Webdunia - Bharat's app for daily news and videos

Install App

ನಿಮಗೆ ಫೆಂಗ್‌ಶುಯಿ ಬಗ್ಗೆ ಗೊತ್ತಾ ? ತಿಳಿದುಕೊಳ್ಳಲು ಈ ಲೇಖನ ಓದಿ

Webdunia
ಗುರುವಾರ, 20 ಫೆಬ್ರವರಿ 2014 (11:23 IST)
PR
ಫೆಂಗ್ ಶುಯಿ ಪ್ರಾಚೀನ ಕಲೆ ಮತ್ತು ವಿಜ್ಞಾನವಾಗಿದ್ದು, ಚೀನದಲ್ಲಿ 3000 ವರ್ಷಗಳ ಹಿಂದೆ ಹುಟ್ಟಿದೆ. ಯಾವುದೇ ಸ್ಥಳದ ಶಕ್ತಿಗಳಲ್ಲಿ ಸಮತೋಲನ ಸಾಧಿಸುವ ಮ‌ೂಲಕ ಆರೋಗ್ಯ ಮತ್ತು ಅದೃಷ್ಟವನ್ನು ಗಳಿಸುವ ಜ್ಞಾನವೆಂದು ಫೆಂಗ್‌ಶುಯಿಯನ್ನು ಬಣ್ಣಿಸಲಾಗಿದೆ.

ಫೆಂಗ್ ಶುಯಿ ನಮಗೆ ನಮ್ಮ ಸುತ್ತಮುತ್ತ ಸಾಮರಸ್ಯ ಮತ್ತು ಸಮತೋಲನ ಸಾಧನೆ ಹೇಗೆಂದು ಕಲಿಸುತ್ತದೆಂದು ಸ್ಟಾನ್ಲಿ ಬಾರ್ಲೆಟ್ ತಿಳಿಸಿದ್ದಾರೆ. ಮನೆಗಳು ಮತ್ತು ಉದ್ಯಮಗಳ ವಿನ್ಯಾಸಕ್ಕೆ ದಶಕಗಳ ಕಾಲದ ಕಲೆಯನ್ನು ಅವರು ಬಳಸಿಕೊಳ್ಳುತ್ತಾರೆ. ಸಮಕಾಲೀನ ಕಟ್ಟಡಗಳ ವಿನ್ಯಾಸದಲ್ಲಿ ಫೆಂಗ್‌ಶುಯಿ ಕಲ್ಪನೆಯನ್ನು ವಿನ್ಯಾಸಕಾರರು ಮತ್ತು ಡೆಕೋರೇಟರ್‌ಗಳು ಬಳಸಿಕೊಳ್ಳುತ್ತಿದ್ದಾರೆ. ಫೆಂಗ್‌ಶ್ಯು ಒಳಮನಸ್ಸಿನಿಂದ ಹೊಮ್ಮುವ ಕಲೆ. ವಿನ್ಯಾಸಕಾರರು 'ಚಿ' ಎಂದು ಕರೆಯುವ ಸಕಾರಾತ್ಮಕ ಶಕ್ತಿಯ ಭಾವನೆ ತಮ್ಮಲ್ಲಿ ಉಂಟಾಗುತ್ತದೆಂದು ಹೇಳಿದ್ದಾರೆ. ಆದರೆ ವಿನ್ಯಾಸಕಾರರು ಒಳದನಿಯಿಂದ ಮಾತ್ರ ನಿರ್ದೇಶನ ಪಡೆಯುವುದಿಲ್ಲ.

ಪ್ರಾಚೀನ ಕಲೆಯು ಸುದೀರ್ಘ ಮತ್ತು ಜಟಿಲ ನಿಯಮವು ಆಧುನಿಕ ಮನೆಮಾಲೀಕರನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತದೆ. ಉದಾಹರಣೆಗೆ ನಿಮ್ಮ ಮನೆಯನ್ನು ಡೆಡ್ ಎಂಡ್ ರಸ್ತೆಯ ಕೊನೆಯಲ್ಲಿ ನಿರ್ಮಿಸಬಾರದೆಂಬ ನಿಯಮ ಫೆಂಗ್ ಶುಯಿನಲ್ಲಿದೆ. ಸುತ್ತು ಕಂಬಗಳು ಚೌಕದ ಕಂಬಗಳಿಗಿಂತ ಉತ್ತಮ. ಮೇಲ್ಛಾವಣಿ ಎತ್ತರದಲ್ಲಿರಬೇಕೆಂಬ ನಿಯಮ ಫೆಂಗ್‌ಶುಯಿನಲ್ಲಿದೆ. ಫೆಂಗ್ ಶುಯಿಯನ್ನು ಆಚರಿಸಲು ಅನೇಕ ವಿವಿಧ ದಾರಿಗಳಿವೆಯೆನ್ನುವುದು ಮತ್ತಷ್ಟು ಗೊಂದಲಗೊಳಿಸುತ್ತದೆ.

