Webdunia - Bharat's app for daily news and videos

Install App

ಜಿಕಾ ವೈರಸ್ ಆತಂಕ!

ಡೆಲ್ಟಾ ಬೆನ್ನಲ್ಲೇ ಕೇರಳದಲ್ಲಿ ಜಿಕಾ ವೈರಸ್ ಆತಂಕ

Webdunia
ಗುರುವಾರ, 8 ಜುಲೈ 2021 (20:57 IST)
ಕೇರಳ : ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಕೇರಳದಲ್ಲಿ ಜಿಕಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ. ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಗುರುವಾರ 13 ಜಿಕಾ ವೈರಸ್ ಪ್ರಕರಣಗಳು ಕಂಡು ಬಂದಿದೆ. ಸೋಂಕು ಪತ್ತೆಯಾದವರ ಸ್ಯಾಂಪಲ್ ಅನ್ನು ಪುಣೆಯ ವೈರಲಾಜಿ ವಿಭಾಗಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಕೂಡ ಇದು ಜಿಕಾ ವೈರಸ್ ಸೋಂಕು ಹರಡಿರುವುದು ಸ್ಪಷ್ಟವಾಗಿದೆ. ಈ ಕುರಿತು ಮಾತನಾಡಿರುವ ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್, 13 ಪ್ರಕರಣಗಳ ಬಗ್ಗೆ ಅನುಮಾನ ವ್ಯಕ್ತವಾಗಿ ಪುಣೆಯ ರಾಷ್ಟ್ರೀಯ ವೈರಲಾಜಿ ಸಂಸ್ಥೆಗೆ ಕಳುಹಿಸಿದ್ದೇವು.



















