Webdunia - Bharat's app for daily news and videos

Install App

ಫೆಂಗ್‌ಶುಯಿ ಪ್ರಕಾರ ಚಿತ್ರಗಳ ಪಾತ್ರ

Webdunia
ಶುಕ್ರವಾರ, 23 ನವೆಂಬರ್ 2007 (15:34 IST)
ರಶ್ಮಿ ಪೈ

ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಮನೆಯೊಳಗೆ ನಾವಿರಿಸುವಂತಹ ಚಿತ್ರಗಳು ಅಥವಾ ವರ್ಣಚಿತ್ರಗಳು ಅಲ್ಲಿ ವಾಸಿಸುವವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸಿಗೆ ಮುದ ನೀಡುವಂತಹ ಚಿತ್ರಗಳನ್ನು ಭಿತ್ತಿಯಲ್ಲಿ ತೂಗುಹಾಕುವುದರಿಂದ ಮನೆಯೊಳಗೆ ಧನಾತ್ಮಕ ಚೈತನ್ಯವು ಮೂಡಿ ಬರುವುದು ಎಂದು ಶಾಸ್ತ್ರವು ಹೇಳುತ್ತದೆ. ಮಲಗುವ ಕೋಣೆಯಲ್ಲಿ ಉತ್ತಮವಾದ ಚಿತ್ರಗಳು ಅಂದರೆ ನಗುವ ಮಗು, ಹೂವಿನ ಚಿತ್ರಗಳನ್ನಿರಿಸುವುದರಿಂದ ಮನಸ್ಸಿಗೆ ಹಿತಕರವಾಗಿದ್ದು ಚೆನ್ನಾಗಿ ನಿದ್ದೆಮಾಡಲು ಸಹಕಾರಿಯಾಗಿದೆ. ಫೆಂಗ್‌ಶುಯಿ ಪ್ರಕಾರ ಕೋಣೆಯೊಳಗಿರುವ ಚಿತ್ರಗಳು ನಮ್ಮ ಜೀವನದ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತವೆ. ಅಂತಹ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.
. ಈಜುವ ಮೀನಿನ ಚಿತ್ರವು ದೀರ್ಘಕಾಲ ಬಾಳ್ವಿಕೆಯನ್ನು ಪ್ರತಿಬಿಂಬಿಸುತ್ತದೆ.
.
ಕುರಿಮರಿಗಳ ಚಿತ್ರವು ಭಾಗ್ಯದ ಪ್ರತೀಕ.

. ಸೂರ್ಯೋದಯ, ಪರ್ವತಗಳ ಚಿತ್ರಗಳು ಶುಭ ನಿರೀಕ್ಷೆಯನ್ನು ಸೂಚಿಸುತ್ತವೆ.

. ಜಲಪಾತದ ಚಿತ್ರವು ಶುಭದಾಯಕ.

. ನಗುಮುಖದ ವ್ಯಕ್ತಿಗಳ ಪೊಟ್ರೇಟ್‌ಗಳು ಧನಾತ್ಮಕ ಅನುಭವಗಳನ್ನು ಮೈಗೂಡಿಸಲು ಸಹಾಯಕವಾಗುತ್ತದೆ.

. ಕಡು ಬಣ್ಣದ ಅಥವಾ ದಟ್ಟವಾದ ಬಣ್ಣದ ಚಿತ್ರಗಳು ಅನಾರೋಗ್ಯವನ್ನುಂಟುಮಾಡುತ್ತವೆ.

. ರೇಖಾಗಣಿತದ ಆಕೃತಿಗಳನ್ನು ಹೋಲುವ ವರ್ಣ ಚಿತ್ರಗಳು ಮನಸ್ಸಿನ ಮೇಲೆ ಹಾನಿಕರವಾದ ಪರಿಣಾಮಗಳನ್ನು ಬೀರುವುದು.

. ಕಡು ಕೆಂಪು ಬಣ್ಣವನ್ನು ಅತಿಯಾಗಿ ಬಳಸಿದ ವರ್ಣಚಿತ್ರಗಳು ಗೊಂದಲವನ್ನು ಸೃಷ್ಟಿಸುವ ಸಾಧ್ಯತೆಗಳಿರುತ್ತವೆ.

. ಕ್ರೂರ ಮೃಗಗಳ ಅಥವಾ ಭಯಾನಕ ಚಿತ್ರಗಳು ಆರೋಗ್ಯವನ್ನು ಕೆಡಿಸುತ್ತದೆ.

ಹೀಗೆ ಸೂಕ್ತವಾದ ಚಿತ್ರಗಳನ್ನು ಕೋಣೆಯೊಳಗಿರಿವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ದೊರಕುವುದು.

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ಚಾಲೀಸಾ ಮಂತ್ರವನ್ನು ಪಠಿಸಿದರೆ ಈ ಲಾಭವಾಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದೀಪಾವಳಿ ಸಂದರ್ಭದಲ್ಲಿ ಮನೆಯ ಈ ಜಾಗದಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಯಶಸ್ಸು ಸಿಗಬೇಕೆಂದರೆ ದೀಪ ಹಚ್ಚುವಾಗ ಈ ಮಂತ್ರ ಪಠಿಸಿ

Show comments