ಚೀನಾದ ಜನ್ಮಕುಂಡಲಿಯಿಂದ ಮಾಹಿತಿ ಸಂಗ್ರಹ

ಕೋಣೆಗಳ ಅನುಕೂಲಕರ ಸ್ಥಳವನ್ನು ನಿರ್ಧರಿಸಲು ಕಂಪಾಸ್ ಬಳಸಬೇಕು.
ಸುತ್ತಮುತ್ತಲಿನ ನೆಲದ ರೂಪ, ಬೀದಿಗಳು, ತೊರೆಗಳು ಮತ್ತು ಕಟ್ಟಡಗಳನ್ನು ಪರಿಶೀಲಿಸಿ.
ಕೋಣೆಗಳ ಅನುಕೂಲಕರ ಸ್ಥಳದ ರೂಪುರೇಷೆಗೆ ಅಷ್ಟಕೋನದ ರೇಖಾಚಿತ್ರ ಬಾ ಗುವಾ ಬಳಸಿ
ಎಲಕ್ಟ್ರೋಮ್ಯಾಗ್ನೆಟಿಕ್ ವಿಕಿರಣ ಮತ್ತು ವಿಷಕಾರಿ ವಸ್ತುಗಳು ಮುಂತಾದ ಪರಿಸರ ಮಾಲಿನ್ಯ ನಿವಾರಣೆಗೆ ಉನ್ನತ ತಂತ್ರಜ್ಞಾನದ ಸಾಧನ ಬಳಸಿ.


ಆದರೂ ಜಟಿಲವಾದ ಆಚರಣೆಗಳಲ್ಲಿ ಕೂಡ ಸಾಮಾನ್ಯ ಜ್ಞಾನದ ಆಧಾರ ಹೊಂದಿದೆ. ಉದಾಹರಣೆಗೆ ಫೆಂಗ್‌ಶುಯಿ ತತ್ವದಲ್ಲಿ ಅಡುಗೆಮನೆ ಬಾಗಿಲು ಸ್ಟೌವ್‌ಗೆ ಎದುರಾಗಿ ಇರಬಾರದೆನ್ನುವುದು.ಸ್ಟೌವ್‌ ಮುಂದೆ ಕೆಲಸ ಮಾಡುತ್ತಿರುವ ವ್ಯಕ್ತಿ ಬಾಗಿಲಿನ ಹಿಂದೆ ತಿರುಗಿನೋಡಲು ಬಯಸಬಹುದು. ಇದರಿಂದ ಅಹಿತಕರ ಭಾವನೆ ಉಂಟಾಗಿ ಅಪಘಾತಗಳಿಗೆ ಎಡೆಯಾಗಬಹುದು.

ಅತ್ಯಂತ ಜಟಿಲ ನಿಯಮಗಳ ನಡುವೆಯೂ ಫೆಂಗ್‌ಶುಯಿನಲ್ಲಿ ಅನೇಕ ವಿನ್ಯಾಸದ ಶೈಲಿ ಅಳವಡಿಸಲಾಗುತ್ತದೆ. ಸ್ವಚ್ಛ ಮತ್ತು ಅಚ್ಚುಕಟ್ಟಾದ ನೋಟದಿಂದ ಮಾತ್ರ ನಿಮ್ಮ ಮನೆ ಅಥವಾ ಕಟ್ಟಡವನ್ನು ಫೆಂಗ್ ಶ್ಯು ನಿಯಮಗಳಿಗೆ ಅನ್ವಯವಾಗಿ ನಿರ್ಮಿಸಲಾಗಿದೆಯೆಂಬ ಸುಳಿವು ಸಿಗುತ್ತದೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments