Select Your Language

Notifications

webdunia
webdunia
webdunia
webdunia

ಉಫ್... ಹ್ಯಾಗಪ್ಪಾ ಮದ್ವೆಗೆ ಪ್ರಪೋಸ್ ಮಾಡೋದು....?!

ಉಫ್... ಹ್ಯಾಗಪ್ಪಾ ಮದ್ವೆಗೆ ಪ್ರಪೋಸ್ ಮಾಡೋದು....?!
PR
PR
ಪ್ರೀತಿ ಮಾಡೋದು ಸುಲಭ, ಆದ್ರೆ ಆ ಪ್ರೀತಿಯನ್ನು ವ್ಯಕ್ತಪಡಿಸೋದಿದೆಯಲ್ಲಾ... ಅಬ್ಬಾ... ಬೇಡಪ್ಪಾ ಬೇಡ ಅನ್ನಿಸಿಬಿಡುತ್ತದೆ. ಅವಕಾಶವೊಂದು ದೊರೆಯುತ್ತದೆ, ಆದರೆ ನೀವು ತಡವರಿಸುತ್ತೀರಿ, ಇನ್ನೊಮ್ಮೆ ನೋಡೋಣ ಅಂತ ಜಾರಿಕೊಂಡುಬಿಡುತ್ತೀರಿ. ತಡಮಾಡಿಬಿಟ್ಟರೆ, ನಿಮ್ಮ ಪ್ರಿಯಕರ/ಪ್ರೇಯಸಿಯು ಬೇರೆಯವರ ಕೈಹಿಡಿದುಕೊಂಡು ತೆರಳುತ್ತಿದ್ದರೆ, ನೀವು ಕೈಕೈ ಹಿಸುಕಿಕೊಳ್ಳಬೇಕಾಗಬಹುದು. ಇಲ್ಲ... ಇಲ್ಲ... ನಿಮಗೆ ಹೀಗಾಗಬಾರದು. ಯಾಕಂದ್ರೆ ಇಲ್ಲಿ ಕೆಲವೊಂದು ರೋಮಾ'ನ್ಸಕ' ಟಿಪ್ಸ್ ಇದೆ, ನಿಮ್ಮ ಪ್ರೀತಿಯು ನಿಮ್ಮ ಕೈತಪ್ಪಿಹೋಗಬಾರದೂಂತ!

1. ನಿಮ್ಮ ಗರ್ಲ್‌ಫ್ರೆಂಡ್‌ಗೆ ರೋಮಾಂಚಕಾರಿ ಕ್ರೀಡೆ, ಅಂದರೆ ರಾಕ್ ಕ್ಲೈಂಬಿಂಗ್ ಅಥವಾ ಅಂಡರ್ ವಾಟರ್ ಡೈವಿಂಗ್ ಮುಂತಾದವುಗಳು ಇಷ್ಟವಿದ್ದರೆ, ಚಾರಣಕ್ಕೆ ಹೋಗಿ, ಯಾವುದೇ ಬೆಟ್ಟದ ತುತ್ತ ತುದಿ ತಲುಪಿ ನಿಮ್ಮ ಪ್ರೀತಿ ವ್ಯಕ್ತಪಡಿಸಬಹುದು. ಇಲ್ಲವೇ, ಸಮುದ್ರ ಸ್ನಾನಕ್ಕೆ ತೆರಳಿದಾಗ ಅಲ್ಲಿರುವ ಮೀನುಗಳ ಮಧ್ಯೆ ಮದುವೆಯ ಪ್ರಸ್ತಾಪ ಇರಿಸಬಹುದು.

2. ಹೇಗಿದ್ರೂ ಇದು ಆಧುನಿಕ ಯುಗ. ಕ್ಯಾಮರಾ ಸಹಿತದ ಮೊಬೈಲ್ ಫೋನ್ ನಿಮ್ಮ ಕೈಯಲ್ಲಿರುತ್ತದೆ. ನಿಮಗೆ ಸಾಕಷ್ಟು ಧೈರ್ಯ ಇದೆ, ಏನಾದರೂ ದೊಡ್ಡ ಕೆಲಸ ಮಾಡ್ಬೇಕೂಂತ ಅನಿಸಿದೆ... ಹಾಗಿದ್ರೆ ನಿಮ್ಮ ಗೆಳತಿ ಜತೆ ಚಲನಚಿತ್ರ ನೋಡುವ ಪ್ಲಾನ್ ಹಾಕಿಕೊಳ್ಳಿ ಮತ್ತು ಚಿತ್ರ ನಡೆಯುತ್ತಿರುವಂತೆಯೇ, 'ಜೀವನಪೂರ್ತಿ ನನ್ನೊಂದಿಗೆ ಇರುವೆಯಾ' ಎಂಬ ಪ್ರಶ್ನೆಯುಳ್ಳ, ಪ್ರೀ ರೆಕಾರ್ಡೆಡ್ ವೀಡಿಯೋ ಒಂದನ್ನು ಆಕೆಗೆ ತೋರಿಸಿ.

3. ನಿಮ್ಮ ಗರ್ಲ್‌ಫ್ರೆಂಡ್ ನೀವಿರುವ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದಾಳೆಂದಾದರೆ, ಎದುರೆದುರೇ ಮನಸು ಬಿಚ್ಚಿಡುವ ಧೈರ್ಯ ಸಾಲದಿದ್ದಲ್ಲಿ ಇಂಟರ್‌ಕಾಮ್ ಮೂಲಕ ಆಕೆಗೆ ಮದುವೆಯ ಪ್ರಸ್ತಾಪ ಮಾಡಿ.

4. ನಿಮ್ಮ ಜೀವದ ಗೆಳತಿ ಪ್ರತಿ ದಿನ ಯಾವ ರಸ್ತೆಯಲ್ಲಿ ಹೋಗುತ್ತಾಳೋ... ಆ ದಾರಿಯಲ್ಲಿರುವ ಹೋರ್ಡಿಂಗ್ ಒಂದನ್ನು ಕೆಲವು ದಿನದ ಮಟ್ಟಿಗೆ ಬಾಡಿಗೆಗೆ ಪಡೆದು, ಅದರಲ್ಲಿ 'ಮೈ ಡಿಯರ್ (ಹೆಸರು)... ವಿಲ್ ಯೂ ಮ್ಯಾರೀ ಮೀ?' ಅಂತ ಬರೆದು ನೋಡಿ.

5. ಬೆಂಬಿಡದೆ ಬರುತ್ತಿರುವ ಮಳೆಗಾಲದಲ್ಲಿ ನೀವು ನಿಮ್ಮ ಗರ್ಲ್‌ಫ್ರೆಂಡನ್ನು ಒಂದು ಲಾಂಗ್ ಡ್ರೈವ್ ಕರೆದುಕೊಂಡು ಹೋಗಿ. ಆ ಸನ್ನಿವೇಶದಲ್ಲಿ ಮದುವೆಯ ಪ್ರಸ್ತಾಪ ಇರಿಸಿ.

Share this Story:

Follow Webdunia kannada