Webdunia - Bharat's app for daily news and videos

Install App

ಉತ್ತಮ ಆರೋಗ್ಯಕ್ಕೆ ವಾಸ್ತು ಟಿಪ್ಸ್

Webdunia
ಸೋಮವಾರ, 10 ಫೆಬ್ರವರಿ 2014 (10:51 IST)
PR
* ಉತ್ತರದ ಕಡೆ ತಲೆಹಾಕಿಕೊಂಡು ನಿದ್ರೆ ಮಾಡಬೇಡಿ. ದಕ್ಷಿಣ ಅಥವಾ ಪೂರ್ವದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗುವುದರಿಂದ ಪ್ರಶಾಂತ ನಿದ್ರೆ ಮತ್ತು ಆರೋಗ್ಯಕರ ಜೀವನ.

* ಕೆಲಸಮಾಡುವಾಗ, ಓದುವಾಗ ಅಥವಾ ಗ್ರಾಹಕರ ಜತೆ ವ್ಯವಹರಿಸುವಾಗ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮುಖವಿರಲಿ. ಉತ್ತರದಿಂದ ಹರಿಯುವ ಆಯಸ್ಕಾಂತೀಯ ಶಕ್ತಿ ನಿಮ್ಮ ಮುಖಕ್ಕೆ ಬಡಿಯುತ್ತದೆ ಮತ್ತು ಕ್ಷಿಪ್ರ ಮತ್ತು ಹರಿತ ಸ್ಮರಣಶಕ್ತಿ ನಿಮ್ಮದಾಗುತ್ತದೆ. ಸೂಕ್ತ ನಿರ್ಧಾರವನ್ನು ಕ್ಷಿಪ್ರಗತಿಯಲ್ಲಿ ತೆಗೆದುಕೊಳ್ಳುತ್ತೀರಿ ಮತ್ತು ಗ್ರಹಣ ಶಕ್ತಿ ಹೆಚ್ಚುತ್ತದೆ.

* ಅಡುಗೆಮಾಡುವಾಗ, ತಿನ್ನುವಾಗ ಅಥವಾ ಕುಡಿಯುವಾಗ ಉತ್ತರದಿಕ್ಕನ್ನು ನಿವಾರಿಸಿ. ಉತ್ತಮ ರುಚಿಗಾಗಿ, ಜೀರ್ಣಶಕ್ತಿಗಾಗಿ ಮತ್ತು ಆರೋಗ್ಯಕರ ದೇಹಕ್ಕಾಗಿ ಪೂರ್ವದ ಕಡೆ ಮುಖವಿರಲಿ.

* ಉತ್ತಮ ಏಕಾಗ್ರತೆ ಮತ್ತು ಭಕ್ತಿಗೆ ಪೂಜೆ ಮಾಡುವಾಗ ಉತ್ತರ ಅಥವಾ ಪೂರ್ವದ ಕಡೆ ಮುಖವಿರಲಿ.

* ಆರೋಗ್ಯ ಮತ್ತು ಸಂತೋಷ ಕಾಯ್ದುಕೊಳ್ಳಲು ಮನೆಯ ಗೋಡೆಗಳಲ್ಲಿ ಒಂದೇ ಬಣ್ಣವನ್ನು ಹಾಕಬೇಡಿ.

* ಹಾಸಿಗೆ ಮುಂಭಾಗದಲ್ಲಿ ಕನ್ನಡಿ ಇಡಬೇಡಿ. ಕೆಟ್ಟ ಕನಸುಗಳನ್ನು ತಪ್ಪಿಸಲು ಕನ್ನಡಿಯಿದ್ದರೆ ಅದನ್ನು ಮುಚ್ಚಿ.

* ಹೊರಹೊಮ್ಮುವ ವಿಕಿರಣದಿಂದ ಕೋಣೆಯ ಪ್ರಭಾವದ ಮಟ್ಟ ನಾಶವಾಗುವುದರಿಂದ ಟಿವಿ ಅಥವಾ ಕಂಪ್ಯೂಟರ‌್‌ನ್ನು ಮಲಗುವ ಕೋಣೆಯಲ್ಲಿ ಬಳಸುವುದನ್ನು ಕಡಿಮೆಮಾಡಿ.

