾಷೆಯನ್ನು ನೀವು ಕಲಿಯಲೇಬೇಕಾಗುತ್ತದಲ್ಲ. ಸ್ವಲ್ಪ ಸಮಯ ಬೇಕಾಗುತ್ತದೆ. ಆದರೂ ಸೈ. ಯಾಕಂದ್ರೆ ಕೆಲಸ ಆಗ್ಬೇಕಾದ್ರೆ ಒಂದಿಷ್ಟು ಕಲಿತುಕೊಳ್ಳಲೇಬೇಕಲ್ಲಾ... ಹೇಗೆ? ನೀವು ನಿಮ್ಮ ಪ್ರಿಯಕರ ಅಥವಾ ಪ್ರೇಯಸಿ ಬಳಿ ತೆರಳಿ ಅವರ ಭಾಷೆಯನ್ನು ಒಂದಷ್ಟು ಕಲಿತುಕೊಂಡು, ಅದರಲ್ಲಿರೋ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಮತ್ತು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಷ್ಟೊಂದು ಪುಟ್ಟ ಶ್ರಮ ವಹಿಸಿ ನೀವು ನಿಮ್ಮ ಹೃದಯದ ಮಾತನ್ನು ಆಕೆಗೆ/ಆತನ ಹೃದಯಕ್ಕೆ ತಲುಪಿಸಿದ್ದೇ ಆದರೆ, ಅಲ್ಲಿಗೆ ಪ್ರೇಮಹಕ್ಕಿಗಳ ಹಾರಾಟ ಭರ್ಜರಿಯಾಗಿಯೇ ಆರಂಭವಾದಂತೆಯೇ... ಇನ್ಯಾಕೆ ತಡ... ಭಾಷೆಯ ಮೇಲೆ ಕ್ಲಿಕ್ ಮಾಡಿ... ಮುಂದುವರಿಯಿರಿ...!

Share this Story:

Follow Webdunia kannada