Select Your Language

Notifications

webdunia
webdunia
webdunia
webdunia

ಚೀನಿ ವಾಸ್ತು ಶಾಸ್ತ್ರ ಫೆಂಗ್‌ ಶುಯಿ

ಚೀನಿ ವಾಸ್ತು ಶಾಸ್ತ್ರ ಫೆಂಗ್‌ ಶುಯಿ
ಚೀನಾ ಮೂಲದ ಫೆಂಗ್‌ ಶುಯಿ ವಾಸ್ತುಶಾಸ್ತ್ರಕ್ಕೆ ಐದು ಸಹಸ್ರಾಬ್ದಗಳಿಗೂ ಹಿಂದಿನ ಇತಿಹಾಸವಿದೆ. ಈ ಶಾಸ್ತ್ರವು ಗೃಹ ಸಂಬಂಧಿ ವಿಚಾರಗಳಿಗೆ ಪ್ರಾಧಾನ್ಯ ನೀಡಿದೆಯಾದರೂ ಕಲೆ ಮತ್ತು ವೈಜ್ಞಾನಿಕ ಮಹತ್ವ ಹೊಂದಿದೆ.

ಫೆಂಗ್‌ ಶುಯಿಯು ಗಾಳಿ ಮತ್ತು ನೀರಿನ ಅಧ್ಯಯನ ನಡೆಸುವ ಶಾಸ್ತ್ರ. ಭಾರತೀಯ ವಾಸ್ತು ಶಾಸ್ತ್ರದಂತೆ ಇಲ್ಲಿಯೂ ಪಂಚಭೂತಗಳಾದ ವಾಯು, ನೀರು, ಬೆಳಕು, ಭೂಮಿ, ಆಕಾಶಗಳನ್ನು ಅಧ್ಯಯನಕ್ಕೆ ಬಳಸಲಾಗುತ್ತದೆ. ಆದರೆ ನೀರನ್ನು ಐಶ್ವರ್ಯಕ್ಕೆ ಪರ್ಯಾಯವಾಗಿ ಗಾಳಿಯನ್ನು ದಿಕ್ಕುಗಳಿಗೆ ಪರ್ಯಾಯವಾಗಿ ಪರಿಗಣಿಸಲಾಗುವುದು.


ಶುಭ ಹಾಗೂ ಅಶುಭ ಶಕ್ತಿಗಳನ್ನು ಆಧಾವಾಗಿ ಪ್ರವಚಿಸುವ ಶಾಸ್ತ್ರವಾಗಿದ್ದು, ವಾಸಸ್ಥಳದಲ್ಲಿ ಜನರಿಗೆ ಅಶುಭಕಾರಕ ಶಕ್ತಿಗಳನ್ನು ದುರ್ಬಲಗೊಳಿಸುವ ಹಾಗೂ ಶುಭಕಾರಕ ಶಕ್ತಿಗಳನ್ನು ವೃದ್ದಿಸುವ ಸಲಕರಣೆಗಳನ್ನು ಇರಿಸಲು ಶಿಫಾರಸು ಮಾಡುತ್ತದೆ. ಈ ಉದ್ದೇಶಗಳಿಗೆ ಬಹಳಷ್ಟು ಉಪಕರಣಗಳನ್ನು ಶುಭ ಅಥವಾ ಅಶುಭ ಎಂದು ಫೆಂಗ್‌ ಶುಯಿ ಹೆಸರಿಸಿದೆ.

ವಾಸಸ್ಥಳದಲ್ಲಿ ಶುಭಕಾರಕ ಶಕ್ತಿಗಳಿದ್ದರೂ ನಿರ್ದಿಷ್ಟ ಸಲಕರಣೆಯನ್ನು ಫೆಂಗ್‌ಶುಯಿ ಸೂಚನೆಯಂತೆ ಬಳಸಿದರೆ ಅದು ಬಲವರ್ಧಕವಾಗಿ ಬಳಕೆಯಾಗುವುದು ಎಂದು ಶಾಸ್ತ್ರ ಹೆಸರಿಸುತ್ತದೆ. ಚಿತ್ರಪಟಗಳು, ಧ್ವನಿಎಬ್ಬಿಸುವ ಗಂಟೆಗಳು,ಜೋಡಿಹಕ್ಕಿಗಳು, ಡ್ರಾಗನ್‌, ಮೂರು ಕಾಲಿನ ಕಪ್ಪೆ, ನಗುವ ಬುದ್ಧ ಮುಂತಾಗಿ ಈ ಪಟ್ಟಿಯಲ್ಲಿ ಅನೇಕ ವಿಷಯಗಳಿವೆ.

ಮನೆಯ ನಿವೇಶನಗಳನ್ನು ಯಾವ ರೀತಿ ಆಯ್ಕೆ ಮಾಡಬೇಕು. ನಿವೇಶನದಲ್ಲಿ ಎಷ್ಟು ಮೂಲೆಗಳಿರಬೇಕು. ನಿವೇಶನಗಳಲ್ಲಿ ಮನೆ-ಕಟ್ಟಡಗಳನ್ನು ನಿರ್ಮಿಸುವಾಗ ಶುಭಶಕ್ತಿಗಳನ್ನು ಪ್ರಭಾವಗೊಳಿಸಲು ಅನುಸರಿಸಬೇಕಾದ ಕ್ರಮಗಳನ್ನು ಫೆಂಗ್‌ಶುಯಿ ನಿಷ್ಕರ್ಷಿಸುತ್ತದೆ.

Share this Story:

Follow Webdunia kannada