* ವಾಯುವನ್ನು ಶುದ್ಧಗೊಳಿಸಲು ಈಶಾನ್ಯ ದಿಕ್ಕಿನಲ್ಲಿ ತುಳಸಿ ಅಥವಾ ರಬ್ಬರ್ ಗಿಡವನ್ನು ಇಡಿ.

* ಖಿನ್ನತೆ, ಸ್ಮರಣೆ ಕುಂಠಿತ ಮತ್ತು ತಲೆನೋವು ತಪ್ಪಿಸಲು ಬೆಳಕು ಕೆಳಕ್ಕೆ ಬೀಳುವ ಜಾಗದಲ್ಲಿ ಮಲಗಬೇಡಿ.

* ಗರ್ಭವತಿ ಮಹಿಳೆಯರು ಗರ್ಭಪಾತ ತಪ್ಪಿಸಲು ಈಶಾನ್ಯ ಕೋಣೆಯಲ್ಲಿ ನಿದ್ರೆಮಾಡಬಾರದು.

* ನೈರುತ್ಯ ಕಿಟಕಿಗಳ ಬದಲಿಗೆ ಉತ್ತರ ಮತ್ತು ಪೂರ್ವದ ಕಿಟಕಿಗಳನ್ನು ತೆರೆದಿಡುವುದರಿಂದ ಆರೋಗ್ಯ, ಸಂತೋಷ ಮತ್ತು ಕುಟುಂಬದ ಸಾಮರಸ್ಯ ಉಂಟಾಗುತ್ತದೆ.

* ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ತಪ್ಪಿಸಲು ಲೋಹದ ಹಾಸಿಗೆಗಳಲ್ಲಿ ಮಲಗಬೇಡಿ.

* 90 ಡಿಗ್ರಿ ಮ‌ೂಲೆಗಳಿರುವ ಎರಡು ಕಡೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ರಸ್ತೆಗಳಿರುವ ನಿವೇಶನ ಅತ್ಯುತ್ತಮ ನಿವೇಶನ. ಉತ್ತರ ಮತ್ತು ಪೂರ್ವದಲ್ಲಿ ಖಾಲಿ ನಿವೇಶನವು ದಕ್ಷಿಣ ಮತ್ತು ಪಶ್ಚಿಮಕ್ಕಿಂತ ಹೆಚ್ಚಿಗೆಯಿರಬೇಕು.

* ಸೂರ್ಯನ ಬೆಳಕು ಗರಿಷ್ಠ ಬೀಳುವಂತೆ ಮತ್ತು ಗೋಡೆಗಳ ಎದುರುಬದುರು ಕಿಟಕಿಗಳನ್ನು ಇಡುವ ಮ‌ೂಲಕ ತಂಪಾದ ಗಾಳಿ ಒಳಕ್ಕೆ ಪ್ರವೇಶಿಸಿ ಬಿಸಿ ಗಾಳಿ ಹೊರಕ್ಕೆ ಹೋಗಲು ಅವಕಾಶ ನೀಡಬೇಕು.

* ಪೂರ್ವ ಮತ್ತು ಉತ್ತರ, ಈಶಾನ್ಯ ದಿಕ್ಕಿನಲ್ಲಿ ಯಾವುದೇ ರೀತಿಯ ಮರ ಬೆಳೆಸಬಾರದು. ಉತ್ತರ, ಪೂರ್ವ ಮತ್ತು ಈಶಾನ್ಯ ದಿಕ್ಕಿನಲ್ಲಿ ಸಣ್ಣ ಗಿಡವನ್ನು ನೆಡಬೇಕು. ಯಾವುದೇ ಮರದ ನೆರಳು ಮನೆಯ ಮೇಲೆ ಬೀಳಬಾರದು.

* ಒಲೆಯನ್ನು ಪೂರ್ವ ಆಗ್ನೇಯ ದಿಕ್ಕಿನಲ್ಲಿ ವ್ಯವಸ್ಥೆ ಮಾಡಿ, ಅಡುಗೆ ಮಾಡುವವರ ಮುಖ ಪೂರ್ವ ದಿಕ್ಕಿನ ಕಡೆ ಇರಬೇಕು.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments