Webdunia - Bharat's app for daily news and videos

Install App

2022ರಲ್ಲಿ ನಾವು ಕೋವಿಡ್ ಕೊನೆಗಾಣಿಸಬೇಕು: ಡಬ್ಲ್ಯೂಎಚ್ಒ

Webdunia
ಬುಧವಾರ, 22 ಡಿಸೆಂಬರ್ 2021 (20:59 IST)
ಜಿನೇವಾ : ಕೊರೊನಾ ವೈರಸ್ ರೂಪಾಂತರಿ ತಳಿ ಓಮಿಕ್ರಾನ್ ಸೋಂಕು ಜನತೆಯಲ್ಲಿ ಮತ್ತೆ ಭಯ ಹುಟ್ಟಿಸಿದೆ

2022ರಲ್ಲಿ ನಾವು ಕೊರೊನಾ ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ಕೊನೆಗಾಣಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಡಾನೊಮ್ ಗೆಬ್ರೆಯೆಸಸ್ ಕರೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೆಡ್ರೋಸ್, ಎರಡನೇ ಬಾರಿಯೂ ಕೋವಿಡ್ ನೆರಳಿನಲ್ಲೇ ಕ್ರಿಸ್ಮಸ್ ಆಚರಿಸುವಂತಾಗಿದೆ. ಕೊರೊನಾ ಸಾಂಕ್ರಾಮಿಕವನ್ನು ಕೊನೆಗಾಣಿಸಲು ವಿಶ್ವದ ಎಲ್ಲಾ ಸರ್ಕಾರಗಳು ಒಂದಾಗಿ ಕೆಲಸ ಮಾಡಬೇಕು. 2022ರಲ್ಲಿ ನಾವು ಸಂಪೂರ್ಣವಾಗಿ ಕೋವಿಡ್ಗೆ ಅಂತಿಮ ಹಾಡಬೇಕು ಎಂದು ತಿಳಿಸಿದ್ದಾರೆ.

ಮುಂದಿನ ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕ ಕೊನೆಗಾಣಿಸಬೇಕಾದರೆ, 2022ರ ಮಧ್ಯಭಾಗದ ಹೊತ್ತಿಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ. 70 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಈವರೆಗೆ 9 ಕೋವಿಡ್ ಲಸಿಕೆಗಳ ತುರ್ತು ಬಳಕೆಗೆ ಡಬ್ಲ್ಯೂಎಚ್ಒ ಅನುಮೋದನೆ ನೀಡಿದೆ. ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಕೊವೊವ್ಯಾಕ್ಸ್ ಲಸಿಕೆಗೂ ಅನುಮೋದನೆ ನೀಡಲಾಗಿದೆ. ಈ ಲಸಿಕೆಯು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: ಮೊದಲು ಅನಾಮಿಕನ ಗುರುತು ಬಹಿರಂಗಪಡಿಸಲಿ, ಅಶೋಕ್ ಒತ್ತಾಯ

ಉತ್ತರಕಾಶಿಯ ಮೇಘಸ್ಪೋಟದಿಂದ ಸುಧಾರಿಸುತ್ತಿರುವ ಬೆನ್ನಲ್ಳೇ ಜಮ್ಮು, ಕಾಶ್ಮೀರದಲ್ಲಿ ಬೃಹತ್ ಮೇಘಸ್ಫೋಟ

79ನೇ ಸ್ವಾತಂತ್ರ್ಯ ದಿನಾಚರಣೆ: ನವದೆಹಲಿಯಲ್ಲಿ ರೈಲು ನಿಲ್ದಾಣದಲ್ಲೂ ಬಿಗಿ ಭದ್ರತೆ

ಮುಸ್ಲಿಂ ಯುವತಿಯನ್ನು ಹಿಂದೂ ಯುವಕ ಮದುವೆಯಾದಲ್ಲಿ ₹5ಲಕ್ಷ: ಬಸನಗೌಡ ಪಾಟೀಲ್ ಬಿಗ್‌ ಶಾಕ್‌

ಧರ್ಮಸ್ಥಳ: ವರಸೆ ಬದಲಾಯಿಸಿದ ಮಾಸ್ಕ್‌ಮ್ಯಾನ್‌, ಬೇರೆಡೆ ಹೊರಟ ಎಸ್‌ಐಟಿ ತಂಡ

ಮುಂದಿನ ಸುದ್ದಿ
Show comments