 ಇದು ಜಿಕಾ ವೈರಸ್ ಸೋಂಕು ಎಂದು ವರದಿ ಬಂದಿದೆ ಎಂದಿದ್ದಾರೆ. ಇನ್ನು ಪತ್ತೆಯಾದ ಎಲ್ಲಾ ಪ್ರಕರಣಗಳು ತಿರುವನಂತರಪುರದಿಂದಲೇ ದಾಖಲಾಗಿದೆ ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಿಕಾ ವೈರಸ್ ಸೋಂಕು ಏಡೆಸ್ ಸೊಳ್ಳೆಯಿಂದ ಹಬ್ಬುತ್ತದೆ. ಬೆಳಗ್ಗಿನ ಹೊತ್ತು ಈ ಸೊಳ್ಳೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಮೊದಲ ಜಿಕಾ ವೈರಸ್ ಪ್ರಕರಣ 1947ರಲ್ಲಿ ಉಗಾಂಡಾದ ಕೋತಿಗಳಲ್ಲಿ ಕಂಡು ಬಂದಿತ್ತು. ಇದಾದ ಬಳಿಕ 1952 ರಲ್ಲಿ ಉಗಾಂಡಾ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ಟಾಂಜಾನಿಯಾದಲ್ಲಿ ಮನುಷ್ಯರಲ್ಲಿ ಕಂಡು ಬಂದಿತ್ತು. ಏಷ್ಯಾ, ಆಫ್ರಿಕಾ, ಅಮೆರಿಕ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಜಿಕಾ ವೈರಸ್ ಹರಡಿರುವುದು ಪತ್ತೆಯಾಗಿದೆ.
ಇನ್ನು ಈ ಜಿಕಾ ವೈಸ್ ಸೋಂಕಿಗೆ ಒಳಗಾದವರಲ್ಲಿ ಸಾಮಾನ್ಯವಾಗಿ ಜ್ವರ, ದದ್ದು, ಸ್ನಾಯು ಸೆಳೆತ, ಕೀಲು ನೋವು, ಅಸ್ವಸ್ಥತೆ ಮತ್ತು ತಲೆ ನೋವಿನ ಲಕ್ಷಣಗಳು ಕಂಡು ಬರುತ್ತದೆ. ಈ ಲಕ್ಷಣಗಳು ಸಾಮಾನ್ಯವಾಗಿ ಎರಡರಿಂದ ಏಳು ದಿನಗಳವರೆಗೆ ಕಾಡುತ್ತದೆ.
ಇನ್ನು ಈ ಏಡಿಸ್ ಸೊಳ್ಳೆಯಿಂದ ಈ ಜಿಕಾ ಸೋಂಕು ಕಂಡು ಬರುತ್ತದೆ. ಇದರಲ್ಲಿ ಏಡಿಸ್ ಏಜಿಪ್ತಿ ಪ್ರಕಾರದ ಸೊಳ್ಳೆಗಳು ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಹಳದಿ ಜ್ವರಕ್ಕೆ ಕೂಡ ಕಾರಣವಾಗುತ್ತದೆ.
ಈ ಸೋಂಕು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ. ಆದರೆ, ಗರ್ಭಿಣಿ ಮಹಿಳೆಯರಲ್ಲಿ ಈ ಸೋಂಕು ಕಂಡು ಬಂದರೆ, ಅದು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಸಾಕಷ್ಟು ಹಾನಿ ಮಾಡುವ ಸಾಧ್ಯತೆ ಹೆಚ್ಚು. ಇದರಿಂದ ನವಜಾತ ಶಿಶುಗಳಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ.
ದೇಶದಲ್ಲಿಯೇ ಮೊದಲ ಕೋವಿಡ್ ಪ್ರಕರಣ ಪತ್ತೆಯಾದ ಕೇರಳದಲ್ಲಿ ಸೋಂಕಿನ ನಿಯಂತ್ರಣವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಸೋಂಕಿನ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗಿ ಕೇರಳ ನಿಂತಿದೆ. ಈ ನಡುವೆ ಕಳೆದ ಹತ್ತು ದಿನಗಳಿಂದ ಕೇರಳದಲ್ಲಿ ಕೋವಿಡ್ ಸಂಕು ಪ್ರಕರಣ ಹೆಚ್ಚುಗೊಂಡಿದೆ. ಜೂನ್ 28ರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಎರಡರಷ್ಟು ಹೆಚ್ಚಿದ್ದು, ಡೆಲ್ಟಾ ಸೋಂಕಿ ಪ್ರಕರಣಗಳು ಕೂಡ ಕಂಡು ಬಂದಿದೆ.  ಇದು ಮೂರನೇ ಅಲೆ ಎಚ್ಚರಿಕೆ ಎನ್ನಲಾಗಿದೆ. ಈ ನಡುವೆ ರಾಜ್ಯದಲ್ಲಿ ಜಿಕಾ ವೈರಸ್ ಪ್ರಕರಣ ಕಂಡು ಬಂದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಾನು ಸತ್ತು ಮನೆಯ ಮಾಲಿಕರನ್ನು ರಕ್ಷಿಸಿದ ಸಾಹಸಿ ನಾಯಿ: ಕೊನೆಯ ಕ್ಷಣದ Video

ಬರಪೀಡಿತ ರೈತರಿಗೆ ಸರ್ಕಾರ ತಕ್ಷಣ 10 ಸಾವಿರ ಕೋಟಿ ರೂ ನೀಡಬೇಕು: ವಿಜಯೇಂದ್ರ

ಯಾರಿಗೂ ಅಸಮಾಧಾನವಿಲ್ಲ, ಯಾರೂ ರಾಜೀನಾಮೆ ನೀಡಲ್ಲ ಎಂದ ಬಿಕೆ ಹರಿಪ್ರಸಾದ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ತನ್ನ ಪಾಡಿಗೆ ನಡೆದು ಹೋಗುತ್ತಿದ್ದ ಬಾಲಕಿ ಅದೊಂದು ಕಾರಣಕ್ಕೆ ಪ್ರಾಣವೇ ಕಳೆದುಕೊಂಡಳು: ಶಾಕಿಂಗ್ Video

ಮುಂದಿನ ಸುದ್ದಿ
Show comments