ಅಳತೆ-ಪ್ರಮಾಣವು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮಹತ್ವಪೂರ್ಣ ಸಿದ್ಧಾಂತ ಮತ್ತು ಆಧಾರವೂ ಆಗಿದೆ. ಅಳತೆ-ಪ್ರಮಾಣ ಮತ್ತು ಹಸ್ತ ಲಕ್ಷಣದ ಮೂಲಕ ಯಾವುದೇ ಭವನ ನಿರ್ಮಾಣದ ವೇಳೆ ವಿನ್ಯಾಸವನ್ನು ರೂಪುಗೊಳಿಸಲಾಗುತ್ತದೆ.
ಭೂಭಾಗದ ಆಕಾರ, ಉದ್ದ, ಎತ್ತರದ ಆಧಾರದಲ್ಲಿ ಅಡಿಪಾಯದಿಂದ ಹಿಡಿದು ನಿಖರವಾದ ಅಳತೆ-ಪ್ರಮಾಣದ ಆಧಾರದಲ್ಲಿ ವಾಸ್ತು ನಿರ್ಧರಿಸಲಾಗುತ್ತದೆ. ಈ ಮೊದಲು ಅಂಗುಲದ ಆಧಾರದಲ್ಲಿ ಅಳತೆ ಮಾಡಲಾಗುತ್ತಿತ್ತು, ಈಗಿನ ಕಾಲದಲ್ಲಿ ಸೆಂಟಿಮೀಟರ್, ಇಂಚು, ಅಡಿ, ಮೀಟರ್ ಅಥವಾ ಗಜಗಳ ಆಧಾರದಲ್ಲಿ ಅಳತೆ ನಿರ್ಧರಿಸಲಾಗುತ್ತದೆ.
ವಸ್ತುವಿನಿಂದ ಯಾವರೀತಿಯಲ್ಲಿ ವಾಸ್ತು ಆಗುತ್ತದೋ, ಅದೇ ರೀತಿ ಯಾವುದೇ ದ್ರವ್ಯದಿಂದ ಕೃತಿ ನಿರ್ಮಾಣವಾಗಬೇಕಿದ್ದರೆ, ಯಾವುದೇ ರೀತಿಯ ಅಳತೆಗೋಲು ಅತ್ಯಗತ್ಯ.